ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್ ಗೆ (Darshan) ಜಾಮೀನಿನ ಟೆನ್ಶನ್ ಹೆಚ್ಚಾಗಿದೆ. ಈಗಾಗಲೇ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಾದ ಪ್ರತಿವಾದ ಮಂಡನೆಯಾಗಿದ್ದು, ಅಕ್ಟೋಬರ್ 14ಕ್ಕೆ ದರ್ಶನ್ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.
ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi darshan) ದರ್ಶನ್ ನಟನೆಯ ಹಳೆಯ ಸಿನಿಮಾದ ರೀ-ರಿಲೀಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ (Social media) ಹಂಚಿಕೊಂಡಿದ್ದಾರೆ. ಆದ್ರೆ ಈ ಪೋಸ್ಟ್ ಮೂಲಕ ವಿಜಯಲಕ್ಷ್ಮಿ ಪರೋಕ್ಷವಾಗಿ ದರ್ಶನ್ ಬಿಡುಗಡೆಯ ಸಂದೇಶ ನೀಡಿದ್ರಾ ಎಂಬ ಕುತೂಹಲ ಮನೆ ಮಾಡಿದೆ.
ಇತ್ತ ಸೋಮವಾರ ದರ್ಶನ್ ಬೇಲ್ ಭವಿಷ್ಯ ನಿರ್ಧಾರವಾಗಲಿದ್ದು, ಮತ್ತೊಂದೆಡೆ ನವಗ್ರಹ ಸಿನಿಮಾ (Navagraha) ರೀ-ರಿಲೀಸ್ ಕೂಡ ಆಗಲಿದ್ದು, ಆ ಮೂಲಕ ವಿಜಯಲಕ್ಷ್ಮಿ ದರ್ಶನ್ ರ ಬಿಡುಗಡೆಯ ಸುಳಿವು ನೀಡಿದ್ರಾ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಗರಿಗೆದರಿದೆ.