ರಾಜ್ಯ ಸರ್ಕಾರದ 2025 ನೇ ಸಾಲಿನ ಆಯವ್ಯಯ (State budget 2025) ಮಂಡನೆಗೆ ಕೌಂಟ್ ಡೌನ್ ಶುರುವಾಗಿದೆ. ಹೌದು ಸಿಎಂ ಸಿದ್ದರಾಮಯ್ಯ (Cm siddaramaiah) 16ನೇ ಬಜೆಟ್ ಮಂಡಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಈಗಾಗಲೇ ಗ್ಯಾರಂಟಿ ಸರದಾರ ಅಂತ ಕರೆಸಿಕೊಳ್ಳುತ್ತಿರುವ ಸಿದ್ದರಾಮಯ್ಯಗೆ (Siddaramaiah) ಒಂದು ವಿಚಾರದಲ್ಲಿ ಮಾತ್ರ ಬೇಸರವಿದೆ.ಸದ್ಯ ಬಜೆಟ್ (Budget) ಸಿದ್ಧತೆಗೆ ಉಳಿದಿರುವುದು ಕೆಲವೇ ಕೆಲವು ದಿನಗಳು ಮಾತ್ರ, ಆದ್ರೆ ಇಂತಹ ಸಂದರ್ಭದಲ್ಲಿ ಮಂಡಿ ನೋವು ಇರುವುದು ಸಿದ್ದುಗೆ ಬೇಸರ ತಂದಿದೆ.
ಸದನದಲ್ಲಿ ಸಹಜವಾಗಿ ನಿಂತುಕೊಂಡೇ ಬಜೆಟ್ ಮಂಡಿಸೋದು ವಾಡಿಕೆ. ಸುಮಾರು ಎರಡು ಅಥವಾ ಎರಡುವರೆ ಗಂಟೆ ಬಜೆಟ್ ಪುಸ್ತಕ ಓದಬೇಕಿದೆ. ಹೀಗಾಗಿ ಸಿಎಂ ಬಜೆಟ್ ವೇಳೆಗೆ ಪೂರ್ಣ ಗುಣಮುಖ ಆಗುವ ತವಕದಲ್ಲಿದ್ದಾರೆ.