ರಾಜ್ಯ ರಾಜಕರಾಣದಲ್ಲಿ ತೀವ್ರ ಗದ್ದಲ ಎಬ್ಬಿಸಿದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನ ಮಾಡಿದ್ದಾರೆ, ಬಂಧನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಗದಗನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಕರ್ನಾಟಕ ಪೊಲೀಸ್ ತನಿಖೆ ಮಾಡೋವಾಗಲೂ ಜಾರ್ಜ್ ಅವರನ್ನು ಬಂಧನ ಮಾಡಲಿಲ್ಲ. ಸಿಬಿಐಗೂ ಕೇಸ್ ವರ್ಗಾವಣೆ ಆದಾಗಲೂ ಅರೆಸ್ಟ್ ಮಾಡಲಿಲ್ಲ. ತನಿಖೆ ಅಧಿಕಾರಿಗಳ ಮೇಲೆ ಡಿಫೆಂಡ್ ಇದೆ. ಈಶ್ವರಪ್ಪ ಅವರನ್ನು ಬಂಧನ ಮಾಡೋದು ಅಥವಾ ತನಿಖೆ ಮಾಡೋದು ಅಧಿಕಾರಿಗಳು ತೀರ್ಮಾನ ಮಾಡ್ತಾರೆ. ಬಂಧನದ ಬಗ್ಗೆ ಮಾತನಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ ಎಂದು ಕಿಡಿಕಾರಿದ್ರು.
ಅವರ ಮಂತ್ರಿಗಳನ್ನು ಅರೆಸ್ಟ್ ಮಾಡಿರಲಿಲ್ಲ. ಈಗ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಅದಕ್ಕೆ ತನಿಖೆ ಮುಗಿಯೋವರೆಗೂ ಸುಮ್ಮನಿರಬೇಕು. ಸಹಕಾರ ಮಾಡಬೇಕು ತನಿಖೆಯಲ್ಲಿ ಸತ್ಯ ಹೊರಗೆ ಬರುತ್ತದೆ. ಅವರು ಎರಡು ದಿನ ಮುಂಚೆಯೇ ರಾಜೀನಾಮೆ ಕೊಡಬೇಕು ಅಂತ ತೀರ್ಮಾನ ಮಾಡಿದ್ರು. ಆದ್ರೆ ಕೆಲವರು ಹಿರಿಯರು ಬೇಡ ಅಂದಿದ್ರು. ಆದರೂ ಯಾರಿಗೂ ನನ್ನಿಂದ ಇರಿಸುಮುರಿಸು ಆಗಬಾರದು ಅಂತ ಅವರೇ ನೈತಿಕತೆಯಿಂದ ಚಿಂತನೆ ಮಾಡಿ ಸ್ವಪ್ರೇರಣೆಯಿಂದ ರಾಜೀನಾಮೆ ಕೊಟ್ಟಿದ್ದಾರೆ.
ಸಂತೋಷ್ ಕುಟುಂಬಕ್ಕೆ ಪರಿಹಾರ ವಿಚಾರವನ್ನು ಬೆಂಗಳೂರಿಗೆ ಹೋಗಿ ಚಿಂತನೆ ಮಾಡ್ತೇನೆ ಎಂದರು. ಇತ್ತಿಚೆಗೆ ಕೆಡಿಪಿ ಮೀಟಿಂಗ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಶಾಸಕ ಕಳಕಪ್ಪ ಬಂಡಿ ಅಕ್ರಮ ಮರಳು ಗಣಿಗಾರಿಕೆ ವಿಚಾರವಾಗಿ ನಡೆದ ಜಟಾಪಟಿ ಕುರಿತು ಪ್ರತಿಕ್ರಿಯಿಸಿ, ಜನರ ಒಳ್ಳೆಯದಕ್ಕಾಗಿ ಚರ್ಚೆಯಾಗ್ತವೆ. ಇವೆಲ್ಲ ಸಹಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈಜವಾಗಿರುವಂತಹದ್ದು ಜನರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದರು.