ಧಾರವಾಡ ವಿದ್ಯಾಕಾಶಿ ಎಂದೇ ಹೆಸರಾದ ನಗರ. ಈಗ ಧಾರವಾಡದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ರಾಜ್ಯ ಸರ್ಕಾರ ಗಡಗಡ ನಡುಗಿದೆ.ಖಾಲಿ ಹುದ್ದೆ ಭರ್ತಿ ಮಾಡುತ್ತೇವೆಂದು ಸಿಎಂ ಟ್ವಿಟ್ ಮಾಡಿದ್ದಾರೆ.ಸರ್ಕಾರ ತಕ್ಷಣವೇ ಖಾಲಿ ಇರುವ 2.80 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕು. ತಮಗೆ ಉದ್ಯೋಗ ನೀಡಬೇಕು ಅನ್ನೋ ಒತ್ತಾಯ. ರ್ಯಾಲಿ, ಕಲ್ಲು ತೂರಾಟ ನಡೆದಿದೆ.ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ರೂ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಸಾಗ್ತಾ ಇದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಸಾಥ್ ನೀಡಿದ್ದಾರೆ. ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್ ನಾಯಕರ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿ, ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಧರ್ಭದಲ್ಲಿ ಅರವಿಂದ ಬೆಲ್ಲದ್ ಜುಬಲಿ ಸರ್ಕಲ್ ವ್ರತ್ತದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ನಿಂತಾಗ ವಿದ್ಯಾರ್ಥಿಗಳು ಅರವಿಂದ ಬೆಲ್ಲದ್ ಅವರ ಮಾತು ಕೇಳದಂತೆ ಕೊರಳಲ್ಲಿಹಾಕಿದ ಬಿಜೆಪಿ ಶಾಲನ್ನು ತೆಗಿಯಿರಿ ಎಂದು ಜೋರಾಗಿ ಕಿರುಚುತ್ತಾ ಹೇಳಿದ್ದಾರೆ.

ಬೆಲ್ಲದ ಅವರ ಮೈಕ್ ಪಡೆದು ಉಸ್ತುವಾರಿಗಳು ದಯವಿಟ್ಟು ಮಾತನ್ನು ಕೇಳಿ ಎಂದು ಎಷ್ಟು ಹೇಳಿದರು, ವಿದ್ಯಾರ್ಥಿಗಳು ಬಿಜೆಪಿ ಶಾಲನ್ನು ತೆಗೆಯಿರಿ ಎಂದು ಸನ್ನೆ ಮಾಡುತ್ತಾ ಹೇಳುತ್ತಿರುವುದು ವಿಡಿಯೋಗಳನ್ನು ಸೆರಡ ಹಿಡಿಯಲಾಗಿದೆ.ಈ ಗಲಾಟೆಯ ಮದ್ಯದಲ್ಲಿಯೂ ಸಿದ್ದರಾಮಯ್ಯನವರೇ ಸುಳ್ಳು ಹೇಳಬೇಡಿ. ಸುಳ್ಳುರಾಮಯ್ಯ ಅಂತಾಗಬೇಡಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ತಿಳಿಸಿದ್ದಾರೆ.






