ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಬಳ್ಳಾರಿ ಜೈಲಿನಲ್ಲಿರುವ (Bellary Jail) ನಟ, ಆರೋಪಿ ದರ್ಶನ್ಗೆ ಇವತ್ತು ಮಹತ್ವದ ದಿನ. ಸದ್ಯ ಬೆನ್ನು ನೋವಿನಿಂದ ಕಂಗಾಲಾಗಿರುವ ದರ್ಶನ್ (Actor darshan) ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದು. ಇವತ್ತು ತೀರ್ಪು ಹೊರಬೀಳಲಿದೆ.
ಈಗಾಗಲೇ ಜೈಲಿನಲ್ಲಿ ಫಿಜಿಯೋಥೆರಪಿ ಚಿಕಿತ್ಸೆ ಪಡೆದ್ರೂ, ನೋವು ಕಡಿಮೆ ಆಗ್ತಿಲ್ಲ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದೆ. ಹೀಗಾಗಿ ದರ್ಶನ್ಗೆ ಅಪರೇಷನ್ ಅಗತ್ಯವಿದ್ದು, ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಇದರ ವಾದ-ಪ್ರತಿವಾದ ಮುಕ್ತಾಯವಾಗಿದೆ.
ದರ್ಶನ್ ಆರೋಗ್ಯ ಸ್ಥಿತಿ ಬಗ್ಗೆ, ಚಿಕಿತ್ಸೆಯ ಅಗತ್ಯತೆ ಬಗ್ಗೆ ಹಿರಿಯ ವಕೀಲ ಸಿವಿ ನಾಗೇಶ್ (Cv Nagesh), ಸರ್ಜಿಕಲ್ ಟ್ರೇಟ್ ಮೆಂಟ್ ಅವಶ್ಯಕತೆ ಇದೆ. ಮೂರು ತಿಂಗಳು ಮಧ್ಯಂತರ ಜಾಮೀನು ಕೊಡಿ ಎಂದು ವಾದ ಮಂಡಿಸಿದ್ದಾರೆ. ಆದ್ರೆ, ಇದಕ್ಕೆ ಎಸ್ಪಿಪಿ ಪ್ರಸನ್ನಕುಮಾರ್ (SPP Prasanna kumar) ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಇವತ್ತು ಬೆಳಗ್ಗೆ 10.30 ತೀರ್ಪು ಪ್ರಕಟಿಸಲಿದ್ದಾರೆ.