• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಭಾರತ ಸರ್ಕಾರದ ಮೇಲೆ ಭರವಸೆಯಿಲ್ಲ- ಬಾಂಗ್ಲಾ ಹಿಂದೂಗಳ ಆಕ್ರೋಶ

Shivakumar A by Shivakumar A
October 21, 2021
in ವಿದೇಶ
0
ಭಾರತ ಸರ್ಕಾರದ ಮೇಲೆ ಭರವಸೆಯಿಲ್ಲ- ಬಾಂಗ್ಲಾ ಹಿಂದೂಗಳ ಆಕ್ರೋಶ
Share on WhatsAppShare on FacebookShare on Telegram

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆಗೆ ಭಾರತ ಸರ್ಕಾರ ನೀಡಿರುವ ಪ್ರತಿಕ್ರಿಯೆ ಕುರಿತು ಅಲ್ಲಿನ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಬಾಂಗ್ಲಾದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲವಾದರೂ, ಬಿಜೆಪಿ ಕಾಟಾಚಾರಕ್ಕೆ ಮಾತ್ರ ತನ್ನ ಸಹಾನುಭೂತಿ ತೋರುತ್ತಿದೆ. ಬಾಂಗ್ಲಾದೇಶ ಸರ್ಕಾರದ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಬಾಂಗ್ಲಾದೇಶ್ ಜಯಿತೊ ಹಿಂದೂ ಮೊಹಾಜೊತೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಚಂದ್ರ ಪ್ರಮಾಣಿಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ADVERTISEMENT

ದುರ್ಗಾ ಪೂಜೆಯ ಪೆಂಡಾಲ್’ಗಳಲ್ಲಿ ಕುರಾನ್’ಗೆ ಅಪಚಾರವೆಸಗಲಾಗಿದೆ ಎಂಬ ಆರೋಪದಡಿ ಅಕ್ಟೋಬರ್ 13ರ ನಂತರ ಹಲವು ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲಾಗಿತ್ತು. ಸುಮಾರು ಆರು ದಿನಗಳ ಕಾಲ ನಿರಂತರವಾಗಿ ಹಲವೆಡೆ ಈ ದಾಳಿಗಳು ನಡೆದಿದ್ದವು. ಈ ದಾಳಿಗಳನ್ನು ಖಂಡಿಸಿ ಬಾಂಗ್ಲಾದೇಶದ ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. 

ಭಾರತದಲ್ಲಿಯೂ ಹಿಂದೂಪರ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದವು. ಭಜರಂಗದಳ, ವಿಶ್ವ ಹಿಂದೂ ಪರಿಷತ್, ಆರ್‌ಎಸ್ಎಸ್, ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ತೀವ್ರವಾಗಿ ಈ ದಾಳಿಗಳನ್ನು ಖಂಡಿಸಿದ್ದವು. ಆದರೆ, ಸರ್ಕಾರದ ಮಟ್ಟದಲ್ಲಿ ಯಾವ ರೀತಿ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲಾಗಿದೆ ಎಂದು ಗಮನಿಸಿದರೆ, ನಿರಾಶದಾಯಕ ಉತ್ತರ ಸಿಕ್ಕಿದೆ, ಎಂದು ಬಾಂಗ್ಲಾದೇಶದ ಹಿಂದೂ ಸಂಘಟನೆಗಳು ಆರೋಪಿಸಿವೆ. 

ಈ ಕುರಿತಾಗಿ ‘ದಿ ವೈರ್’ಗೆ ಸಂದರ್ಶನ ನೀಡಿರುವ ಗೋಬಿಂದ ಚಂದ್ರ ಪ್ರಮಾಣಿಕ್, ಕಳೆದ ಹಲವು ವರ್ಷಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದಿರುವ ದಾಳಿಗಳಲ್ಲಿ ಆಡಳಿತರೂಢ ಅವಾಮಿ ಲೀಗ್ ನಾಯಕರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಸರ್ಕಾರವು ಕೋಮುವಾದಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವುದು ಈ ಹಿಂದೆಯೂ ಸಾಬೀತಾಗಿದೆ. ಹಾಗಾಗಿ ಇಲ್ಲಿ ಪದೇ ಪದೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ, ಎಂದಿದ್ದಾರೆ. 

“ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದರೂ ಇಲ್ಲಿನ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿಲ್ಲ. ಅಕ್ಟೋಬರ್ 18-19ರಂದು ಕೂಡಾ ಹಿಂದೂಗಳ ಮೇಲೆ ದಾಳಿ ನಡೆಸಲಾಗಿದೆ. ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಸಿರುವ ಸಾಧ್ಯತೆಗಳಿವೆ ಎಂದು ಈಗಾಗಲೇ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಆದರೆ, ಇದು ಸ್ವೀಕಾರಾರ್ಹವಾದ ಉತ್ತರವಲ್ಲ,” ಎಂದು ಅವರು ಹೇಳಿದ್ದಾರೆ. 

ಮುಂದುವರೆದು, ಬಹುತೇಕ ಅವಾಮಿ ಲೀಗ್ ನಾಯಕರು ಬಿಜೆಪಿ, ಆರ್‌ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ತನ್ನು ಭಯೋತ್ಪಾದಕ ಸಂಘಟನೆಗಳಂತೆ ಗುರುತಿಸುವ ಕಾರಣದಿಂದ, ಇಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿಯನ್ನು ಇಷ್ಟಪಡದ ನಾಯಕರು ಸರ್ಕಾರದಲ್ಲಿ ಹೆಚ್ಚಾಗಿರುವುದರಿಂದ ಭಾರತ ಸರ್ಕಾರದ ಮಾತುಗಳಿಗೆ ಇಲ್ಲಿ ಬೆಲೆಯಿಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಆರ್‌ಎಸ್ಎಸ್ ಹಾಗು ವಿ ಹೆಚ್ ಪಿ ಕುರಿತಾಗಿ ಅವಾಮಿ ಲೀಗ್ ನಾಯಕರು ಬೃಹತ್ ಅಭಿಯಾನವನ್ನೇ ಆರಂಭಿಸಿರುವ ಕಾರಣ ಇಲ್ಲಿ ಹಿಂದೂಗಳ ವಿರುದ್ದ ಅಸಹನೆ ಹೆಚ್ಚಾಗಿದೆ, ಎಂದು ಗೋಬಿಂದ್ ಹೇಳಿದ್ದಾರೆ. 

“ಬಾಂಗ್ಲಾದೇಶದ ಹಿಂದೂಗಳು ಭಾರತ ಸರ್ಕಾರದ ನಡವಳಿಕೆಯ ವಿರುದ್ದ ತೀವ್ರವಾದ ಆಕ್ರೋಶವನ್ನು ಹೊಂದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ನೇರವಾಗಿ ಎಚ್ಚರಿಕೆ ನೀಡುವ ಮಟ್ಟಿಗೆ ತಲುಪಿದ್ದರೂ, ಭಾರತ ಸರ್ಕಾರ ಇಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಕನಿಷ್ಟ ಖಂಡಿಸುವ ಹೇಳಿಕೆಯನ್ನೂ ನೀಡಿಲ್ಲ. ಬಾಂಗ್ಲಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿಲ್ಲ. ಬದಲಾಗಿ, ಹಿಂದೂಗಳ ಮೇಲಿನ ದಾಳಿಗೆ ಕ್ರಮ ಕೈಗೊಂಡ ಶೇಖ್ ಹಸೀನಾ ಅವರಿಗೆ ಭಾರತದ ವಿದೇಶಾಂಗ ಇಲಾಖೆ ಅಭಿನಂದನೆ ತಿಳಿಸಿದೆ. ವಿಶ್ವ ಸಂಸ್ಥೆ ಹಾಗೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರದ ಮೌನ ನಿಜಕ್ಕೂ ಬೇಸರ ಮೂಡಿಸಿದೆ,” ಎಂದು ಗೋಬಿಂದ್ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ಇನ್ನು ಭಾರತೀಯ ಮೂಲದ ಹಿಂದೂ ಸಂಸ್ಥೆಗಳ ಬಳಿ ಮನವಿ ಮಾಡಿದರೂ, ಅವರ ನೆರವು ದಕ್ಕದೇ ಇರುವುದು ಮತ್ತಷ್ಟು ನೋವಿಗೆ ಕಾರಣವಾಗಿದೆ ಎಂದು ಹೇಳಿರುವ ಗೋಬಿಂದ್ ಪ್ರಮಾಣಿಕ್, ಬಿಜೆಪಿ, ಆರ್ಎಸ್ಎಸ್ ಹಾಗೂ ವಿ ಹೆಚ್ ಪಿ ಸಂಸ್ಥೆಯೊಂದಿಗೆ ನಿರಂತರವಾಗಿ ನಾವು ಸಂಪರ್ಕದಲ್ಲಿ ಇದ್ದೇವೆ. ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಅವರಲ್ಲಿ ವಿನಂತಿಸಿಕೊಂಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ದಿವಂಗತ ಸುಷ್ಮಾ ಸ್ವರಾಜ್, ಆರ್ಎಸ್ಎಸ್’ನ ಹಿರಿಯ ನಾಯಕ ರಾಮ್ ಮಾಧವ್ ಅವರು ನಮ್ಮ ಕುರಿತಾಗಿ ಅಪಾರ ಸಹಾನುಭೂತಿ ಹೊಂದಿದ್ದರು. ಇತರರು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಮಗೆ ಅರ್ಥವಾಗದ ಯಾವುದೋ ಕಾರಣಕ್ಕಾಗಿ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಹಿಂಜರಿಯುತ್ತಿದ್ದಾರೆ, ಎಂದು ಹೇಳಿದ್ದಾರೆ. 

ಪಶ್ಚಿಮ ಬಂಗಾಳದ ನಾಯಕರಾದ ದಿಲೀಪ್ ಘೋಷ್ ಹಾಗೂ ಸುವೆಂದು ಅಧಿಕಾರಿ ಅಲ್ಪ ಮಟ್ಟಿನ ಬೆಂಬಲವನ್ನು ನಮಗೆ ನಿಡಿದ್ದು ಖುಶಿ ತಂದಿದೆ. ಆದರೆ, ಭಾರತ ಸರ್ಕಾರದ ಮೇಲೆ ನಮಗೆ ಎಳ್ಳಷ್ಟೂ ಭರವಸೆ ಉಳಿದಿಲ್ಲ, ಎಂದು ಗೋಬಿಂದ್ ಅವರು ಹೇಳಿರುವುದು ಆರ್ಎಸ್ಎಸ್ ಹಾಗೂ ಬಿಜೆಪಿಯ ಹಿಂದೂ ಪ್ರೇಮಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ. 

Tags: AttackBangladeshBJPCongress PartyHinduಬಿಜೆಪಿ
Previous Post

ಬಿಜೆಪಿ ನಾಯಕರ ಭಂಡವಾಳ ಹೊರ ತೆಗೆದರೆ ಅವರ ನಿಜವಾದ ಬಣ್ಣ ಬಯಲಾಗುತ್ತದೆ : HDKumarswamy ಗರಂ

Next Post

#BoycottFabIndia ಕರೆ; ಹಿಂದೂಸ್ಥಾನದ ಆತ್ಮಕ್ಕೆ ಧಕ್ಕೆ ತಂದ ಸಂಸದ ತೇಜಸ್ವಿ ಸೂರ್ಯ!

Related Posts

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?
ವಿದೇಶ

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

by ಪ್ರತಿಧ್ವನಿ
April 15, 2026
0

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷಕ್ಕೆ ಅಂತ್ಯ ತರಲು ಅಮೇರಿಕಾ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಪ್ರಯತ್ನಗಳು ಮತ್ತೆ ಚುರುಕುಗೊಳ್ಳುತ್ತಿರುವ ಸೂಚನೆಗಳು ಗೋಚರಿಸುತ್ತಿವೆ. ಇತ್ತೀಚೆಗೆ ನಡೆದ ಮಾತುಕತೆಗಳು ಸ್ಪಷ್ಟ...

Read moreDetails
ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

April 12, 2026
ಆಕ್ರಮಣಕಾರಿ ಆಳ್ವಿಕೆಯತ್ತ ಟ್ರಂಪ್ 2.0

ಭಾರತ-ಪಾಕಿಸ್ತಾನ ಯುದ್ಧ ತಡೆದದ್ದು ನನ್ನಿಂದಲೇ: ಟ್ರಂಪ್ ಪುನಃ ಹೇಳಿದ್ದೇನು ?

April 7, 2026
Next Post
#BoycottFabIndia ಕರೆ; ಹಿಂದೂಸ್ಥಾನದ ಆತ್ಮಕ್ಕೆ ಧಕ್ಕೆ ತಂದ ಸಂಸದ ತೇಜಸ್ವಿ ಸೂರ್ಯ!

#BoycottFabIndia ಕರೆ; ಹಿಂದೂಸ್ಥಾನದ ಆತ್ಮಕ್ಕೆ ಧಕ್ಕೆ ತಂದ ಸಂಸದ ತೇಜಸ್ವಿ ಸೂರ್ಯ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada