
ಸಿಎಂ ಸಿದ್ದರಾಮಯ್ಯ (CM Siddaramaiah)ವಿರುದ್ದ ಇಡಿಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿದ್ದರಾಮಯ್ಯ ರಾಜೀನಾಮೆ (Siddaramaiah resigns)ನೀಡಿದರೆ ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದ್ದು, ದಲಿತ ನಾಯಕರಲ್ಲೇ ಸಿಎಂ ಹುದ್ದೆಗೇರಲು ಪೈಪೋಟಿ ಶುರುವಾಗಿದೆ.

ಸಚಿವರಾದ ಸತೀಶ್ ಜಾರಕಿಹೊಳಿ, ಡಾ ಜಿ. ಪರಮೇಶ್ವರ್ ಸಭೆಗಳನ್ನು ಮಾಡುತ್ತಿದ್ರೆ, ಕೆ.ಹೆಚ್. ಮುನಿಯಪ್ಪ ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾಗಿ ಮುಖ್ಯಮಂತ್ರಿ ಹುದ್ದೆಗಾಗಿ ಸೋನಿಯಾ ಗಾಂಧಿ ಭೇಟಿ ಬಳಿಕ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವ ಮುನಿಯಪ್ಪ ಎಡಗೈ ಸಮುದಾಯಕ್ಕೆ ಸಿಎಂ ಹುದ್ದೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಸತತ ಏಳು ಬಾರಿ ಸಂಸದನಾಗಿ ನಿರಂತರ ಗೆಲುವು ಸಾಧಿಸಿ, ಎರಡು ಬಾರಿ ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. 50 ವರ್ಷಗಳ ಸುಧೀರ್ಘ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಪಕ್ಷ ನಿಷ್ಠೆ ತೋರಿಸಿದ್ದೇನೆ. ಹೀಗಾಗಿ ಒಮ್ಮೆಯಾದರೂ ನನ್ನನ್ನ ಪರಿಗಣಿಸಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮುನಿಯಪ್ಪ ಎಡಗೈ ಕಾರ್ಡ್ ಪ್ಲೇ ಮಾಡಿದ್ದು, ತೆರೆಮರೆಯಲ್ಲಿ ಮುನಿಯಪ್ಪ ಸಿಎಂ ಹುದ್ದೆ ಪಡೆಯಲು ಪ್ರಯತ್ನ ಆರಂಭಿಸಿದ್ದಾರೆ. ಆದರೆ ಮಂಡ್ಯದಲ್ಲಿ ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ದಲಿತ ಸಿಎಂ ಆಗ್ತಾರೆ ಅನ್ನೋ ಪ್ರಶ್ನೆಯೇ ಉದ್ಬವಿಸಲ್ಲ ಎಂದಿದ್ದಾರೆ. ಸಿಎಂ ಆಗಿ ಈಗ ಸಿದ್ದರಾಮಯ್ಯ ಇದ್ದಾರೆ. ಹೀಗಿರುವಾಗ ಸಿಎಂ ಚರ್ಚೆ ಅನಾವಶ್ಯಕ ಎಂದಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ ಎಂದಿರುವ ಸತೀಶ್ ಜಾರಕಿಹೊಳಿ, ಪಕ್ಷಕ್ಕಾಗಿ 12 ಗಂಟೆ ದುಡಿತಿದ್ದೀನಿ ಎಂಬ ಹೇಳಿಕೆ ನೀಡಿದ್ದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತಿರುವ ನನ್ನನ್ನ ಪಕ್ಷ ಗುರುತಿಸಬೇಕು. ಯಾರೋ ಕೆಲಸ ಮಾಡದಿದ್ದವರು ಮುಂದೆ ಬರ್ತಾರೆ. ಕೆಲಸ ಮಾಡೋರು ಪಕ್ಷದಲ್ಲಿ ಹಿಂದುಳಿತಿದ್ದಾರೆ.ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸಬೇಕು ಅನ್ನುವ ದೃಷ್ಟಿಯಿಂದ ಆ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.