ಕುಡಿದ ಅಮಲಿನಲ್ಲಿ ಕುಡುಕನೊಬ್ಬ ದೊಡ್ಡ ಚರಂಡಿಯಲ್ಲಿ ಬಿದ್ದಿರುವ ಘಟನೆ ನಡೆದಿದೆ.
30 ಅಡ್ಡಿ ಉದ್ದವಾದ ಹಾಗೂ ವೇಗವಾಗಿ ಹರಿಯುವ ಡ್ರೈನ್ ಪೈಪ್ ನೊಳಗೆ ಆತ ಬಿದ್ದಿದ್ದಾನೆ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ. ಆತನನ್ನು ಪೊಲೀಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಪೊಲೀಸರು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆತ ಕೂಗಿದ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು ಎಚ್ಚೆತ್ತು ರಕ್ಷಿಸಲು ನೆರವಾಗಿದ್ದಾರೆ.