ಜನಪ್ರಿಯ ಡಿಜಿಟಲ್ ಚಿನ್ನದ ಹೂಡಿಕೆ ವೇದಿಕೆಯಾದ ‘ಜಾರ್’ (Jar) ಸಂಸ್ಥೆಯ ಮೇಲೆ ಕರ್ನಾಟಕದ ಅಪರಾಧ ತನಿಖಾ ಇಲಾಖೆಯ (CID) ಅಡಿಯಲ್ಲಿ ಬರುವ ‘ಠೇವಣಿ ವಂಚನೆ ತನಿಖಾ ಘಟಕ’ ದಾಳಿ ನಡೆಸಿದೆ.ಗ್ರಾಹಕರ ಆಸ್ತಿಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಲು ತೆಗೆದುಕೊಂಡಿರುವ ಕ್ರಮಗಳ ಕುರಿತು ತನಿಖಾ ಇಲಾಖೆ ವಿವರಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯು ಕೆಲವು ನಿಯಮಗಳನ್ನು ಉಲ್ಲಂಘಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಗ್ರಾಹಕರು ಹೂಡಿಕೆ ಮಾಡುವ ಚಿನ್ನವನ್ನು ಕಂಪನಿಯು ಹೇಗೆ ಸಂಗ್ರಹಿಸಿಡುತ್ತಿದೆ (Gold Storage Practices), ಗ್ರಾಹಕರ ಹಿತರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಕಸ್ಟಡಿಯಲ್ ವ್ಯವಸ್ಥೆಗಳ ಬಗ್ಗೆ ಸ್ಪಷ್ಟತೆ ಪಡೆಯಲು ಸಿಐಡಿ ಈ ತನಿಖೆ ನಡೆಸುತ್ತಿದೆ.

ನಾವು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (BUDS), 2019 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ,” ಎಂದು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಈ ಪ್ರಕರಣ ಸದ್ಯ ನ್ಯಾಯಾಲಯದ ವ್ಯಾಪ್ತಿಯಲ್ಲಿರುವುದರಿಂದ ಪ್ರತಿಕ್ರಿಯಿಸಲು ಕಂಪನಿ ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಾರ್,“ನಾವು ಸಂಪೂರ್ಣವಾಗಿ ಅಧಿಕಾರಿಗಳಿಗೆ ಸಹಕರಿಸುತ್ತಿದ್ದು, ಕೇಳಲಾದ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೇವೆ. ಈ ವಿಷಯವು ಪ್ರಸ್ತುತ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ, ಈ ಹಂತದಲ್ಲಿ ನಿರ್ದಿಷ್ಟ ಆರೋಪಗಳು ಅಥವಾ ವಿವರಗಳ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಕಾನೂನು ಪ್ರಕ್ರಿಯೆಯ ಮೂಲಕ ಸತ್ಯ ಹೊರಬರುತ್ತದೆ ಎಂಬ ವಿಶ್ವಾಸ ನಮ್ಮದಲ್ಲಿದೆ,” ಎಂದು ಹೇಳಿದೆ.

ತನಿಖೆ ನಡೆಯುತ್ತಿದ್ದರೂ, ಕಂಪನಿಯ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ವ್ಯವಹಾರ ಮುಂದುವರಿದಿದೆ ಎಂದು ವರದಿಯಾಗಿದೆ. 2021ರಲ್ಲಿ ಸ್ಥಾಪನೆಯಾದ ಜಾರ್, ದೇಶದ 12,000 ಪಿನ್ಕೋಡ್ಗಳಲ್ಲಿ 3.5 ಕೋಟಿ ಬಳಕೆದಾರರಿಗೆ ಸೇವೆ ನೀಡುತ್ತಿದೆ. ಇತ್ತೀಚೆಗೆ ಸಂಸ್ಥೆ ಲಾಭದ ಹಾದಿಯಲ್ಲಿದೆ ಎಂದು ಪ್ರಕಟಿಸಿದೆ.






