ನವರಾತ್ರಿ ಹಬ್ಬದ ಪ್ರಯುಕ್ತ ಗುಜರಾತಿನ ಪ್ರಮುಖ ನಗರಗಳಲ್ಲಿ ಆಯೋಜಿಸುತ್ತಿರುವ ಗಾರ್ಭ ನೃತ್ಯ ಕಾರ್ಯಕ್ರಮ ಪಾಸ್ಗಳ ಮೇಲೆ 18% ಜಿಎಸ್ಟಿ ಹೇರಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಎಎಪಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿವೆ.
ಇತ್ತ ಕಾಂಗ್ರೆಸ್ ಹಾಗೂ ಎಎಪಿ ನಾಯಕರು ಗರ್ಭ ಹಾಡಿಗೆ ನೃತ್ಯ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ದ ಆಕ್ರೋಶ ಹೊರಹಾಕಿವೆ.
ಇತ್ತ ಕಾಂಗ್ರೆಸ್ ಹಾಗೂ ಎಎಪಿ ನಾಯಕರು ಗಾರ್ಭ ನೃತ್ಯಗಾರರ ಜೊತೆ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ನಾಯಕರನ್ನು ಬಂಧಿಸಿದ್ದ ಪೊಲೀಸರು ನಂತರ ಬಿಟ್ಟು ಕಳುಹಿಸಿದ್ದಾರೆ.
ಇದು ಹಿಂದೂ ಸಂಪ್ರದಾಯದ ನಂಬಿಕೆಯಾಗರುವ ಕಾರಣ ಜನರ ನಂಬಿಕೆ ಮೇಲೆ ತೆರಿಗೆ ಹೇರುತ್ತಿರುವುದನ್ನು ನೋಡಿದರೆ ಬಿಜೆಪಿಯ ಕೆಟ್ಟ ಮನಸ್ಥಿತಿಯನ್ನು ಬಿಂಬಿಸುತ್ತಿದೆ ನಮ್ಮ ದೇವರನ್ನು ನಾವು ಪೂಜಿಸಲು ತೆರಿಗೆ ಕಟ್ಟಬೇಕು ಎಂದರೆ ಅದು ಏನು ಅರ್ಥ ನಾವು ಇದನ್ನು ಖಂಡಿಸುತ್ತೇವೆ ಮತ್ತು ಈ ಕೂಡಲ್ಲೇ ಇದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ಗೆ ಪತ್ರ ಬರೆದಿವೆ.
ಪ್ರತಿಪಕ್ಷಗಳ ಪ್ರತಿಭಟನೆಯನ್ನು ಖಂಡಿಸಿರುವ ಬಿಜೆಪಿ 2017ರಿಂದಲೂ ಸಹ ಗಾರ್ಭ ಮೇಲೆ ತೆರಿಗೆ ಸಂಗ್ರಹಿಸಲಾಗುತ್ತಿದೆ. ಬಿಜೆಪಿಯೇತರ ಸರ್ಕಾವಿರುವ ರಾಜ್ಯಗಳಲ್ಲಿಯೂ ಸಹ ಗಾರ್ಭ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಜಿತು ವಘಾನಿ ತಿಳಿಸಿದ್ದಾರೆ.






