ಬಳ್ಳಾರಿ ಜೈಲಿನಲ್ಲಿರುವ (Bellary jail) ನಟ ದರ್ಶನ್ಗೆ (Darshan) MRI ಸ್ಕ್ಯಾನ್ ಮಾಡಿದ್ದು, ದರ್ಶನ್ ಗೆ ಬೆನ್ನುನೋವು ಇರೋದರ ಬಗ್ಗೆ ವೈದ್ಯರು ಮೆಡಿಕಲ್ ರಿಪೋರ್ಟ್ ನಲ್ಲಿ (Darshan medical report) ಉಲ್ಲೇಖಿಸಿದ್ದಾರೆ. ಆದರೆ ಸರ್ಜರಿಯ ಅವಶ್ಯಕತೆ ಇರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಹೌದು, ದರ್ಶನ್ ಬೆನ್ನು ನೋವಿಗೆ ಸರ್ಜರಿ (Surgery) ಅವಶ್ಯಕ ಎಂದು ಈ ವರದಿಯಲ್ಲಿ ಎಲ್ಲಿಯೂ ಉಲ್ಲೇಖ ಮಾಡಿಲ್ಲ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಬಿಮ್ಸ್ ಆಸ್ಪತ್ರೆಯ (BIMS) ಈ ವೈದ್ಯಕೀಯ ರಿಪೋರ್ಟ್ ಜೈಲಾಧಿಕಾರಿಗಳ ಕೈಸೇರಿದೆ.
ಈ ವರದಿಯನ್ನು ಜೈಲಾಧಿಕಾರಿಗಳು ನಾಳೆ ಹೈಕೋರ್ಟ್ಗೆ ಸಲ್ಲಿಕೆ ಮಾಡಲಿದ್ದಾರೆ.ಈ ರಿಪೋರ್ಟ್ ಸಲ್ಲಿಕೆ ಬಾಳಿಕೆ ಎಸ್ಪಿಪಿ ಪ್ರಸನ್ನ ಕುಮಾರ್ (SPP Prasanna kumar) ಆಕ್ಷೇಪಣೆಗೆ ಕಾಲಾವಕಾಶ ಕೇಳಲಿದ್ದಾರೆ. ಜೈಲಾಧಿಕಾರಿಗಳು ಕೊಟ್ಟ ರಿಪೋರ್ಟ್ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.