ಇದ್ದಕ್ಕಿದ್ದಂತೆ ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಮೂರ್ನಾಲ್ಕು ಹಂದಿಗಳ ಅಲ್ಲಲ್ಲಿ ಸತ್ತು ಬೀಳುತ್ತಿವೆ.
ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯ ಮೇಲುಕಾಮನಹಳ್ಳಿ ಗ್ರಾಮದ ಸುತ್ತಮುತ್ತ 50 ಕ್ಕೂ ಹೆಚ್ಚಿನ ಕಾಡು ಹಂದಿಗಳು ಮೃತಪಟ್ಟಿವೆ. ನಿತ್ಯವೂ ಕಾಡುಹಂದಿಗಳ ಸಾವು ಮರುಕಳಿಸುತ್ತಿರುವುದರಿಂದ ಅಲ್ಲಿನ ಗಿರಿಜನರು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹಾಗೂ ಗಿರಿಜನ ಕಾಲೋನಿಯ ಮನೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಪ್ರತಿನಿತ್ಯ ಹಂದಿಗಳು ಇರುತ್ತಿದ್ದವು. ಇದ್ದಕ್ಕಿದ್ದಂತೆ ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಮೂರ್ನಾಲ್ಕು ಹಂದಿಗಳ ಅಲ್ಲಲ್ಲಿ ಸತ್ತು ಬೀಳುತ್ತಿವೆ. ಕೆಲವೊಮ್ಮೆ ಹಂದಿಗಳ ಸಾವು ತಕ್ಷಣವೇ ಸಾರ್ವಜನಿಕರಿಗೆ ತಿಳಿದು ಬಂದಿವೆ. ಮತ್ತೆ ಹಲವು ಕೊಳೆತು ವಾಸನೆ ಬಂದ ಮೇಲೆ ಹಂದಿಗಳು ಸತ್ತಿದೆ ಎಂಬುದು ತಿಳಿಯುತ್ತಿದೆ.
ಹಂದಿಗಳು ಕಾಯಿಲೆಯಿಂದ ಸಾವನ್ನಪ್ಪುತ್ತಿವೆ ಎಂಬ ಅನುಮಾನ ಶುರುವಾಗಿದ್ದು, ಈ ಕಾಯಿಲೇ ಜನ ಮತ್ತು ಜಾನುವಾರುಗಳಿಗೆ ತಗುಲುತ್ತದೆ ಎಂಬ ಭಯ ಸ್ಥಳೀಯರಲ್ಲಿ ಆವರಿಸಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಂದಿಗಳು ಸಾಯುತ್ತಿದೆ. ಈ ಭಾಗದಲ್ಲಿ ವಿಷ ಪ್ರಾಷನವಾಗಲಿ, ಬೇಟೆಯಾಡುವವರು ಬಳಸುವ ನಾಡಮದ್ದಾಗಲಿ ತಿಂದು ಮೃತಪಟ್ಟಿವೆ ಎಂದಯ ಮೇಲ್ನೋಟಕ್ಕೆ ಕಣಿಸಿಲ್ಲ. ಇದು ಇತರೆ ವನ್ಯಜೀವಿಗಳಿಗೆ ಏನಾದರೂ ತೊಂದರೆಯಾಗಲಿದೆಯೇ ಎಂಬ ಚಿಂತೆಯಲ್ಲಿ ಅರಣ್ಯ ಇಲಾಖೆಯಿದೆ.