ರಾಜಸ್ಥಾನ್ (Rajasthan) ನಿಂದ ಬೆಂಗಳೂರಿಗೆ (Bangalore) ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ,ಕಾಟನ್ ಪೇಟೆ ಪೊಲೀಸರು ಅಬ್ದುಲ್ ರಜಾಕ್ ಗೆ (Abdul razak)ನೊಟೀಸ್ ನೀಡಿದ್ದಾರೆ.

ಮಾಂಸ ಸಾಗಾಟ ಮತ್ತು ಮಾರಾಟದ ನಿಯಮಾವಳಿಗಳ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಗೆ ನೊಟೀಸ್ ಕೊಟ್ಟು, ವಿಚಾರಣೆಗೆ ಕರೆದಿದ್ದಾರೆ.
ಪೊಲೀಸರ ನೊಟೀಸ್ ಹಿನ್ನಲೆ ಬುಧವಾರ ವಿಚಾರಣೆಗೆ ಬರುವುದಾಗಿ ಅಬ್ದುಲ್ ರಜಾಕ್ ತಿಳಿಸಿದ್ದು,ತಮ್ಮ ಬಳಿ ಇರುವ ಮಾಂಸ ಮಾರಾಟದ ಬಗ್ಗೆ ಲೆಸೆನ್ಸ್ ಹಾಗೂ ಇತರೆ ದಾಖಲೆ ಒದಗಿಸುವಂತೆ ನೊಟೀಸ್ ನಲ್ಲಿ ಉಲ್ಲೇಖೀಸಲಾಗಿದೆ.