• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುಂದಿನ ಎರಡು ವರ್ಷ ಕಾಫಿ ಬೆಲೆಗಳು ಏರುಮುಖವಾಗಿರಲಿವೆ ;ಮಾರುಕಟ್ಟೆ ತಜ್ಞರು

ಪ್ರತಿಧ್ವನಿ by ಪ್ರತಿಧ್ವನಿ
October 22, 2024
in Top Story, ಇತರೆ / Others
0
Share on WhatsAppShare on FacebookShare on Telegram

ಬೆಂಗಳೂರು: ದಕ್ಷಿಣ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಅಕಾಲಿಕ ಮಳೆ, ಬೆಂಕಿ ಮತ್ತು ಅನಾವೃಷ್ಟಿಗೆ ಕಾರಣವಾಗುವ ಹವಾಮಾನ ವೈಪರೀತ್ಯಗಳು ಈಗಾಗಲೇ ಏರುತ್ತಿರುವ ಕಾಫಿ ಬೆಲೆಗೆ ಆತಂಕವನ್ನು ಹೆಚ್ಚಿಸಿವೆ.ಇದು ಪಾನೀಯವಾಗಿ ಕಾಫಿಯತ್ತ ಭಾರತೀಯ ಗ್ರಾಹಕರ ಹೆಚ್ಚುತ್ತಿರುವ ಆದ್ಯತೆಯ ಜೊತೆಗೆ ಉತ್ಪಾದಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ.

ADVERTISEMENT

“ಸ್ಥಳೀಯ ಮಾರುಕಟ್ಟೆಗಳು ಬೆಳೆಯುತ್ತಿರುವ ಬೇಡಿಕೆಯೊಂದಿಗೆ ಅಭಿವೃದ್ಧಿ ಹೊಂದುತ್ತಿವೆ ಮತ್ತು ಹೆಚ್ಚಿನ ಕಾಫಿ ಬೆಳೆಗಾರರು ಉತ್ತಮ ಬೆಲೆ ಪಡೆಯಲಿದ್ದಾರೆ, ಬೆಳೆಗಾರರು ಪ್ರತಿ ವರ್ಷ ಮಾರಾಟ ಮಾಡುತ್ತಾರೆ ಮತ್ತು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ. ಅವರು ಬೆಲೆ ಕಡಿಮೆ ಎಂಬ ಕಾರಣಕ್ಕೆ ಸ್ಟಾಕ್‌ ಇರಿಸಿಕೊಂಡು ಕುಳಿತುಕೊಳ್ಳಬೇಕಾಗಿಲ್ಲ, ವ್ಯಾಪಾರಿಗಳೂ ಖರೀದಿಸಲು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ”ಎಂದು ಕಾಫಿ ಉದ್ಯಮದ ಸಲಹೆಗಾರ ವಿ ವಿಗ್ನೇಶ್ ಹೇಳುತ್ತಾರೆ.

ನಿರೀಕ್ಷಿತ ಭವಿಷ್ಯದಲ್ಲಿ ಬೆಲೆಗಳು ಹೆಚ್ಚಾಗುತ್ತಲೇ ಇರುತ್ತವೆ ಎಂದು ವ್ಯಾಪಾರೋದ್ಯಮಿಗಳು ಮತ್ತು ಉದ್ಯಮ ತಜ್ಞರು ತಿಳಿಸಿದರು.”ಇದು ಎರಡು ವರ್ಷಗಳ ನಂತರ ಗರಿಷ್ಠ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ ಏಕೆಂದರೆ ಅದು ಆ ಮಟ್ಟವನ್ನು ದಾಟಿದಾಗ, ಕಾಫಿ ಸರಪಳಿಯಲ್ಲಿರುವ ಯಾರಿಗಾದರೂ ಇದು ಸಂಪೂರ್ಣವಾಗಿ ಕೈಗೆಟುಕಲಾರದು ಎಂದು ವಿಗ್ನೇಶ್ ಹೇಳಿದರು.

ಹೆಚ್ಚಿದ ಬೇಡಿಕೆ ಮತ್ತು ನಿರಂತರ ಪೂರೈಕೆ ಅಡೆತಡೆಗಳಿಂದಾಗಿ ಕಾಫಿ ಬೆಲೆಗಳು, ಮುಖ್ಯವಾಗಿ ಅರೇಬಿಕಾ ಬೆಲೆ ಕಳೆದ 13 ವರ್ಷಗಳಲ್ಲಿ ಅತ್ಯಧಿಕ ಬೆಲೆಗಳನ್ನು ಮುಟ್ಟಿವೆ. ರೋಬಸ್ಟಾ ಕಾಫಿಯ ಉತ್ಪಾದನೆ ಕೊರತೆಯು ಬೇಡಿಕೆಯನ್ನು ಹುಟ್ಟುಹಾಕಿರುವುದರಿಂದ ಬೆಲೆಗಳು 2024 ರಲ್ಲಿ ಸರಿಸುಮಾರು 40 ಪ್ರತಿಶತದಷ್ಟು ಹೆಚ್ಚಾಗಿದೆ.ಉನ್ನತ ಉತ್ಪಾದಕ ಬ್ರೆಜಿಲ್‌ನಲ್ಲಿನ ಅನಿಯಮಿತ ಹವಾಮಾನದಿಂದಾಗಿ ಕಾಫಿ ಬೆಲೆಯಲ್ಲಿನ ರ್ಯಾಲಿಯು ವೇಗವನ್ನು ಪಡೆಯುತ್ತಿದೆ.

ಕಡಿಮೆ ಮಳೆ ಮತ್ತು ಬೆಚ್ಚಗಿನ ತಾಪಮಾನವು ದಕ್ಷಿಣ ಅಮೆರಿಕಾದ ರಾಷ್ಟ್ರ ಬ್ರೆಜಿಲ್‌ ಉತ್ಪಾದನೆಯನ್ನು ಘಾಸಿಗೊಳಿಸಿದೆ. ಬ್ರೆಜಿಲ್ ಉತ್ಪಾದಿಸುವ ಅಗ್ಗದ ರೋಬಸ್ಟಾ ವಿಧದ ಬೆಲೆಗಳು ಕೂಡ ಜಿಗಿದಿವೆ. ಇದು ಪ್ರತಿಯಾಗಿ, ಕಂಪನಿಗಳು ಮತ್ತು ಗ್ರಾಹಕರು ಹೆಚ್ಚಿನ ಬೆಲೆಯ ಕಾಫಿ ಖರೀದಿ ಕಡಿಮೆ ಮಾಡಿದ್ದು ಮತ್ತು ಚಿಲ್ಲರೆ ವ್ಯಾಪಾರಿಗಳು ಕಾಫಿ ದಾಸ್ತಾನುಗಳನ್ನು ಸುರಕ್ಷಿತವಾಗಿರಿಸಲು ಪರದಾಡುತ್ತಿದ್ದಾರೆ.

ವಿಶ್ವದ ಎರಡನೇ ಅತೀ ದೊಡ್ಡ ಕಾಫಿಯ ಉತ್ಪಾದಕ ವಿಯೆಟ್ನಾಂ ಕೂಡ ಅಧಿಕ ಮಳೆಯನ್ನು ಎದುರಿಸುತ್ತಿದೆ ಮತ್ತು ರೈತರು ದಕ್ಷಿಣ ಏಷ್ಯಾದಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿರುವ ಡುರಿಯನ್ ಹಣ್ಣನ್ನು ಉತ್ಪಾದಿಸಲು ಕಾಫಿ ತೋಟಗಳನ್ನೇ ಬದಲಾಯಿಸುತ್ತಿದ್ದಾರೆ, ಇದು ಕಾಫಿಗಿಂತ ಹೆಚ್ಚು ಲಾಭದಾಯಕವಾಗಿದೆ.ಭಾರತದಲ್ಲಿ ತಯಾರಾಗುವ ಕಾಫಿಯ ಎರಡು ಮುಖ್ಯ ವಿಧಗಳೆಂದರೆ ಅರೇಬಿಕಾ ಮತ್ತು ರೋಬಸ್ಟಾ. ಅರೇಬಿಕಾ ಅದರ ಸೌಮ್ಯವಾದ ಆರೊಮ್ಯಾಟಿಕ್ ಪರಿಮಳದಿಂದಾಗಿ ರೋಬಸ್ಟಾ ಕಾಫಿಗಿಂತ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಭಾರತದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಕಾಫಿಯ ಶೇಕಡಾ 70 ರಷ್ಟನ್ನು ರಫ್ತು ಮಾಡಲಾಗುತ್ತದೆ. ವಿಶ್ವದ ಒಟ್ಟು ಕಾಫಿ ರಫ್ತಿನಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.ಭಾರತದಲ್ಲಿನ ಒಟ್ಟು ಕಾಫಿಯ ಶೇಕಡಾ 71 ರಷ್ಟನ್ನು ಕರ್ನಾಟಕವು ಉತ್ಪಾದಿಸುತ್ತದೆ, ಅದರಲ್ಲಿ ಬಹುಪಾಲು ರೋಬಸ್ಟಾ ಆಗಿದೆ. ಉಳಿದ ಉತ್ಪಾದನೆಯು ಕೇರಳ, ತಮಿಳುನಾಡು ಮತ್ತು ಈಶಾನ್ಯ ಪ್ರದೇಶದಿಂದ ಬರುತ್ತದೆ.

ಭಾರತವು 2023-24ರಲ್ಲಿ 3,74,200 ಮೆಟ್ರಿಕ್ ಟನ್‌ಗಳನ್ನು (MT) ಉತ್ಪಾದಿಸಿತು, ಅದರಲ್ಲಿ ಕರ್ನಾಟಕವು 2,66,885 MT ಕೊಡುಗೆ ನೀಡಿದೆ.ಭಾರತದ ಕಾಫಿ ಮಾರುಕಟ್ಟೆಯು 2022 ರಲ್ಲಿ $478 ಮಿಲಿಯನ್ ಮೌಲ್ಯದ್ದಾಗಿದೆ ಮತ್ತು 2024-2033 ರ ಮುನ್ಸೂಚನೆಯ ಅವಧಿಯಲ್ಲಿ 9.87 ಪ್ರತಿಶತದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (CAGR) 2032 ರ ವೇಳೆಗೆ ಮೌಲ್ಯವು $1.2 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ಹಲವಾರು ಸವಾಲುಗಳು ಕಾಫಿ ಉತ್ಪಾದಕರ ಆಶಾವಾದಿ ಭವಿಷ್ಯಕ್ಕೆ ತೊಡಕಾಗಿವೆ, ಕಾರ್ಮಿಕರ ಕೊರತೆ ಅವುಗಳಲ್ಲಿ ಒಂದಾಗಿದೆ. “ಎಸ್ಟೇಟ್‌ನಲ್ಲಿನ ನಮ್ಮ ಒಟ್ಟು ವೆಚ್ಚದ ಸುಮಾರು 65 ಪ್ರತಿಶತವು ಕಾರ್ಮಿಕ ವೆಚ್ಚವಾಗಿದೆ, ಇದು ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿ ಹೆಚ್ಚಾಗಿದೆ. 70 ರಷ್ಟು ಬ್ರೆಜಿಲಿಯನ್ ಕಾಫಿ ಬೆಳೆಯನ್ನು ಯಾಂತ್ರಿಕವಾಗಿ ಮಾಡಲಾಗುತ್ತದೆ ಏಕೆಂದರೆ ಅವರ ಕಾಫಿ ಬೆಳೆಯುವ ಪ್ರದೇಶಗಳು ಸಮತಟ್ಟಾಗಿವೆ, ಆದರೆ ನಮ್ಮದು ಕಾಫಿ ಬೆಟ್ಟ ಗುಡ್ಡ ಮರಗಳ ಇಳಿಜಾರಿನಲ್ಲಿದೆ, ಇಲ್ಲಿ ಯಂತ್ರಗಳ ಬಳಕೆ ಕಷ್ಟಕರವಾಗಿದ್ದು ಇದು ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತವಾಗಿದೆ, ”ಎಂದು ಚಿಕ್ಕಮಗಳೂರಿನ ಬದ್ರಾ ಎಸ್ಟೇಟ್‌ನ ವ್ಯವಸ್ಥಾಪಕ ನಿರ್ದೇಶಕ ಜಾಕೋಬ್ ಮಾಮ್ಮನ್ ಹೇಳಿದರು.

ಹವಾಮಾನ ಬದಲಾವಣೆಯು ಕಾಫಿ ಉತ್ಪಾದಕರಿಗೆ ಮತ್ತೊಂದು ತಲೆಬಿಸಿಯಾಗಿದೆ. ಹಠಾತ್ ಮಳೆಯು ವಾಸ್ತವವಾಗಿ ಕಾಫಿ ಬೆಳೆಗಳನ್ನು ಹಾನಿಗೊಳಿಸಿದೆ ಅಥವಾ ಕಡಿಮೆ ಗುಣಮಟ್ಟಕ್ಕೆ ಕಾರಣವಾಗಿದೆ.ಕೆಲವು ಉದ್ಯಮದ ಒಳಗಿನವರು ಈಗ ಹವಾಮಾನ ವೈಪರೀತ್ಯದ ಪರಿಣಾಮವು ಕಡಿಮೆ ಎಂದು ಹೇಳುತ್ತಾರೆ. ಬೆಂಕಿ ಕಾಫಿಯ ಸುಹಾಸ್ ದ್ವಾರಕಾನಾಥ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೀರು, ತಾಪಮಾನದ ವಿಷಯದಲ್ಲಿ ತೊಂದರೆಗಳಿವೆ, ಆದರೆ ಇದು ಹೊಸದಲ್ಲದ ಕಾರಣ ಉತ್ಪಾದನೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ” ಎಂದು ಹೇಳಿದರು.ಆದಾಗ್ಯೂ, ಕಾಫಿ ಬೋರ್ಡ್ ಆಫ್ ಇಂಡಿಯಾದ ಮಾಹಿತಿಯು ಭಾರತದಲ್ಲಿ ಕಾಫಿ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಕುಸಿತವನ್ನು ತೋರಿಸುತ್ತದೆ. ಭಾರತವು 2022-23ರಲ್ಲಿ 3,52,000 ಮೆಟ್ರಿಕ್‌ ಟನ್‌ ಉತ್ಪಾದಿಸಿದ್ದು 2023-24ರಲ್ಲಿ 3,74,200 ಮೆಟ್ರಿಕ್‌ ಟನ್‌ ಗಳನ್ನು ಉತ್ಪಾದಿಸಿತು.”

ಈಗ ದೇಶದಲ್ಲಿ ಮಧ್ಯಮ ವರ್ಗವು ಬೆಳೆಯುತ್ತಿದೆ ಮತ್ತು ಉಳಿತಾಯ ಮಾಡಬಹುದಾದ ಆದಾಯವು ಹೆಚ್ಚುತ್ತಿದೆ, ದೇಶದಲ್ಲಿ ಪ್ರಮುಖ ಕಂಪೆನಿಗಳ ಐಷಾರಾಮಿ ಸ್ಟಾಲ್‌ , ರೆಸ್ಟೋರೆಂಟ್‌ ಗಳು ತಲೆ ಎತ್ತುತ್ತಿವೆ ಇದರಿಂದ ಮುಂದಿನ 3-5 ವರ್ಷಗಳಲ್ಲಿ ಭಾರತದ ಆಂತರಿಕ ಬಳಕೆ ಗಣನೀಯ ಏರಿಕೆ ದಾಖಲಿಸಲಿದ್ದು ಕಾಫಿಯ ಅತಿದೊಡ್ಡ ಗ್ರಾಹಕನಾಗಲಿದೆ ಮತ್ತು ಪರಿವರ್ತನೆಯನ್ನು ಈಗಾಗಲೇ ಕಾಣಬಹುದಾಗಿದೆ.

Tags: "Local marketsbengaluruCoffee prices will rise in the next two years;Market experts Kovar Bay IndreshWeather extremes leading
Previous Post

ಸಿಲಿಂಡರ್‌ ಸ್ಪೋಟಕ್ಕೆ ಐವರು ಸಾವು :ಮೂವರಿಗೆ ಗಾಯ

Next Post

“ಕಸ್ಟಡಿ” ಚಿತ್ರದಲ್ಲಿ “ಭೀಮ” ಖ್ಯಾತಿಯ ನಟಿ ಪ್ರಿಯ .

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
ಅಯೋಧ್ಯೆ ರಾಮ ಮಂದಿರದ  ದಾಳಿಗೆ ಸಂಚು ರೂಪಿಸಿದ್ದ ಉಗ್ರ ಅಬ್ದುಲ್ ರೆಹ್ಮಾನ್  ಹತ್ಯೆ..!

ಅಯೋಧ್ಯೆ ರಾಮ ಮಂದಿರದ  ದಾಳಿಗೆ ಸಂಚು ರೂಪಿಸಿದ್ದ ಉಗ್ರ ಅಬ್ದುಲ್ ರೆಹ್ಮಾನ್  ಹತ್ಯೆ..!

February 10, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post

"ಕಸ್ಟಡಿ" ಚಿತ್ರದಲ್ಲಿ "ಭೀಮ" ಖ್ಯಾತಿಯ ನಟಿ ಪ್ರಿಯ .

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada