ಚಿಕ್ಕಮಗಳೂರಿನಲ್ಲಿ (Chikkamaglore) ರಾತ್ರಿಯಾದರೂ ಮರು ಮತ ಎಣಿಕೆ ಕಾರ್ಯ ಮುಂದುವರೆದಿದಿದೆ. ಕೋರ್ಟ್ ಸೂಚನೆ ಹಿನ್ನೆಲೆ ಎಂಎಲ್ಸಿ (MLC) ಚುನಾವಣೆಯ ಮರು ಮತ ಎಣಿಕೆ ಕಾರ್ಯ ಇಂದು ಮಧ್ಯಾನದಿಂದ ಆರಂಭವಾಗಿದೆ.

ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ಬೆಳಿಗ್ಗೆನಿಂದಲೂ ಮರು ಎಣಿಕೆ ಕಾರ್ಯ ನಡೆಯುತ್ತಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ಮರು ಎಣಿಕೆ ನಡೆಸಲಾಗುತ್ತಿದೆ.ಕಾಲೇಜು ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಏಜೆಂಟ್ ಮುಂದೆ ನಡೆಯುತ್ತಿರುವ ಮತ ಎಣಿಕೆ ಇನ್ನೂ ಮುಂದುವರೆದಿದೆ.ಈ ಮತ ಎಣಿಕೆಯ ನಂತರ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ರವಾನೆ ಮಾಡಲಾಗುತ್ತದೆ.
ಇನ್ನು ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಹೊರಭಾಗದಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.