ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಟೆಕ್ನಿಕಲ್ ಆಗಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಹೀಗಾಗಿ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಸಹಾಯ ಪಡೆದುಕೊಂಡು ಸಿಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆರೋಪಿಗಳ ಮೊಬೈಲ್ ಗೆ ಸಂಬಂಧಿಸಿ ಮೂರು ವಿಧದಲ್ಲಿ ಮಾಹಿತಿ ಸಂಗ್ರಹಕ್ಕೆ ತನಿಖಾ ತಂಡ ಮುಂದಾಗಿದ್ದು,ಪೊಲೀಸರು ಆರೋಪಿಗಳ ಮೊಬೈಲ್ ಸಂಬಂಧ ಸಂಗ್ರಹಿಸಿರುವ ಮಾಹಿತಿ ಹುಬ್ಬೇರಿಸುವಂತಿದೆ. CDR, IPDR, ಹಾಗೂ CAP ಮಾಹಿತಿ ಸಂಗ್ರಹಿಸಿರುವ ಪೊಲೀಸರು ಕೇಸ್ ಮತ್ತಷ್ಟು ಬಿಗಿಗೊಳಿಸಿದ್ದಾರೆ.ಆರೋಪಿಗಳು ಮಾಡಿರುವ ಕರೆಗಳ ವಿವರ,ಯಾರಿಗೆ ಕರೆ ಮಾಡಲಾಗಿದೆ.
ಯಾರ ಜೊತೆ ಎಷ್ಟು ಸಮಯ ಮಾತನಾಡಲಾಗಿದೆ ಎಂಬುದರ ವಿವರ, ಜೊತೆಗೆ IPDR- ಇಂಟರ್ನೆಟ್ ಪ್ರೋಟೋಕಾಲ್ ಡಿಟೇಲ್ಸ್ ರೆಕಾರ್ಡ್ಸ್ ಕೂಡ ಕಲೆಹಾಕಿದ್ದಾರೆ.ಇದರಲ್ಲಿ ಯಾವ ಮೊಬೈಲ್ ನಲ್ಲಿ ಎಷ್ಟು ಸಮಯ ಇಂಟರನೆಟ್ ಬಳಸಲಾಗಿದೆ,ಯಾವ ವೆಬ್ ಸೈಟ್ ಅಥವಾ ಆ್ಯಪ್ ಬಳಸಲಾಗಿದೆ ಎಲ್ಲ ವಿವರಗಳು ಲಭ್ಯವಿರುತ್ತೆ.
ಇನ್ನು CAP- ಸೆಂಟ್ರಾಲೈಸ್ಡ್ ಅಕ್ಸೆಸ್ ಪೋರ್ಟಲ್. ಅಂದ್ರೆಇದು ಎನ್ ಸಿ ಆರ್ ಬಿಯಿಂದ ನಿರ್ವಹಣೆಯಾಗುವ ಪೋರ್ಟಲ್.ದೇಶದ ಯಾವುದೇ ನಾಗರೀಕನ ಮೊಬೈಲ್ ಹಾಗೂ ಅದರಿಂದ ನಡೆಯುವ ಸಂಪೂರ್ಣ ಪ್ರಕ್ರಿಯೆಗಳ ಮಾಹಿತಿಯನ್ನ ಒದಗಿಸುತ್ತದೆ.
ಹೀಗೆ ಮೂರು ವಿಧದಲ್ಲೂ ಮಾಹಿತಿ ಸಂಗ್ರಹಿಸಿರುವ ಪೊಲೀಸರು,ಆರೋಪಿಗಳ ವಿರುದ್ಧ ಸಾಕ್ಷಿಗಳನ್ನ ಬಲಪಡಿಸಲು ಈ ರೀತಿಯಾಗಿ ಸಾಕ್ಷ್ಯ ಸಂಗ್ರಹ ಮಾಡಿದ್ದು, ಆರೋಪಿಗಳಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾದಂತಾಗಿದೆ.