ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಈ ಬಾರಿ ಅಳೆದು ತೂಗಿ ಅಭ್ಯರ್ಥಿಗಳನ್ನು ಫೈನಲ್ ಮಾಡಿಕೊಂಡು ಲೋಕ ಸಮರ ಗೆಲ್ಲಲೇಬೇಕು ಅಂತ ಲೆಕ್ಕಾಚಾರಗಳಲ್ಲಿ ತೊಡಗಿದೆ. ಆದ್ರೆ ವಾಸ್ತವದಲ್ಲಿ ಹಲವು ಕ್ಷೇತ್ರಗಳಿಗೆ ಕಾಂಗ್ರೆಸ್ ನಲ್ಲಿ ಸೂಕ್ತ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹೀಗಾಗಿ ಇತರೆ ಪಕ್ಷದ ನಾಯಕರಿಗೆ ಗಾಳ ಹಾಕಿ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಳಸಿದ ಟ್ರಿಕ್ ಅನ್ನೇ ಈಗಲೂ ಬಳಸಲು ಮುಂದಾಗಿದೆ.

ಸದ್ಯ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದು , ಎಲ್ಲಾ ಪ್ರಮುಖ ನಾಯಕರು , ಶಾಕಸ ಸ್ಥಾನ, ಮಂತ್ರಿ ಸ್ಥಾನ ಅಂತ ಆಯಕಟ್ಟಿನ ಪದವಿಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಈಗ ಆ ಸ್ಥಾನ ಬಿಟ್ಟುಕೊಟ್ಟು ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡೋ ಮನಸ್ಸು ಯಾರೊಬ್ಬರಿಗೂ ಇಲ್ಲ. ಹೀಗಾಗಿ ಬಹಳಷ್ಟು ಕಡೆ ಹಾಲಿ ಮಿನಿಸ್ಟರ್ ಗಳನ್ನೇ ಅಭ್ಯರ್ಥಿ ಮಾಡಬೇಕು ಎಂದುಕೊಂಡಿದ್ದ ಕಾಂಗ್ರೆಸ್ ಪ್ಲಾನ್ ಉಲ್ಟಾ ಹೊಡೆದಿದ್ದು , ಎಲ್ಲಿಂದ ಅಭ್ಯರ್ಥಿ ಹುಡುಕಿ ತರೋದು ಅನ್ನೋದೆ ಕಾಂಗ್ರೆಸ್ ಗೆ ಸವಾಲಾಗಿದೆ.

ಒಂದು ಕಡೆ ಪ್ರಭಾವಿ ಸಚಿವರುಗಳ ಮಕ್ಕಳಿಗೆ ಅಥವಾ ಅವರ ಕುಟುಂಬದವರಿಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನ ಸಚಿವರ ಹೆಗಲಿಗೆ ನೀಡುವ ಯೋಚನೆಯಲ್ಲಿರುವ ಕಾಂಗ್ರೆಸ್ , ಮತ್ತೊಂದುಕಡೆ ಬಿಜೆಪಿಯ ಅಸಮಾಧಾನಿತರಿಗೆ ಗಾಳ ಹಾಕಿದೆ. ಯಾರಿಗೆಲ್ಲ ಟಿಕೆಟ್ ಮಿಸ್ ಆಗಿದ್ಯೋ ಅಂಥ ಪ್ರಬಲ ನಾಯಕರನ್ನು ಪಕ್ಷಕ್ಕೆ ಸೆಳೆದು , ಕಾಂಗ್ರೆಸ್ ನಿಂದ ನಿಲ್ಲಿಸಿ ಗೆಲ್ಲಿಸಿಕೊಳ್ಳೋ ಮಾಸ್ಟರ್ ಪ್ಲಾನ್ ಕಾಂಗ್ರೆಸ್ ಪಕ್ಷದ್ದು. ಆದ್ರೆ ವಿಧಾನಸಭಾ ಚುನಾವಣೆಯಲ್ಲಿ ಯಶಸ್ಸು ತಂದುಕೊಟ್ಟ ಈ ರಣತಂತ್ರ ಲೋಕ ಸಮರದಲ್ಲಿ ಎಷ್ಟು ವರ್ಕೌಟ್ ಆಗುತ್ತೋ ಗೊತ್ತಿಲ್ಲ. ಇದೇ ಕಾರಣಕ್ಕೆ 2ನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಕಾಂಗ್ರೆಸ್ ಗೆ ಸವಾಲಾಗಿ ಪರಿಣಮಿಸಿದೆ.