ದೆಹಲಿ ಭೇಟಿ ವಿಚಾರ
ಹೆಚ್.ಡಿ.ಕುಮಾರಸ್ವಾಮಿ ನನಗೆ ಕಿರಿಯ ಸಹೋದರ ಇದ್ದಂತೆ,ಎಚ್.ಡಿ.ದೇವೇಗೌಡರು ನನ್ನ ತಂದೆ ಇದ್ದಂತೆ.ಹೆಚ್.ಡಿ.ದೇವೇಗೌಡರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಅವರು ನನ್ನನ್ನು ಸಂಪರ್ಕಿಸದೇ ಇರೋದು ಬೇಸರ ತಂದಿದೆ.ನಾನು ಬಿಜೆಪಿಗೆ ಹೋಗಬೇಕಾದರೆ ಬಹಳ ಹಿಂದೆಯೇ ಹೋಗುತ್ತಿದ್ದೆ.ನನಗೆ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಮೇಲೆ ಯಾವುದೇ ದ್ವೇಷವಿಲ್ಲ, ನಾನು ಅವರನ್ನು ಗೌರವಿಸುತ್ತೇನೆ ಆದರೆ ಅವರ ಸಿದ್ಧಾಂತಗಳ ವಿರುದ್ಧ ಹೋರಾಡುತ್ತೇನೆ.ನಾನು ಅಕ್ಟೋಬರ್ 16 ರಂದು ಸಭೆಗೆ ಕರೆದಿದ್ದೇನೆ ಮತ್ತು ನಾನು ಇನ್ನೂ ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ.ಅಕ್ಟೋಬರ್ 16 ರಂದು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ.ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮುಂದಿನ ನಡೆ ಬಗ್ಗೆ ತೀರ್ಮಾನಿಸುತ್ತೇನೆ,ಸಿ.ಎಂ.ಇಬ್ರಾಹಿಂ ಜನರಿಗಾಗಿಯೇ ಹೊರತು ಅಧಿಕಾರಕ್ಕಾಗಿ ಅಲ್ಲ.ನಾವು ಯಾವತ್ತೂ ಜಾತ್ಯತೀತ ಪಕ್ಷವಾಗಿರುತ್ತೇವೆ.ಜೆಡಿಎಸ್ ಯಾವತ್ತೂ ಜಾತ್ಯತೀತವಾಗಿರುತ್ತದೆ.ಎಚ್‌ಡಿ ಕುಮಾರಸ್ವಾಮಿ ಅವರನ್ನು ನೋಯಿಸಲು ನಾನು ಬಯಸುವುದಿಲ್ಲ.ಏಕೆಂದರೆ ಅವರು ನನ್ನ ಕಿರಿಯ ಸಹೋದರ ಆದರೆ ತತ್ವ ಮತ್ತು ಸಿದ್ಧಾಂತಗಳಿಗಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಒಕ್ಕಲಿಗ ಮತಗಳಿಂದ ಅವರು ಸೋತಿದ್ದಾರೆ ಎಂಬುದನ್ನು ಒಪ್ಪಲು ಪಕ್ಷ ಸಿದ್ಧವಿಲ್ಲ.ಹಲವು ನಾಯಕರ ಜತೆ ಮಾತನಾಡಿದ್ದೇನೆ ಮತ್ತು ಎಲ್ಲ ಪಕ್ಷಗಳ ಜತೆ ಸಂಪರ್ಕದಲ್ಲಿದ್ದೇನೆ. ನಾನು ಪಕ್ಷದ ಅಧ್ಯಕ್ಷ ಮತ್ತು ಮೈತ್ರಿ ಔಪಚಾರಿಕವಾಗಿಲ್ಲಎಂದರು.
16 ನೇ ತಾರೀಖು ನಿರ್ಧಾರ ತಿಳಿಸುವ ಬಗ್ಗೆ
ನನಗೆ 16 ರ ವರೆಗೆ ಅವಕಾಶ ಬೇಕು.ಎಲ್ಲರ ಅಭಿಪ್ರಾಯ ಪಡೆದು ನಾನು ಮಾಧ್ಯಮದ ಮುಂದೆ ಬರ್ತೀನಿ.ನಮ್ಮದು ಪ್ರಾದೇಶಿಕ ಪಕ್ಷ ಆಗಿದೆ.ಕುಮಾರಸ್ವಾಮಿ ಈಗಾಗಲೇ ನಿಮ್ಮ ಬಳಿ ಮಾತಾಡಿದ್ದಾರೆ.ಹಾಗಾಗಿ ಇದು ವರೆಗೂ ನಾನು ಕುಮಾರಸ್ವಾಮಿ ಬಳಿ ಮಾತಾಡಿಲ್ಲ.ಕುಮಾರಸ್ವಾಮಿ ನನ್ನ ಸಹೋದರ ಸಮಾನ, ದೇವೇಗೌಡರು ನನ್ನ ತಂದೆ ಸಮಾನ.ನನಗೆ ನೋವಾಗಿದೆ, ದೆಹಲಿಗೆ ಹೋಗಿದ್ರೂ ಹೇಳಿಲ್ಲ.ಏನು ಚರ್ಚೆ ಮಾಡಿದ್ರಿ ಅಂತನೂ ಹೇಳಲಿಲ್ಲ.16 ರಂದು ನಾನು ಜನರ ಬಳಿ ಅಭಿಪ್ರಾಯ ಪಡೆದು ಬರ್ತೀನಿ.ಪಕ್ಷದಲ್ಲಿ ಮೊದಲಿನಿಂದಲೂ ಈ ಬಗ್ಗೆ ಚರ್ಚೆ ಆಗಿಲ್ಲ.16 ರಂದು ಸಮಾನ ಮನಸ್ಕರು ಸಭೆ ಕರೆದಿದ್ದೇನೆ.ಈ ಬಾರಿ ೨೦ ಪರ್ಸೆಂಟ್ ವೋಟ್ ಜೆಡಿಎಸ್ ಗೆ ಸಿಕ್ಕಿದೆ.ಮುಸ್ಲಿಂ ಮತ ಹಾಕಿದ್ರು ಅಂತ ಕುಮಾರಸ್ವಾಮಿ ಹೇಳಿದ್ರು.ಆದರೆ ಬಿಜೆಪಿ ಸೋಲಿಸಲು ಮತ ಹಾಕಿದ್ರು ಅಂದ್ರು.ಒಟ್ಟಾರೆ ಮತ ಹಾಕಿದ್ದಾರಲಾ.ಯಾವುದೇ ನಿರ್ಧಾರ ಆಗಬೇಕು ಅಂದರೆ ಪಕ್ಷದಲ್ಲಿ ಚರ್ಚೆ ಆಗಬೇಕಲಾ.ಇವತ್ತಿನ ವರೆಗೂ ನನ್ನ ಸಹಿ ಇಲ್ಲದೆ ಯಾವ ಪೇಪರ್ ಹೊರ ಬಂದಿದೆ.ಕೋರ್ ಕಮಿಟಿ ಪ್ರವಾಸ ಆದ ನಂತರ ತೀರ್ಮಾನ ಅಂದ್ರು.ಆದರೆ ಮೊದಲೇ ಹೋಗಿ ಮೀಟ್ ಆಗಿ ಬಂದ್ರು.ಕಾಂಗ್ರೆಸ್ ನವರೂ ಕಾಂಟ್ಯಾಕ್ಟ್ ಇದ್ದಾರೆ.ಏನೇ ಮಾಡಬೇಕು ಅಂದ್ರು ನಾನು ದೇವೇಗೌಡರ ಬಳಿ ಮಾತಾಡಿಯೇ ಹೋಗೋದು.
ಪಕ್ಷವನ್ನು ಯಾರೂ ಬಿಟ್ಟಿಲ್ಲ ಮುಸ್ಲಿಂ ಅವರು, ಹೋಗ್ತೀನಿ ಅಂತ ಹೇಳಿರೋದು. ದೆಹಲಿಯ ಬೇರೆ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ.ಶರತ್ ಪವಾರ್ ಮಾತಾಡಿದ್ದಾರೆ, ಆಪ್ ಅವರೂ ಮಾತಾಡಿದ್ದಾರೆ.ನಾನು ಜನತಾದಳ ಸೇರಲು ದೇವೇಗೌಡರೇ ಕಾರಣ.ಕುಮಾರಸ್ವಾಮಿ ಹಾಗೂ ದೇವೇಗೌಡರು ಜೊತೆ ಮಾತಾಡಿಯೇ ಮುಂದಿನ ನಿರ್ಧಾರ.ನನಗೆ ಜೆಡಿಎಸ್ ಬಂದಿದ್ದು ಕರ್ತವ್ಯ ಮಾಡಲು.ಮುಂದೆಯೂ ಪಕ್ಷದ ಅಧ್ಯಕ್ಷನಾಗಿ ಕರ್ತವ್ಯ ಮಾಡ್ತೀನಿ. ಮಾತು ಕತೆ ಮಾಡಿಕೊಂಡು ಬಂದಿದ್ದಾರೆ ಇದು ಸರಿನಾ. 16 ಸಭೆಯ ಅಜೆಂಡಾ ಏನು ಅಂದ್ರೆ. ಈ ಮೈತ್ರಿ ಸರಿಯಲ್ಲ ಅಂದ್ರೆ ಮುಂದೇನು.ನಿತೀಶ್ ಕುಮಾರ್ ಜೊತೆ ಹೋಗೀದಾ, ಅಥವಾ ಶರತ್ ಪವರ್ ಜೊತೆ ಹೋಗೋದಾ ಅನ್ನೋ ತೀರ್ಮಾನ ಮಾಡ್ತೀನಿ.ಮೈತ್ರಿ ಯಾರಿಗೆ ಬೇಕಾಗಿರೋದು ಅವರಿಗೋ ನಮಗೋ, ನಮಗೆ ಮೈತ್ರಿ ಬೇಕಾಗಿಲ್ಲ ಅಂತ ದೇವೇಗೌಡರೇ ಹೇಳಿದ್ದು,ಕುಮಾರಸ್ವಾಮಿ ಅವರು ಹೋಗಿ ಭೇಟಿಯಾಗಿದ್ದು ನೋವಾಗಿದೆ. ನನ್ನ ಬಳಿ ಒಂದು ಮಾತಾಡಿ ಹೋಗಿದ್ದರೆ ಏನಾಗ್ತಾ ಇತ್ತು. ಕುಮಾರಸ್ವಾಮಿ ಅವರು ಪ್ರಯತ್ನ ಪಟ್ಟಿದ್ದಾರೆ ನನ್ನ ಜೊತೆ ಮಾತಾಡೋಕೆ.ಆದರೆ ನಾನು 16 ರ ನಂತರ ಮಾತಾಡ್ತೀನಿ ಅಂತ ಹೇಳಿದ್ದೀನಿ. ಜನತಾ ದಳ ಹಿಂದು, ಮುಸ್ಲಿಂ ಪಾರ್ಟಿ ಅಲ್ಲ. ಕರ್ನಾಟಕ ಜನತೆಯ ಪಾರ್ಟಿ ಇದು