• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೈಸೂರು | ಶ್ರೀರಾಮೇಶ್ವರ ದೇವಾಲಯಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಭಕ್ತರ ಆಗ್ರಹ

ಪ್ರತಿಧ್ವನಿ by ಪ್ರತಿಧ್ವನಿ
September 9, 2023
in Top Story, ಇದೀಗ, ಕರ್ನಾಟಕ
0
ಶ್ರೀರಾಮೇಶ್ವರ ದೇವಾಲಯ

ಶ್ರೀರಾಮೇಶ್ವರ ದೇವಾಲಯ

Share on WhatsAppShare on FacebookShare on Telegram

ನಂಜನಗೂಡಿನಲ್ಲಿರುವ ಶ್ರೀರಾಮೇಶ್ವರ ದೇವಾಲಯ ಮೂಲಭೂತ ಸೌಕರ್ಯಕ್ಕೆ ಭಕ್ತರ ಒತ್ತಾಯ ಮಾಡಿದ್ದಾರೆ ಎಂದು ಶನಿವಾರ (ಸೆಪ್ಟೆಂಬರ್‌ 9) ವರದಿಯಾಗಿದೆ.

ADVERTISEMENT

ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ ದೇಬೂರು ಗ್ರಾಮದ ಶ್ರೀರಾಮೇಶ್ವರ ದೇವಾಲಯ.

ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ಹೊರ ವಲಯದ ಕಪಿಲಾ ನದಿ ತೀರದಲ್ಲಿರುವ ಎಂಟನೇ ಶತಮಾನದ ಪುರಾತನ ಶ್ರೀ ರಾಮೇಶ್ವರ ಹಾಗೂ ಶ್ರೀ ಕಾಮಾಕ್ಷಿ ಅಮ್ಮನವರ ದೇವಾಲಯವಿದೆ.

ಎಂಟನೇ ಶತಮಾನದಲ್ಲಿ ಶ್ರೀ ಭೀಮರಾಯ ಎಂಬುವವರು ಕಟ್ಟಿಸಿದ ಪುರಾತನ ದೇವಾಲಯ ಎಂಬ ಉಲ್ಲೇಖವಿದೆ.

ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯ ಇಲಾಖೆಯ ನಿರ್ಲಕ್ಷಕ್ಕೆ ಒಳಗಾಗಿ ಅವನತಿಯ ಹಂಚಿನಲ್ಲಿದ್ದ ದೇವಾಲಯವನ್ನು ಇತ್ತೀಚೆಗೆ ಟಿವಿಎಸ್ ಸ್ಕೂಟರ್ ಕಂಪನಿಯವರು ಜೀರ್ಣೋದ್ಧಾರ ಗೊಳಿಸಿ ನಿರ್ವಹಣೆ ಹೊಣೆಹೊತ್ತಿದ್ದಾರೆ.

12 ಮಂದಿ ಅರ್ಚಕರು ತಿಂಗಳಿಗೆ ಒಬ್ಬರಂತೆ ಪಾಳಿ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸುತ್ತ ಮುತ್ತಲ ಗ್ರಾಮಗಳು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರನ್ನು ಹೊಂದಿರುವ ಈ ದೇವಾಲಯಕ್ಕೆ ದಿನ ನಿತ್ಯ ಹಾಗೂ ವಿಶೇಷ ದಿನಗಳಲ್ಲಿ ಬಂದು ಸೇವೆ ಸಲ್ಲಿಸುತ್ತಾರೆ.

ಆದರೂ ಈ ದೇವಾಲಯಕ್ಕೆ ಸಾಕಷ್ಟು ಮೂಲಭೂತ ಸೌಕರ್ಯದ ಕೊರತೆಯಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.

ದೇವಾಲಯಕ್ಕೆ ಬರುವ ಭಕ್ತರಿಗೆ ಮಳೆ ಬಿಸಿಲಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಇದರಿಂದ ಭಕ್ತರಿಗೆ ತೊಂದರೆ ಹಾಗೂ ಕಿರಿಕಿರಿ ಆಗುತ್ತಿದೆ ಹಾಗಾಗಿ ಭಕ್ತರ ಅನುಕೂಲಕ್ಕಾಗಿ ಒಂದು ಸಮುದಾಯ ಭವನ ಹಾಗೂ ಅರ್ಚಕರಿಗೆ ವಿಶ್ರಾಂತಿ ಗೃಹದ ಅವಶ್ಯಕತೆ ಇದೆ.

ಅಲ್ಲದೆ ದೇವಾಲಯದ ಕೂಗಳತೆಯಲ್ಲಿರುವ ಮತ್ತೊಂದು ಪುರಾತನ ದೇವಮ್ಮ ದೇವಾಲಯ ಹಾಗೂ ರುದ್ರಪಾದ ಮತ್ತು ಉದ್ಭವ ಬಸವ ಮೂರ್ತಿಗಳಿದ್ದು ಆ ಸ್ಥಳಕ್ಕೆ ಹೋಗಲು ಸಣ್ಣ ಕಿರಿದಾದ ಕಾಲುದಾರಿ ಇದೆ.

ಅವುಗಳ ಜೀರ್ಣೋದರಕ್ಕಾಗಿ ರಸ್ತೆಯ ಅಗತ್ಯವಿದ್ದು ರಸ್ತೆ ನಿರ್ಮಾಣ ಮಾಡಬೇಕಾಗಿದೆ ಮತ್ತು ಭಕ್ತರ ಮುಡಿ ಮತ್ತು ಸ್ನಾನದ ಅನುಕೂಲಕ್ಕಾಗಿ ಕಪಿಲಾ ನದಿ ತೀರದಲ್ಲಿ ಸ್ನಾನಘಟ್ಟ ನಿರ್ಮಾಣ ಆಗಬೇಕಿದೆ.

ಗ್ರಾಮದ ಮುಖ್ಯ ದ್ವಾರದಲ್ಲಿ ಸ್ವಾಗತ ಕಮಾನು ಸೇರಿದಂತೆ ದೇವಾಲಯದ ಮುಂಭಾಗ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಟಾರು ಹಾಕಬೇಕಾಗಿದೆ.

ದೇವಾಲಯದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಕೆಟ್ಟು ನಿಂತು ಹಾಗಾಗಿ ಕಳ್ಳತನಗಳು ಸಹ ನಡೆಯುತ್ತಿವೆ.

ಹಿಂದಿನ ಶಾಸಕ ಹರ್ಷವರ್ಧನ್ ಅವರು ಸುಮಾರು ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ದೇಬೂರಿನಿಂದ ದೇವಾಲಯದವರೆಗೆ ಟಾರ್ ರಸ್ತೆ ಮಾಡಿಸಿದ್ದಾರೆ.

ಈಗಿನ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ದೇವಾಲಯಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯವೂ ಸೇರಿದಂತೆ ಉಳಿದ ಹಾಗೂ ಮುಂದುವರಿದ ಕಾಮಗಾರಿಗಳನ್ನು ಮಾಡಿಸಿ ಕೊಡುವಂತೆ ಅರ್ಚಕರು ಹಾಗೂ ಭಕ್ತರು ಮನವಿ ಮಾಡಿಕೊಂಡಿದ್ದಾರೆ.

ಹಿರಿಯ ಅರ್ಚಕ ಮಹದೇವಪ್ಪ ಮಾತನಾಡಿ ದೇವಾಲಯದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವಂತೆ ಸರ್ಕಾರ ಹಾಗೂ ಶಾಸಕರಲ್ಲಿ ಮನವಿ ಮಾಡಿಕೊಂಡರು.

Tags: MysurunanjanguduSrirameshwara Templeನಂಜನಗೂಡುಮೈಸೂರುಶ್ರೀರಾಮೇಶ್ವರ ದೇವಾಲಯ
Previous Post

ಜೆಡಿಎಸ್ – ಬಿಜೆಪಿ ಮೈತ್ರಿ ಮಾತುಕತೆ ಆರಂಭಿಕ ಹಂತದಲ್ಲಿದೆ: ಎಚ್.ಡಿ.ಕುಮಾರಸ್ವಾಮಿ

Next Post

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ಘೋಷಣೆ ನಿರ್ಧಾರ: ಸಚಿವ ಚಲುವರಾಯಸ್ವಾಮಿ

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post
ಸಚಿವ ಚಲುವರಾಯಸ್ವಾಮಿ

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ಘೋಷಣೆ ನಿರ್ಧಾರ: ಸಚಿವ ಚಲುವರಾಯಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada