ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ಹಗಲುಗನಸನ್ನು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾಣುತ್ತಾ, ತಮ್ಮ ಕಾಲನ್ನು ತಾವೇ ಎಳೆಯುತ್ತಿದ್ದಾರೆ ಎಂದು ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ಲೇವಡಿ ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದೆ. ದೂರದೃಷ್ಟಿಯ ಯೋಚನೆ, ಆಲೋಚನೆ ಇರಬೇಕು. ರಾಜ್ಯದ ಅಭಿವೃದ್ಧಿಯ ದೂರದೃಷ್ಟಿ ಇಲ್ಲದೇ ಈ ರೀತಿ ಬಾಲಿಷ್ ಹೇಳಿಕೆ ನೀಡುವದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಹಾಗೂ ಡಿಕೆ. ಶಿವಕುಮಾರ ನಡುವಿನ ಗುದ್ದಾಟವೇ ಕಾಂಗ್ರೆಸ್ ಹಡುಗು ಮುಳುಗಲು ಕಾರಣವಾಗುತ್ತದೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಜಿಗಿಯುವರ ಲಿಸ್ಟ್ ನಮ್ಮ ಬಳಿ ಇದೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಹೇಳಿಕೆಗೆ ಕೌಂಟರ್ ನೀಡಿದ ರಾಜೀವ, ಕುಂಬಳ ಕಾಯಿ ಕಳ್ಳ ಎಂದು ಹೇಳಿದರೆ ಹೆಗಲು ಮುಟ್ಟಿಕೊಳ್ಳುವ ಪರಿಸ್ಥಿತಿ ಸಿದ್ದು ಹಾಗೂ ಡಿಕೆಶಿ ಪರಿಸ್ಥಿತಿ ಒದಗಿ ಬಂದಿದೆ. ಬಿಜೆಪಿಯಿಂದ ಯಾರು ಬಿಟ್ಟು ಹೋಗುವದಿಲ್ಲ, 2023 ರಲ್ಲಿ ಬಿಜೆಪಿ ಅತ್ಯಂತ ಪ್ರಬಲ ಪಕ್ಷವಾಗಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕತ್ತಿ ಬಣ, ಜಾರಕಿಹೊಳಿ ಬಣ, ರಾಜೀವ ಬಣ ಯಾವುದೇ ಇಲ್ಲ ಪಕ್ಷದ ಸಂಘಟನೆ ವಿಚಾರವಾಗಿ ಚರ್ಚೆ ನಡೆಸುವದು ಯಾವುದೇ ಬಣ ಎಂದು ಪರಿಗಣಿಸಬಾರದು ಎಂದರು.
ಸಚಿವ ಸ್ಥಾನ ಕುರಿತು ನಾನು ಹೈಕಮಾಂಡ ತೀರ್ಮಾನಕ್ಕೆ ಬದ್ಧ
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಪಿ.ರಾಜೀವ, ಸಚಿವ ಆಕಾಂಕ್ಷಿಗಳು ಪಕ್ಷದ ನಾಲ್ಕು ಗೋಡೆಯೊಳಗೆ ಮಾತನಾಡಲಿ, ಬಹಿರಂಗ ಚರ್ಚೆ ಬೇಡ. ಬಿಜೆಪಿ ಮುಖಂಡರು ಅಳೆದು ತೂಗಿ ತೀರ್ಮಾನ ತಗೆದುಕೊಳ್ಳುತ್ತಾರೆ. ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ಸ್ಪಷ್ಟ ಸೂಚನೆ ನೀಡಿದಂತೆ ಉಳಿದಿರುವ ನಾಲ್ಕು ಸಚಿವ ಸ್ಥಾನವನ್ನು ತುಂಬಲು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.






