ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಉಸಿರಾಟದ ಸಮಸ್ಯೆಯಿಂದ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ಪಾರ್ವತಿ ದಾಖಲಾಗಿದ್ದರು. ಬಳಿಕ ಶ್ವಾಸಕೋಶದಲ್ಲಿ ಸೋಂಕು ಇದ್ದ ಕಾರಣ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಆಸ್ಪತ್ರೆಗೆ ದಾಖಲಾದ ಬಳಿಕ ಪುತ್ರ ಯತೀಂದ್ರ ಜತೆಗೆ ಇದ್ದಾರೆ.
ಇನ್ನು ಮಧ್ಯರಾತ್ರಿ ದೆಹಲಿಯಿಂದ ವಾಪಸ್ ಆದ ಸಿಎಂ ಸಿದ್ದರಾಮಯ್ಯ, ಏರ್ ಪೋರ್ಟ್ ನಿಂದ ನೇರವಾಗಿ ಆಸ್ಪತ್ರೆಗೆ ಬಂದಿದ್ದರು. ಸುಮಾರು 1 ಗಂಟೆಗಳ ಕಾಲ ಪತ್ನಿ ಆರೋಗ್ಯ ವಿಚಾರಿಸಿ ಮನೆಗೆ ತೆರಳಿದರು. ಸದ್ಯ ಪಾರ್ವತಿ ಆರೋಗ್ಯ ಸುಧಾರಿಸಿದ್ದು, 2-3 ದಿನ ಆಸ್ಪತ್ರೆಗಳಲ್ಲಿ ಇರಬೇಕಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.











