ಮಾಜಿ ಮುಖ್ಯಮಂತ್ರಿ(x chief minister) ಹಾಗೂ ಚಿಕ್ಕಬಳ್ಳಾಪುರ (chikkaballpura) ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಎಂ. ವೀರಪ್ಪ ಮೋಯಿಲಿ (veerappa moyili) ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ರು..ಈ ವೇಳೆ ಮಾತನಾಡಿದ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ನನಗೆ ಸಿಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1968ರಿಂದಲೂ ನಾನು ಕಾಂಗ್ರೇಸ್ಸಿನ ಕಟ್ಟಾಳು. ಪ್ರಸ್ತುತ ಲೋಕಸಭೆಯಲ್ಲಿ ನನಂಥ ಅಭ್ಯರ್ಥಗಳ ಅನಿವಾರ್ಯತೆ ಇದೆ. ಮನಮೋಹನ್ ಸಿಂಗ್ (manamohan singh) ಯು.ಪಿ.ಎ[U.P.A) ಅವಧಿಯಲ್ಲಿ ಸೋನಿಯಾ ಗಾಂಧಿ (sonia gandhi) ಪ್ರತಿನಿಧಿಯಾಗಿ ನಾನು ಕೆಲಸ ಮಾಡಿದ್ದೇನೆ. ನನಗೆ ಕಾಂಗ್ರೆಸ್ ಎಂ.ಪಿ ಟಿಕೆಟ್ ನೀಡುವಂತೆ ಲಾಭಿ ರಾಜಕೀಯ ಮಾಡಲ್ಲ. ನನ್ನ ಸೇವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅವಶ್ಯಕವಾಗಿದೆ ಎಂದರು.

ಇನ್ನು ಪ್ರದಾನಿ ನರೇಂದ್ರಮೋದಿ (prn narendra modi) ಬಗ್ಗೆ ಮಾತನಾಡಿದ ಮೋಯಿಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಒಳ್ಳೆ ಅಂಕರ್ (anchor), ಆದ್ರೆ ಒಳ್ಳೆ ಆಡಳಿತಗಾರ (administrator) ಅಲ್ಲ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆ.ಡಿ.ಎಸ್ ಮೈತ್ರಿ (bjp-jds alliance) ವಿಚಾರದಲ್ಲಿ ಮಾತನಾಡಿದ ಅವರು ಜೆ.ಡಿ.ಎಸ್ (jds) ಸಹವಾಸ ಮಾಡಿದವರು ಯಾರು ಉದ್ದಾರ ಆಗಿಲ್ಲ . ನಮ್ಮಿಂದಲೇ ದೇವೇಗೌಡರು ಪ್ರಧಾನಿಯಾಗಿದ್ದು ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಎಂದು ಟೀಕಿಸಿದರು.












