ಮೈಸೂರಲ್ಲಿ ಮುಡಾ ವಿಚಾರದಲ್ಲಿ ಬಿಜೆಪಿ ಕೆ.ಆರ್ ಕ್ಷೇತ್ರದ ಶಾಸಕ ದಿನ ಬೆಳಗ್ಗೆ ಎದ್ದು ಮಾತನಾಡುತ್ತಾರೆ. ಅಷ್ಟು ಸೈಟು ಇಷ್ಟು ಕೋಟಿ ಹಗರಣ ಅಂತಾರೆ. ಸ್ವಲ್ಪ ಪಟ್ಟಿ ಬಿಡುಗಡೆ ಮಾಡಿ, ನಿಮ್ಮ ಕ್ಷೇತ್ರದ ಹಿಂದಿನ ಎಂಎಲ್‌ಎ ಸೈಟುಗಳು ಎಷ್ಟಿದೆ..? ಜಿಟಿ ಸೈಟುಗಳು ಎಷ್ಟು..? ನಿಮ್ಮ ಪಕ್ಷದ ಬೆಂಗಳೂರು ನಾಯಕರ ಸೈಟು ಎಷ್ಟು..? ಎಲ್ಲವನ್ನೂ ಹೇಳಿ ಎಂದು ಶಾಸಕ ಶ್ರೀವತ್ಸಗೆ ಎಂ.ಲಕ್ಷ್ಮಣ್ ಸವಾಲ್ ಹಾಕಿದ್ದಾರೆ.
ಬಿಜೆಪಿಯಲ್ಲಿ ವೀಕೆಸ್ಟ್ ವಿರೋಧ ಪಕ್ಷದ ನಾಯಕ ಅಂದ್ರೆ ಆರ್ ಅಶೋಕ್ ಆಗಿದ್ದಾರೆ ಎಂದಿರುವ ಅವರು. ಮೈಸೂರು ಜಿಲ್ಲಾ ಕಾಂಗ್ರೆಸ್‌ನಿಂದ ಬೆಂಗಳೂರು ಬಿಜೆಪಿ ಕಚೇರಿಗೆ ಹೋಗುವ ಚಾಲೆಂಜ್ ಹಾಕ್ತೇವೆ. ಡಿಸೆಂಬರ್ 1 ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ಬಿಜೆಪಿ ಕಚೇರಿಗೆ ಬರುತ್ತೇವೆ. ಮುಡಾ ಚರ್ಚೆಗೆ ಸಿದ್ಧ ಇರಿ ಎಂದು ಸವಾಲು ಹಾಕಿದ್ದಾರೆ.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ ಬಿ.ಜೆ ವಿಜಯಕುಮಾರ್ ಚಾಲೆಂಜ್ ಮಾಡಿದ್ದು, ಬೆಂಗಳೂರಿನ ಮಲ್ಲೇಶ್ವರಂ ಕಚೇರಿಗೆ ಬಂದು ವಕ್ಫ್, ಬಿಪಿಎಲ್ ಕಾರ್ಡ್ ಬಗ್ಗೆ ಚರ್ಚೆ ಮಾಡುತ್ತೇವೆ. ದಾಖಲೆಗಳ ಸಮೇತ ಮೈಸೂರು ಜಿಲ್ಲಾ ಕಾಂಗ್ರೆಸ್‌ನಿಂದ ಚರ್ಚೆಗೆ ಬರುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಸೇರಿ ಎಲ್ಲರೂ ಚರ್ಚೆಗೆ ಬನ್ನಿ ಎಂದಿದ್ದಾರೆ.
ಈ ಬಗ್ಗೆ ಮೈಸೂರು ಜಿಲ್ಲಾ ಕಾಂಗ್ರೆಸ್‌ನಿಂದ ಬಿಜೆಪಿ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿದ್ದು, ಈ ಸವಾಲನ್ನು ಸ್ವೀಕರಿಸಬೇಕು, ಬಿಜೆಪಿ ನಾಯಕರು ಚರ್ಚೆಗೆ ಬರಬೇಕು. ಇಲ್ಲವಾದರೆ ನಿಮ್ಮ ಆಪಾದನೆಗಳು ಸುಳ್ಳು ಅಂತಾ ಒಪ್ಪಿಕೊಳ್ಳಬೇಕು ಎಂದು ಛೇಡಿಸಿದ್ದಾರೆ.