ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಹಠಾತ್ ಧನಲಾಭದ ಸಾಧ್ಯತೆ ಇದೆ. ಆದರೆ ಕೋಪದ ಮೇಲೆ ನಿಯಂತ್ರಣವಿರಲಿ, ಇಲ್ಲವಾದರೆ ಆತ್ಮೀಯರೊಂದಿಗೆ ಮನಸ್ತಾಪವಾಗಬಹುದು. ಮಾತು ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರು ಇಂದು ದೂರದ ಪ್ರಯಾಣದ ಯೋಜನೆಗಳು ಸಫಲವಾಗುತ್ತವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ಮಾತಿನಲ್ಲಿ ಎಚ್ಚರಿಕೆ ಇರಲಿ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಆರೋಗ್ಯದ ಕಡೆ ಗಮನವಿರಲಿ. ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ. ಯಾರಿಗೂ ಸಾಲ ನೀಡಲು ಹೋಗಬೇಡಿ.
ಕರ್ಕಾಟಕ ರಾಶಿಯ ಇಂದಿನ ಭವಿಷ್ಯ

ಕಟಕ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಕೈಗೂಡಲಿವೆ. ಸಂಗಾತಿಯ ಬೆಂಬಲದಿಂದ ಕಠಿಣ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರು ಇಂದು ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ದಾರಿಗಳು ಗೋಚರಿಸಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳು ನಿಮ್ಮ ಮಾತಿಗೆ ಬೆಲೆ ನೀಡುತ್ತಾರೆ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಓದಿನಲ್ಲಿ ಏಕಾಗ್ರತೆ ಹೆಚ್ಚಲಿದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ಆರೋಗ್ಯ ಸುಧಾರಿಸಲಿದೆ. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರ ಮನೆಯಲ್ಲಿ ಇಂದು ಸುಖ-ಸಂತೋಷದ ವಾತಾವರಣವಿರುತ್ತದೆ. ಸ್ಥಿರಾಸ್ತಿ ಅಥವಾ ವಾಹನ ಖರೀದಿಯ ಬಗ್ಗೆ ಚರ್ಚೆ ನಡೆಯಬಹುದು.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ನಿಮ್ಮ ಆತ್ಮವಿಶ್ವಾಸ ಉತ್ತುಂಗದಲ್ಲಿರುತ್ತದೆ. ಕಿರು ಪ್ರವಾಸಗಳಿಂದ ಲಾಭವಾಗಲಿದೆ. ಒಡಹುಟ್ಟಿದವರಿಂದ ಶುಭ ಸುದ್ದಿ ಕೇಳುವಿರಿ.
ಧನು ರಾಶಿಯ ಇಂದಿನ ಭವಿಷ್ಯ

ಧನು ರಾಶಿಯವರಿಗೆ ಇಂದು ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಆದರೆ ಕುಟುಂಬದ ವಿಚಾರದಲ್ಲಿ ಮೌನವಾಗಿರುವುದು ಒಳಿತು. ರುಚಿಕರ ಭೋಜನ ಸವಿಯುವಿರಿ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರು ಇಂದು ನೀವು ಅತ್ಯಂತ ಕ್ರಿಯಾಶೀಲರಾಗಿರುತ್ತೀರಿ. ದೀರ್ಘಕಾಲದ ಯೋಜನೆಗಳಿಗೆ ಚಾಲನೆ ನೀಡಲು ಇಂದು ಅತ್ಯಂತ ಶುಭ ದಿನ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಅತಿಯಾದ ಖರ್ಚು ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಬಹುದು. ಕಾನೂನು ಸಂಬಂಧಿತ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರಿಗೆ ಇಂದು ಅಪೂರ್ಣಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಆದಾಯದ ಮೂಲಗಳು ಹೆಚ್ಚುತ್ತವೆ.






