
ಪಡಿತರ ಪಡೆಯಬೇಕೆಂದರೆ ನ್ಯಾಯಬೆಲೆ ಅಂಗಡಿಯಲ್ಲಿ 10 ರುಪಾಯಿ ಕೊಟ್ಟು ಹೆಬ್ಬೆಟ್ಟಿನ ಗುರುತು ನೀಡಬೇಕು. ಇಲ್ಲವಾದರೆ ಪಡಿತರ ಸಿಗುವುದಿಲ್ಲ. ಒಂದು ಕೆ.ಜಿ ಅಕ್ಕಿ ಕಡಿತಗೊಳಿಸುತ್ತಿದ್ದಾರೆ. ತಿಂಗಳು ಪೂರ್ತಿ ಪಡಿತರ ವಿತರಿಸದೇ 2-3 ದಿನ ಮಾತ್ರ ವಿತರಿಸಲಾಗುತ್ತಿದೆ ಎಂದು ಜಕನಾಳ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಾಗ ಶಾಸಕ ಪ್ರಭು ಬಿ.ಚವ್ಹಾಣ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಗ್ರಾಮ ಸಂಚಾರದ ನಿಮಿತ್ತ ಶಾಸಕರು ಜ.3ರಂದು ಔರಾದ(ಬಿ) ತಾಲ್ಲೂಕಿನ ಜಕನಾಳ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಒಬ್ಬೊಬ್ಬರಾಗಿ ಸಮಸ್ಯೆಗಳನ್ನು ಹೇಳಿದರು. ಪಡಿತರ ಪಡೆಯಲು ಬೇರೆ ಊರಿಗೆ ಹೋಗಬೇಕಾಗುತ್ತದೆ. ಒಂದು ದಿನ ಹೆಬ್ಬೆಟ್ಟಿನ ಗುರುತು ನೀಡಲು ಹೋಗಬೇಕು. ಮತ್ತೊಮ್ಮೆ ಪಡಿತರ ಪಡೆಯಲು ಹೋಗಬೇಕು. ತಿಂಗಳಲ್ಲಿ 2-3 ದಿನ ಮಾತ್ರ ಪಡಿತರ ವಿತರಣೆ ಮಾಡುತ್ತಾರೆ. ನಂತರ ಹೋದರೆ ರೇಷನ್ ಸಿಗದೇ ವಾಪಸ್ಸಾಗಬೇಕಾಗುತ್ತದೆ. ಕೂಲಿ-ನಾಲಿ ಮಾಡಿಕೊಂಡು ಬದುಕುವ ನಾವು ಎಲ್ಲ ಕೆಲಸ ಬಿಟ್ಟು ರೇಷನ್‌ಗಾಗಿ ಅಲೆದಾಡಬೇಕಾಗುತ್ತಿದೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಇಷ್ಟೊಂದು ಸಮಸ್ಯೆಯಿದ್ದರೂ ನೀವು ಕಣ್ಣು ಮುಚ್ಚಿ ಕುಳಿತಿದ್ದೀರಾ ? ಸಂಬAಧಪಟ್ಟವರ ವಿರುದ್ಧ ಇನ್ನೂ ಯಾಕೆ ಕ್ರಮ ಜರುಗಿಸಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. ಇದು ಒಂದು ಊರಿನ ಸಮಸ್ಯೆ ಮಾತ್ರವಲ್ಲ. ಎಲ್ಲ ಗ್ರಾಮಗಳಲ್ಲಿ ಇದೇ ರೀತಿಯ ಪರಿಸ್ಥಿತಿಯಿದೆ. ಬಡವರಿಂದ ಹಣ ವಸೂಲಿ ಮಾಡುವುದು ಮಹಾಪಾಪ. ಆಂಥವರ ವಿರುದ್ಧ ಕೂಡಲೇ ಕಠಿಣ ಕ್ರಮವಾಗಬೇಕು. ಇಲ್ಲವಾದಲ್ಲಿ ತಮ್ಮ ವಿರುದ್ಧವೇ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ನ್ಯಾಯಬೆಲೆ ಅಂಗಡಿ ಎಲ್ಲೇ ಇರಲಿ. ವಿತರಕರು ಪ್ರತಿ ತಿಂಗಳು ಗ್ರಾಮಕ್ಕೆ ಬಂದು ಪಡಿತರ ವಿತರಣೆ ಮಡಬೇಕು. ಹೆಬ್ಬೆಟ್ಟು ಗುರುತು ಪಡೆಯಲು ಎಲ್ಲಿಯೂ ಹಣ ಪಡೆಯುವಂತಿಲ್ಲ. ತಿಂಗಳು ಪೂರ್ತಿ ಪಡಿತರ ವಿತರಣೆ ಮಾಡಬೇಕು ಮತ್ತು ನಿಗದಿತ ಪ್ರಮಾಣದಲ್ಲಿ ರೇಷನ್ ಕೊಡಬೇಕು. ಮುಂದಿನ ದಿನಗಳಲ್ಲಿ ಇಂತಹ ದೂರುಗಳು ಪುನಃ ಕೇಳಿ ಬಂದರೆ ಇಲಾಖೆಯ ಅಧಿಕಾರಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು. ಅಲ್ಲದೇ ಪಡಿತರಕ್ಕಾಗಿ ಯಾರೊಬ್ಬರೂ ಹಣ ಪಾವತಿಸುವ ಅಗತ್ಯವಿಲ್ಲ. ಯಾರಾದರೂ ಹಣ ಕೇಳಿದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಗ್ರಾಮಸ್ಥರಿಗೆ ಹೇಳಿದರು.
ಸುಂದಾಳ, ನಂದ್ಯಾಳ, ಮಾನೂರ(ಕೆ), ನಾಗಮಾರಪಳ್ಳಿ, ಕರಂಜಿ(ಕೆ), ಕರಂಜಿ(ಬಿ), ರಾಯಪಳ್ಳಿ ಹಾಗೂ ಲಿಂಗದಳ್ಳಿ ಗ್ರಾಮದಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರಲ್ಲದೇ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದರು. ರಸ್ತೆ, ಚರಂಡಿ, ಹೆಚ್ಚುವರಿ ತರಗತಿ ಕೋಣೆಗಳು, ಸಮುದಾಯ ಭವನ ಹೀಗೆ ಅವಶ್ಯಕ ಕೆಲಸಗಳನ್ನು ಆದ್ಯತೆಗೆ ಅನುಗುಣ ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು. ಗ್ರಾಮದಲ್ಲಿನ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ದೀಪದಂತಹ ಸಮಸ್ಯೆಗಳನ್ನು ಪರಿಹರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಔರಾದ(ಬಿ) ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ, ಜೆಸ್ಕಾಂ ಎಇಇ ರವಿ ಕಾರಬಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕೃಷಿ ಇಲಾಖೆಯ ಧೂಳಪ್ಪ, ಪಂಚಾಯತ್ ರಾಜ್ ಇಂಜಿನೀಯರಿoಗ್ ಇಲಾಖೆಯ ವೆಂಕಟರಾವ ಶಿಂಧೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ.
ಫಾಹೀಮ್ ಖುರೇಶಿ, ಸಿಡಿಪಿಓ ಎಮಲಪ್ಪಾ, ಮುಖಂಡರಾದ ವಸಂತ ಬಿರಾದಾರ, ಸಚಿನ ರಾಠೋಡ್, ಕೇರಬಾ ಪವಾರ, ಬಸವರಾಜ ಪಾಟೀಲ ಕಮಲನಗರ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, sಸುಜಿತ ರಾಠೋಡ್, ಪ್ರದೀಪ ಪವಾರ, ರವೀಂದ್ರ ರೆಡ್ಡಿ, ಖಾಜಾಮಿಯ್ಯಾ, ಸಂಜು ವಡೆಯರ್, ರಾಮರೆಡ್ಡಿ ಪಾಟೀಲ, ರಾವಸಾಬ ಪಾಟೀಲ, ಶರಣಪ್ಪ ಇಟಗ್ಯಾಳ, ಜಗದೀಶ ಪಾಟೀಲ, ಅನೀಲ ಬಿರಾದಾರ, ಬಾಬು ರಾಠೋಡ್, ದೇವಿದಾಸ ಪವಾರ್, ವಾಸುದೇವ ರಾಠೋಡ್, ಹರಿದಾಸ ರಾಠೋಡ್ ಸೇರಿದಂತೆ ಇತರರಿದ್ದರು.
4ರಂದು ಪ್ರವಾಸ:ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜನವರಿ 4ರಂದು ಇಟಗ್ಯಾಳ, ನಾಗನಪಲ್ಲಿ ಚಿಂತಾಕಿ, ಬೆಲ್ದಾಳ, ಗುಡಪಳ್ಳಿ, ಮೆಡಪಳ್ಳಿ, ಸುಂಕನಾಳ, ಉಜನಿ ಹಾಗೂ ಚಿಕ್ಲಿ(ಜೆ) ನಲ್ಲಿ ಗ್ರಾಮ ಸಂಚಾರ ನಡೆಸುವರು.

