ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರು ಇಂದು ಸದ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಮನೆಗೆ ಮಿತ್ರರು ಮತ್ತು ಸಂಬಂಧಿಕರ ಆಗಮನವಾಗಲಿದೆ. ಶುಭ ಕಾರ್ಯದ ಮಾತುಕತೆ ನಡೆಯಲಿದ್ದು, ಸುತ್ತಲೂ ನೆಮ್ಮದಿಯ ವಾತಾವರಣ ಹೆಚ್ಚಾಗಲಿದೆ. ಬಹು ದಿನಗಳಿಂದ ನಿರೀಕ್ಷಿಸುತ್ತಿರುವ ಹಣ ಕೈ ಸೇರಲಿದೆ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರಿಗೆ ಅಧಿಕ ಗಳಿಕೆಗೆ ಇಂದು ಶುಭದಿನವಾಗಿದೆ. ಕಾಸಿನ ವಿಚಾರದಲ್ಲಿ ಹೆಚ್ಚು ಅಭಿವೃದ್ಧಿ ಕಂಡು ಬರುತ್ತದೆ. ಮನೆಯಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ. ಯಾರೊಂದಿಗೂ ಅತಿಯಾದ ಸಲುಗೆ ಬೇಡ..ಸಲ್ಲದ ಕಾರಣಕ್ಕೆ ನಿಮ್ಮ ಹೆಸರು ಹಾಳಾಗಬಹುದು ಎಚ್ಚರ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಆರೋಗ್ಯ ಕೊಂಚ ಏರುಪೇರಾಗಲಿದೆ. ಕುಟುಂಬಸ್ಥರೊಂದಿಗೆ ಸಭೆ-ಸಮಾರಂಭಗಳಿಗೆ ಭೇಟಿ ನೀಡುವಿರಿ. ಕೌಟುಂಬಿಕ ಕಲಹ ಶಮನವಾಗಲಿದೆ. ಇಂದಿನ ಮಹತ್ವದ ಕೆಲಸಕ್ಕೆ ಸ್ನೇಹಿತರ ಸಹಕಾರ ಸಿಗಲಿದೆ.
ಕರ್ಕಾಟಕ ರಾಶಿಯ ಇಂದಿನ ಭವಿಷ್ಯ

ಕರ್ಕಾಟಕ ರಾಶಿಯವರು ಇಂದು ಮಾತಿನಲ್ಲಿ ಅತಿಯಾದ ಎಚ್ಚರಿಕೆ ವಹಿಸಬೇಕು. ನೀವು ಆಡಿದ ತಮಾಷೆ ಮಾತು ಪತಿ ಪತ್ನಿಯರಲ್ಲಿ ವಿರಸವುಂಟು ಮಾಡುವ ಸಾಧ್ಯತೆ ಇದೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭ ದಿನ. ವ್ಯಾಪಾರಿಗಳಿಗೆ ಲಾಭದ ದಿನ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇರುವುದು. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ನೆಮ್ಮದಿ ಹೆಚ್ಚಾಗಲಿದೆ. ಮಕ್ಕಳಿಂದ ಸಿಹಿ ಸುದ್ದಿ ಕೇಳುವಿರಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರು ಇಂದು ತೀರ್ಥಯಾತ್ರೆ ಮಾಡುವ ಯೋಗವಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರ ಸಲಹೆಯನ್ನು ಪಡೆದುಕೊಳ್ಳಿ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ. ವಿಶ್ರಾಂತಿಗಾಗಿ ಸಮಯ ಕೊಡಿ. ಮನೆಯಲ್ಲಿ ಖುಷಿಯ ವಾತಾವರಣ ಇರಲಿದೆ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರ ನಿಗದಿತ ಕಾರ್ಯಗಳೆಲ್ಲ ಸುಲಭವಾಗಿ ಪೂರ್ಣವಾಗುತ್ತದೆ. ಇಂದು ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಪರಿಚಯಸ್ಥರಲ್ಲಿ ಅತಿಯಾದ ಸಲುಗೆ ಬೇಡ. ತಪ್ಪಿ ಆಡಿದ ಮಾತು ಹೆಸರಿಗೆ ಕಂಟಕ ತರಬಹುದು. ರಾಜಕೀಯ ವ್ಯಕ್ತಿಗಳು ಎಚ್ಚರಿಕೆಯಿಂದ ಇರುವುದು ಉತ್ತಮ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರು ಹೊಸ ಕಾರ್ಯ ಆರಂಭಿಸಲು ಇಂದು ಶುಭ ದಿನ. ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ. ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ.
ಧನು ರಾಶಿಯ ಇಂದಿನ ಭವಿಷ್ಯ

ಧನು ರಾಶಿಯವರು ಧಾರ್ಮಿಕ ಮತ್ತು ಮಂಗಳ ಕಾರ್ಯಕ್ರಮಗಳಲ್ಲಿ ಭೇಟಿ ನೀಡುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಇಂದು ಸುವರ್ಣಾವಕಾಶವೊಂದು ಸಿಗಲಿದೆ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರು ಇಂದು ಅಂದುಕೊಂಡ ಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳದೇ ಇರುವುದರಿಂದ ಮಾನಸಿಕ ಚಿಂತೆ ಉಂಟಾಗುವುದು. ತಾಳ್ಮೆ ಇರಲಿ. ನಿಧಾನವಾದರೂ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ಸಂಬಂಧಿ ಸಿಹಿ ಸುದ್ದಿ ಪಡೆಯುವ ಯೋಗವಿದೆ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಅನ್ಯರಿಗೆ ಹಣ ವ್ಯಹಿಸುವುದನ್ನು ಇಂದೇ ನಿಲ್ಲಿಸಿ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯ ವ್ಯಾಪಾರಿಗಳಿಗೆ ಬರಬೇಕಾದ ಬಾಕಿ ಹಣ ಇಂದು ದೊರೆಯಲಿದೆ. ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣ ಇರಲಿದೆ.












