• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೋಮುವಾದಿ ಸಂಘಟನೆಗಳ ದಾಳವಾಗಿರುವ ಕಾಂಗ್ರೆಸ್‌ ;ಪಿನರಾಯಿ ವಿಜಯನ್‌ ಆರೋಪ

ಪ್ರತಿಧ್ವನಿ by ಪ್ರತಿಧ್ವನಿ
January 4, 2025
in Top Story, ಇತರೆ / Others
0
Share on WhatsAppShare on FacebookShare on Telegram

ಮಲಪ್ಪುರಂ (ಕೇರಳ) : ಕಾಂಗ್ರೆಸ್​​ನ ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜಮಾತ್-ಎ-ಇಸ್ಲಾಮಿ, ಎಸ್​ಡಿಪಿಐನಂತಹ ಕೋಮುವಾದಿ ಸಂಘಟನೆಗಳ ದಾಳವಾಗಿದೆ ಎಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್​ ಆರೋಪಿಸಿದ್ದಾರೆ.ಜಮಾತ್​ ಎ ಇಸ್ಲಾಮಿ ಮತ್ತು ಎಸ್​​ಡಿಪಿಐ ಮೇಲೆ ಭಯೋತ್ಪಾದನೆ, ಕೋಮುಗಲಭೆ ನಡೆಸಿದ ಆರೋಪಗಳನ್ನು ಹೊಂದಿವೆ.

ADVERTISEMENT

ಅಂತಹ ಸಂಘಟನೆಗಳೊಂದಿಗೆ ಮುಸ್ಲಿಂ ಲೀಗ್​ ಕೈಜೋಡಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮಗಳಿಗೆ ಕಾರಣವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಶುಕ್ರವಾರ ಮಲಪ್ಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಪಿಣರಾಯಿ, ಮುಸ್ಲಿಂ ಲೀಗ್ ಕೋಮುವಾದಿ ಶಕ್ತಿಗಳಿಗೆ ಶರಣಾಗುವ ಸ್ಥಿತಿಯಲ್ಲಿದೆ. ಇದೇ ಪ್ರವೃತ್ತಿ ಮುಂದುವರಿದರೆ ಲೀಗ್‌ ಅನ್ನೇ ದುರುಳರು ಕಬಳಿಸುತ್ತಾರೆ. ಇಂತಹ ರಾಜಕೀಯದ ಅಪಾಯವನ್ನು ಗುರುತಿಸಲು ವಿಫಲವಾದರೆ, ಮುಸ್ಲಿಂ ಲೀಗ್ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದರು.

ವಿಪಕ್ಷಗಳ I.N.D.I.A ಕೂಟದ ಮಿತ್ರಪಕ್ಷವಾಗಿರುವ ಕಾಂಗ್ರೆಸ್​​ ವಿರುದ್ಧವೂ ವಾಗ್ದಾಳಿ ನಡೆಸಿರುವ ಕೇರಳ ಸಿಎಂ, ಕೆಲವು ಮತಗಳಿಗಾಗಿ ಕಾಂಗ್ರೆಸ್​​ ಯಾವುದೇ ರಾಜಿಗೂ ಸಿದ್ಧವಾಗುತ್ತದೆ ಎಂದು ಹೇಳುವ ಮೂಲಕ ಆ ಪಕ್ಷವು ಮುಸ್ಲಿಮರ ಅತಿಯಾದ ಓಲೈಕೆಯನ್ನು ಮಾಡುತ್ತಿದೆ ಎಂದು ಟೀಕಿಸಿದರು. ಒಂದು ಸಮುದಾಯದ ಕೆಲವೇ ಮತಗಳಿಗಾಗಿ ಹೊಂದಾಣಿಕೆ ಮಾಡಿಕೊಳ್ಳುವ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ನಿಲುವು ಅಪಾಯಕಾರಿ. ಕಾಂಗ್ರೆಸ್ ನಿಜವಾಗಿಯೂ ಕೋಮುವಾದದ ವಿರುದ್ಧ ಹೋರಾಡುವ ಪಕ್ಷವೆಂದು ಹೇಳಿಕೊಳ್ಳಬಹುದೇ? ಎಂದು ಪಿಣರಾಯಿ ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿದ್ದಾರೆ. ಸಂಘ ಪರಿವಾರದ ಕಾರ್ಯಗಳನ್ನು ಬಹಿರಂಗವಾಗಿ ಪ್ರಶಂಸಿಸುತ್ತಿದ್ದಾರೆ. ಇದೆಲ್ಲವನ್ನೂ ಆ ಪಕ್ಷವು ನಿಯಂತ್ರಿಸಿಲ್ಲ. ಹಿಂದಿನ ತಪ್ಪುಗಳಿಂದ ಆ ಪಕ್ಷವು ಏನನ್ನೂ ತಿದ್ದಿಕೊಂಡಿಲ್ಲ ಎಂದು ಅವರು ಕುಟುಕಿದರು. ಬಿಜೆಪಿಯನ್ನು ಟೀಕಿಸಿದ ವಿಜಯನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಕೇಂದ್ರ ಸರ್ಕಾರವು ಕಾಂಗ್ರೆಸ್​ನ ನೀತಿಗಳನ್ನೇ ಅನುಸರಿಸುತ್ತಿದೆ. ಉದಾರೀಕರಣದಂತಹ ನೀತಿಗಳನ್ನು ಪರಿಚಯಿಸುವುದು ತಪ್ಪು ಎಂದು ಕಾಂಗ್ರೆಸ್​ಗೆ ಈಗಲಾದರೂ ಅರಿವಾಗಿದೆಯೇ ಎಂದು ಕೇಳಿದರು. ಕೇಂದ್ರ ಸರ್ಕಾರವು ತನ್ನ ವೈಫಲ್ಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತದೆ. ರಾಜ್ಯದಲ್ಲಿ ತಮ್ಮ ಸರ್ಕಾರ ಪರ್ಯಾಯ ಉದಾರೀಕರಣ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಹೇಳಿದರು.

Tags: Congress PartyJamaat-e-IslamiKerala Chief Minister Pinarayi VijayanMalappuram (Kerala):Muslim League is in a positionopposition I.N.D.I.A.SDPI
Previous Post

ಬಿಜೆಪಿ ಕಾರ್ಯಕರ್ತರಿಗೆ ಎಳನೀರು & ಚಹಾ ವ್ಯವಸ್ಥೆ ಮಾಡಿದ ಪ್ರಿಯಾಂಕ್ ಖರ್ಗೆ ಅಭಿಮಾನಿಗಳು – ಮುತ್ತಿಗೆ ಹಾಕಲು ಬರುವ ಬಿಜೆಪಿಗರಿಗೆ ಅತಿಥಿ ಸತ್ಕಾರ 

Next Post

ದೆಹಲಿ ಮುಖ್ಯ ಮಂತ್ರಿ ಅತಿಶೀ ವಿರುದ್ದ ಅಲ್ಕಾ ಲಂಬಾ ಕಣಕ್ಕಿಳಿಸಿದ ಕಾಂಗ್ರೆಸ್‌

Related Posts

ವಿಡಿಯೋ ವೈರಲ್‌ ಎಫೆಕ್ಟ್‌: ಯುವತಿಗೆ ʼರೇಟ್ ಎಷ್ಟು?’ ಕೇಳಿದ ಕಿಡಿಗೇಡಿ ಅರೆಸ್ಟ್‌
Top Story

ವಿಡಿಯೋ ವೈರಲ್‌ ಎಫೆಕ್ಟ್‌: ಯುವತಿಗೆ ʼರೇಟ್ ಎಷ್ಟು?’ ಕೇಳಿದ ಕಿಡಿಗೇಡಿ ಅರೆಸ್ಟ್‌

by ಪ್ರತಿಧ್ವನಿ
July 28, 2026
0

ಬೆಂಗಳೂರು: ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಪ್ರಶ್ನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಸ್‌ನಲ್ಲಿ ಕಿರುಕುಳ, ಮೆಟ್ರೋದಲ್ಲಿ ಕಿರುಕುಳ, ಮಾರುಕಟ್ಟೆಯಲ್ಲಿ ಕಿರುಕುಳ ಹೀಗೆ ಕೆಲ ಕಿಡಿಗೇಡಿಗಳಿಂದ ಬೆಂಗಳೂರಿನಂತಹ ಮಹಾನಗರಿಯಲ್ಲಿ...

Read moreDetails
ಕಾಮನ್‌ ವೆಲ್ತ್‌ ಗೇಮ್‌ನಲ್ಲಿ ಕನ್ನಡತಿಯ ಅಭೂತಪೂರ್ವ ಸಾಧನೆ : ಶುಭಹಾರೈಸಿದ ಸಿಎಂ ಡಿಕೆ ಶಿವಕುಮಾರ್

ಕಾಮನ್‌ ವೆಲ್ತ್‌ ಗೇಮ್‌ನಲ್ಲಿ ಕನ್ನಡತಿಯ ಅಭೂತಪೂರ್ವ ಸಾಧನೆ : ಶುಭಹಾರೈಸಿದ ಸಿಎಂ ಡಿಕೆ ಶಿವಕುಮಾರ್

July 28, 2026
ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಶೇ.80 ಸಬ್ಸಿಡಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಶೇ.80 ಸಬ್ಸಿಡಿ: ಇಲ್ಲಿದೆ ಸಂಪೂರ್ಣ ಮಾಹಿತಿ

July 28, 2026
Narendra Modi: ಈ ವಾರವೇ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ: ಕಾರಣವೇನು..?

Narendra Modi: ಈ ವಾರವೇ ಮೈಸೂರಿಗೆ ಪ್ರಧಾನಿ ಮೋದಿ ಭೇಟಿ: ಕಾರಣವೇನು..?

July 28, 2026
ಮೋದಿಗೆ ಅವಮಾನಿಸಿದ ಫೇಸ್‌ ಬುಕ್‌ : ಭಾರತದ ಪ್ರಧಾನಿಗೂ ಬಿತ್ತಾ ಅಂಕುಶ..?

ಮೋದಿಗೆ ಅವಮಾನಿಸಿದ ಫೇಸ್‌ ಬುಕ್‌ : ಭಾರತದ ಪ್ರಧಾನಿಗೂ ಬಿತ್ತಾ ಅಂಕುಶ..?

July 28, 2026
Next Post
ದೆಹಲಿ ಮುಖ್ಯ ಮಂತ್ರಿ ಅತಿಶೀ ವಿರುದ್ದ ಅಲ್ಕಾ ಲಂಬಾ ಕಣಕ್ಕಿಳಿಸಿದ ಕಾಂಗ್ರೆಸ್‌

ದೆಹಲಿ ಮುಖ್ಯ ಮಂತ್ರಿ ಅತಿಶೀ ವಿರುದ್ದ ಅಲ್ಕಾ ಲಂಬಾ ಕಣಕ್ಕಿಳಿಸಿದ ಕಾಂಗ್ರೆಸ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada