ಕರೋನಾ ಪರೀಕ್ಷೆ ಸಂಬಂಧಿ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕರೋನಾ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ಟೆಸ್ಟ್ ಮಾಡಿಸಬೇಕು ಎಂದು ಆದೇಶ ಹೊರಡಿಸಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದ್ದು, ಕೋವಿಡ್ ಸೋಂಕಿನ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಹಿರಿಯ ನಾಗರಿಕರಿಗೆ ( 60 ವರ್ಷ ಮೇಲ್ಪಟ್ಟ) ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರಿಗಾಗಿ ಕರೋನಾ ಪರೀಕ್ಷಾ ಕಾರ್ಯತಂತ್ರವನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶ ಹೊರಡಿಸಿದ್ದಾರೆ.
ಯಾರಿಗೆಲ್ಲ ಪರೀಕ್ಷೆ ಮಾಡಬೇಕು
1) ಕೊರೊನಾ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳು ( ಕೆಮ್ಮು, ಜ್ವರ, ಗಂಟಲು ಕೆರೆತ, ರುಚಿ/ವಾಸನೆಯ ಗ್ರಹಿಕೆ ಕಳೆದುಕೊಂಡವರು
2) ಹಿರಿಯ ನಾಗರಿಕರಿಗೆ ( 60 ವರ್ಷ ಮೇಲ್ಪಟ್ಟ) ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರು.
3) ವಿದೇಶಕ್ಕೆ ತೆರಳುತ್ತಿರುವ ವ್ಯಕ್ತಿಗಳು
4) ವಿದೇಶದಿಂದ ಆಗಮಿಸಿದ ಭಾರತೀಯ ವಿಮಾನ/ನಿಲ್ದಾಣ ಬಂದರುಗಳಿಗೆ ಆಗಮಿಸಿದ ಪ್ರಯಾಣಿಕರಿಗೆ
ಈ ಕೆಳಗೆ ಸಂಪೂರ್ಣ ಮಾರ್ಗಸೂಚಿ ಇದೆ