
ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ 9 ಉಗ್ರ ತಾಣಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದ್ದನ್ನು ಸಿಎಂ ಸಿದ್ದರಾಮಯ್ಯ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ನಮ್ಮ ದೇಶದ ರಕ್ಷಣಾ ಪಡೆ ಪಾಕಿಸ್ಥಾನ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿಗಳ ನೆಲೆಯನ್ನ ನಾಶ ಮಾಡಿ ಪರಾಕ್ರಮ ಮೆರೆದಿದ್ದಾರೆ. ನಮ್ಮ ದೇಶದ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂಧಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ಭಾರತೀಯ ಸೈನ್ಯ ಆಪರೇಷನ್ ಸಿಂಧೂರ್ ಹೆಸರಲ್ಲಿ ಒಂಭತ್ತು ನೆಲೆಗಳ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಬೇರೆಯವರ ಜಾಗಗಳಿಗೆ ಅಟ್ಯಾಕ್ ಮಾಡಿಲ್ಲ. ಉಗ್ರರ ತಾಣಗಳಿಗೆ ಮಾತ್ರ ದಾಳಿ ಮಾಡಿದ್ದಾರೆ. ಮೊನ್ನೆ ಕಾಶ್ಮೀರದಲ್ಲಿ 26 ಮಂದಿ ಅಮಾಯಕರನ್ನ ಕೊಂದಿದ್ದಾರೆ. ಇವರನ್ನ ಬೆಂಬಲಿಸೋರು ಪಾಕಿಸ್ತಾನದವರೆ. ಈ ಘಟನೆ ಆದಮೇಲೂ ಉಗ್ರಗಾಮಿಗಳನ್ನ ಬೆಂಬಲಿಸಿದ್ರು. ಅದಕ್ಕಾಗಿ ಭಾರತ ಸರ್ಕಾರ ಒಂಭತ್ತು ಉಗ್ರ ತಾಣಗಳನ್ನ ಧ್ವಂಸ ಮಾಡಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಅಂತರಾಷ್ಟ್ರೀಯ ಮಟ್ಟದಲ್ಲಿ ಉಗ್ರರ ದಾಳಿಯನ್ನು ಪಾಕ್ ಯಾವತ್ತೂ ಖಂಡಿಸುವ ಕೆಲಸ ಮಾಡಿಲ್ಲ. ಈ ಹಠಮಾರಿತನ ವಿರೋಧಿಸಿ ಭಾರತ ದಾಳಿ ಮಾಡಿದೆ. ಭಾರತ ನಡೆಸಿರುವ ದಾಳಿಯನ್ನ ನಾನು ಬೆಂಬಲಿಸುತ್ತೇನೆ. ಪಾಕಿಸ್ತಾನಕ್ಕೆ ಇದೊಂದು ಎಚ್ಚರಿಕೆಯ ಘಂಟೆ ಎಂದಿರುವ ಸಿಎಂ ಸಿದ್ದರಾಮಯ್ಯ, ಭಾರತೀಯ ಸೈನಿಕರು ಎಲ್ಲೆಲ್ಲಿ ಉಗ್ರರಿದ್ದಾರೋ ಅಲ್ಲಿ ಮಾತ್ರ ದಾಳಿ ಮಾಡಿರೋದು ಮೆಚ್ಚುವಂತಹದ್ದು. ಅಮಾಯಕರ ಸಾವು ನೋವು ಆಗದಂತೆ ನೋಡಿಕೊಂಡಿದ್ದಾರೆ. ನಮ್ಮ ಸೈನಿಕರ ಕಾರ್ಯ ದಕ್ಷತೆ ಹಾಗು ಪರಿಣಿತಿಗೆ ನಮ್ಮ ದೇಶ ದೊಡ್ಡ ಸಲಾಂಂ ನೀಡುತ್ತೇನೆ ಎಂದಿದ್ದಾರೆ.

ನಾನು ಕೂಡ ರಾಜ್ಯ ಸರ್ಕಾರದ ಪರವಾಗಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಘೋಷಿಸುತ್ತೇನೆ. ನಮ್ಮ ರಾಜ್ಯ, ನಮ್ಮ ಸರ್ಕಾರ ಕೂಡ ಬೆಂಬಲ ನೀಡುತ್ತದೆ. ನಾವೆಲ್ಲ ಎಚ್ಚರ ವಹಿಸುವ ಕೆಲಸ ಮಾಡ್ತೀವಿ ಎಂದಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಜೊತೆ ಸಂಪರ್ಕ ಸಾಧಿಸಿ ಸಂಪೂರ್ಣ ಬೆಂಬಲ ನೀಡುತ್ತದೆ. ನಮ್ಮ ರಾಜ್ಯವೂ ಎಲ್ಲ ಎಚ್ಚರಿಕೆ ಕ್ರಮಕೈಗೊಳ್ಳುತ್ತೆ. ಈ ಉಗ್ರರ ನೆಲೆ ಮೇಲೆ ನಡೆದ ದಾಳಿಯಿಂದ ರಾಯಚೂರು ರ್ಯಾಲಿಯನ್ನ ರದ್ದು ಮಾಡಿದ್ದೇವೆ. ಸಂವಿಧಾನ ಉಳಿಸಿ, ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ಹಮ್ಮಿಕೊಂಡಿದ್ವಿ. ಈ ಹಂತದಲ್ಲಿ ಕೇಂದ್ರದ ವಿರುದ್ದ ಪ್ರತಿಭಟನೆ ಸಮಂಜಸವಲ್ಲ ಅಂತ ರದ್ದು ಮಾಡಿದ್ದೇವೆ ಎಂದಿದ್ದಾರೆ.
ಸೈನಿಕರಿಗೋಸ್ಕರ, ಆಪರೇಷನ್ ಸಿಂಧೂರ್ ಕಾರಣದಿಂದ ಕಾಂಗ್ರೆಸ್ ರ್ಯಾಲಿ ರದ್ದು ಮಾಡಿದ್ದೀವಿ. ಕೇಂದ್ರ ಸರ್ಕಾರದ ಜೊತೆ ನಿಲ್ಲಬೇಕೆಂದು ರಾಜ್ಯದ ಜನರಿಗೆ ಮನವಿ ಮಾಡ್ತೇನೆ. ಬೆಂಗಳೂರು, ರಾಯಚೂರು, ಕಾರವಾರ, ಕೊಡಗು ಭಾಗಗಳಲ್ಲಿ ಮಾಕ್ ಡ್ರಿಲ್ ಮಾಡಲಾಗ್ತಿದೆ. ರಾಜ್ಯವನ್ನ ಅಲರ್ಟ್‌ನಲ್ಲಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
