ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ದರ್ಶನ್ ಅರೆಸ್ಟ್ (Darshan arrested) ಆಗಿರುವ ಬಗ್ಗೆ ಇದೀಗ ಮಾಜಿ ಸಚಿವ ಬಿ.ಸಿ ಪಾಟೀಲ್ (X minister BC patil) ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಸಚಿವನಾಗಿದ್ದಾಗ ದರ್ಶನ್ ಕೃಷಿ ರಾಯಭಾರಿಯಾಗಿದ್ದರು. ರೈತರಿಗೆ ಶಕ್ತಿ ತುಂಬಲಿ ಹಾಗೂ ಮಾರ್ಗದರ್ಶನವಾಗಲಿ ಅಂತಾ ಅವರನ್ನ ಬಳಸಿಕೊಂಡಿದ್ದೆವು. ಆದರೆ ಇದು ಯಾರು ಕೂಡಾ ಕ್ಷಮಿಸಲಾರದ ಕೃತ್ಯ. ಹೋಗಿರುವ ಜೀವವಂತು ವಾಪಸ್ಸು ಬರೊಲ್ಲ, ಅವರಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಖಂಡಿತಾ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ.
ಈ ಹಿಂದೆ ಬಿ.ಸಿ ಪಾಟೀಲ್ ಮತ್ತು ದರ್ಶನ್ ರ ನಡುವೆ ಉತ್ತಮ ಬಾಂಧವ್ಯವಿತ್ತು. ಗರಡಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರೂ ಕೂಡ. ವ್ಯವಹಾರಕ್ಕೂ ಮೀರಿ ಸ್ನೇಹಿತರಂತರ ಗುರುತಿಸಿಕೊಂಡಿದ್ದರು. ಇದೀಗ ಈ ಪ್ರಕರಣದ ಬಗ್ಗೆ ಮೌನ ಮುರಿದಿರುವ ಬಿಸಿ ಪಾಟೀಲ್ ಘಟನೆಯನ್ನ ಖಂಡಿಸಿದ್ದಾರೆ.