
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದೀಪಕ್ ಜೈಲಿನಿಂದ ರಿಲೀಸ್ ಆಗಿದ್ದಾನೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A-13 ಆಗಿದ್ದ ಆರೋಪಿ ದೀಪಕ್‌ಗೆ ಕಳೆದ ಸೋಮವಾರ ಕೋರ್ಟ್‌ನಲ್ಲಿ ಜಾಮೀನು ಮಂಜೂರಾಗಿತ್ತು.

ಜಾಮೀನು ನೀಡುವಾಗ ಕೋರ್ಟ್ ನೀಡಿದ್ದ ಷರತ್ತುಗಳನ್ನು ಪೂರೈಸಿದ ಬಳಿಕ ಜಾಮೀನು ಆದೇಶ ಪ್ರತಿಯನ್ನು ಬುಧವಾರ ರಾತ್ರಿ ಜೈಲಿಗೆ ಹಾಜರು ಮಾಡಲಾಗಿತ್ತು. ಜೈಲು ಪ್ರಕ್ರಿಯೆಗಳನ್ನು ಮುಗಿಸಿ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಜೈಲಿನಿಂದ ಬಿಡುಗಡೆ ಆದ ಆರೋಪಿ ದೀಪಕ್ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಮಾಧ್ಯಮಗಳ ಎದುರು ಹೇಳುವುದು ಏನು ಇಲ್ಲ. ಎಲ್ಲವನ್ನೂ ಕೋರ್ಟ್‌ನಲ್ಲಿ ಮಾತನಾಡುತ್ತೇನೆ ಎಂದು ಹೇಳಿ ಹೊರಟಿದ್ದಾನೆ.




