
ಕನ್ನಡ (Kannada) ತಮಿಳಿನಿಂದ (Tamil) ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಉದ್ಧಟತನ ಮುಂದುವರೆಸಿರುವ ನಟ ಕಮಲ್ ಹಾಸನ್ (Kamal hasan), ಕನ್ನಡಿಗರ ಕ್ಷಮೆ ಕೇಳುವ ಬದಲಾಗಿ ಈಗ ಕೋರ್ಟ್ ಮೊರೆ ಹೋಗಿದ್ದಾರೆ. ಹೌದು ಕಮಲ್ ಹಾಸನ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಬಾರದು ಎಂಬ ಕೂಗು ಹೆಚ್ಚಾದ ಬೆನ್ನಲೇ ಭಯಗೊಂಡಿರುವ ನಟ ಕಮಲ್ ಹಾಸನ್ ಹೈಕೋರ್ಟ್ (Highcourt) ಮೊರೆ ಹೋಗಿದ್ದಾರೆ.

ಈ ಕುರಿತು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಕರ್ನಾಟಕದಲ್ಲಿ ತಮ್ಮ ಸಿನಿಮಾ ಬಿಡುಗಡೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳೋ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕು ಎಂದು ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕರ್ನಾಟಕದಲ್ಲಿ ಕೆಲವು ಕನ್ನಡ ಪರ ಹೋರಾಟಗಾರರು, ಪೊಲೀಸರು, ಸಿನಿಮಾ ವಾಣಿಜ್ಯ ಮಂಡಳಿಯಿಂದ ಅಥವಾ ಪೊಲೀಸರಿಂದ ತಮ್ಮ ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆಯಾಗದಂತೆ ಸೂಚಿಸಲು ಕೋರಿ ನಟ ಕಮಲ್ ಹಾಸನ್ ಹೈ ಕೋರ್ಟ್ ಕದ ತಟ್ಟಿದ್ದಾರೆ.

ಆದ್ರೆ ತಾವು ತೋರಿದ ಉದ್ಧಟತನವನ್ನು ಪಕ್ಕಕ್ಕಿಟ್ಟು ಇನ್ನಾದ್ರೂ ಕನ್ನಡಿಗರ ಕ್ಷಮೆ ಕೇಳುವುದು ಬಿಟ್ಟು ಈ ರೀತಿ ಕೋರ್ಟ್ ಮೊರೆ ಹೋಗಿರುವ ಕಾರಣ ಕನ್ನಡ ಪರ ಹೋರಾಟಗಾರರ ಕೋಪ ಇನ್ನಷ್ಟು ಹೆಚ್ಚಾಗಿದೆ. ಒಟ್ನಲ್ಲಿ ವಿಚಾರಣೆ ನಡೆದು ತೀರ್ಪು ಬಂದ ನಂತರ ಕಮಲ್ ಸಿನಿಮಾ ಭವಿಷ್ಯ ನಿರ್ಧಾರವಾಗಲಿದೆ.
