• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ

ಪ್ರತಿಧ್ವನಿ by ಪ್ರತಿಧ್ವನಿ
February 1, 2026
in Top Story, ಕರ್ನಾಟಕ, ರಾಜಕೀಯ
0
Vijayapura: 27 ಭೂ ಕಬಳಿಕೆ ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ
Share on WhatsAppShare on FacebookShare on Telegram

ವಿಜಯಪುರ:  ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ದಾಖಲಾಗಿದ್ದ 27 ಭೂ ಕಬಳಿಕೆ ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಗಿದ್ದು, ಈ ಸಂಬಂಧ ಒಟ್ಟು 200 ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT
Budget 2026 Live Updates: ವಿದೇಶದಲ್ಲಿ ವ್ಯಾಸಂಗ ಮಾಡೋರಿಗೆ ಟ್ಯಾಕ್ಸ್ ರಿಲೀಫ್। ಷೇರುಪೇಟೆ ಭಾರೀ ಕುಸಿತ

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 27 ಪ್ರಕರಣಗಳಲ್ಲಿ ತನಿಖೆ ಕೈಗೊಂಡು 25 ಪ್ರಕರಣಗಳಲ್ಲಿ 158 ಎಕರೆ 13 ಗುಂಟೆ ಭೂಮಿ ಹಾಗೂ 9 ಎನ್‌ಎ ಪ್ಲಾಟ್‌ಗಳನ್ನು ಮೂಲ ಮಾಲೀಕರಿಗೆ ಮರು ಒಪ್ಪಿಸಲಾಗಿದೆ ಎಂದು ತಿಳಿಸಿದರು. ಉಳಿದ ಎರಡು ಪ್ರಕರಣಗಳಲ್ಲಿ “ಬಿ” ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು.

ಭೂ ಕಬಳಿಕೆ ಪ್ರಕರಣಗಳ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡವು ಪ್ರಕರಣಗಳ ಸಂಪೂರ್ಣ ತನಿಖೆ ನಡೆಸಿದೆ ಎಂದು ಎಸ್ಪಿ ಹೇಳಿದರು.

DKS on Union Budget 2026: ಕೇಂದ್ರ ಬಜೆಟ್​ನಲ್ಲಿ ನಮ್ಮ ರಾಜ್ಯಕ್ಕೆ ಏನೂ ಕೊಟ್ಟಿಲ್ಲ ಎಂದ ಡಿಕೆಶಿ #pratidhvani

ತನಿಖೆಯ ವೇಳೆ, ಆರೋಪಿಗಳಲ್ಲಿ ಕೆಲವರು ಸಣ್ಣಪುಟ್ಟ ಪ್ಲಾಟ್ ಹಾಗೂ ಜಮೀನುಗಳನ್ನು ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರು ಹಾಗೂ ಸಬ್‌ರಜಿಸ್ಟ್ರಾರ್ ಕಚೇರಿಗಳಲ್ಲಿ ಕೆಲಸ ಮಾಡುವ ಬಾಂಡ್ ರೈಟರ್‌ಗಳಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಇವರು ಭೂಮಿ ಮಾರಾಟ ಮಾಡುವ ವ್ಯಕ್ತಿಗಳು ಯಾರು, ಆ ಭೂಮಿಗಳು ಎಲ್ಲಿವೆ ಮತ್ತು ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮುಂಚಿತವಾಗಿಯೇ ಸಂಗ್ರಹಿಸುತ್ತಿದ್ದರು ಎಂದು ಹೇಳಿದರು.

ಈ ಗ್ಯಾಂಗ್‌ಗಳು ಹೆಚ್ಚಾಗಿ ವಯಸ್ಸಾದವರು, ಒಂಟಿಯಾಗಿ ವಾಸಿಸುವವರು ಹಾಗೂ ಊರಿನಿಂದ ದೂರವಿರುವ ಭೂ ಮಾಲೀಕರನ್ನು ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದರು. ಬಡ ಹಾಗೂ ನಿರ್ಗತಿಕರನ್ನು ಗುರುತಿಸಿ ಅವರಿಗೆ ಹಣ ಸಹಾಯ ಮಾಡುವ ನೆಪದಲ್ಲಿ ಆಧಾರ್ ಕಾರ್ಡ್‌ಗಳನ್ನು ಪಡೆದು, ಮೂಲ ಭೂ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡಿ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದರು.

Gilli Nata : ಡಿಕೆ ಸಾಹೇಬರ ವಾಯ್ಸ್‌ ಕೇಳಿ ಭಯ ಆಯ್ತು #pratidhvani #dkshivakumar #gilli #kanakapura #watch

ನಂತರ ಈ ನಕಲಿ ದಾಖಲೆಗಳ ಆಧಾರದಲ್ಲಿ ಸಬ್‌ರಜಿಸ್ಟ್ರಾರ್ ಕಚೇರಿಗಳಲ್ಲಿ ಭೂಮಿ ಖರೀದಿ ಮಾಡಿಸಿಕೊಂಡು, ಸ್ವಲ್ಪ ಹಣ ನೀಡಿ ಉಳಿದ ಹಣವನ್ನು ನಂತರ ಕೊಡುತ್ತೇವೆ ಎಂದು ಭರವಸೆ ನೀಡುತ್ತಿದ್ದರು. ಕೆಲವೊಮ್ಮೆ ನಕಲಿ ಮಾಲೀಕರಿಂದ ಇತರ ಮುಗ್ಧ ಜನರ ಹೆಸರಿನಲ್ಲಿ ಖರೀದಿ ಮಾಡಿಸಿಕೊಂಡು, ನಂತರ ತಮ್ಮ ಹೆಸರಿನಲ್ಲಿ ಜಮೀನು ವರ್ಗಾವಣೆ ಮಾಡಿಕೊಳ್ಳುತ್ತಿದ್ದ ವಿಧಾನವೂ ಪತ್ತೆಯಾಗಿದೆ ಎಂದು ಎಸ್ಪಿ ವಿವರಿಸಿದರು.

ಖರೀದಿ ಪತ್ರಗಳಲ್ಲಿ ಮೋಸಗಾರರ ಗುಂಪಿನಲ್ಲಿರುವ ಇಬ್ಬರು ಅಥವಾ ಹೆಚ್ಚು ಮಂದಿ ಸಾಕ್ಷಿದಾರರಾಗಿ ಸಹಿ ಮಾಡುತ್ತಿದ್ದರೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೇ, ನಕಲಿ ಮಾಲೀಕರನ್ನು ಹಳ್ಳಿಗಳಿಗೆ ಮರಳದಂತೆ, ಹೊರ ರಾಜ್ಯಗಳಲ್ಲಿ ಉಳಿಯುವಂತೆ ವ್ಯವಸ್ಥೆ ಮಾಡಲಾಗುತ್ತಿತ್ತು ಎಂಬ ಅಂಶವೂ ಹೊರಬಂದಿದೆ.

Union Budget 2026 : ಮಹಿಳೆಯರಿಗಾಗಿ ʼಶೀ ಮಾರ್ಟ್‌ʼ ಯೋಜನೆ..! #STEMinstitutions, #pratidhvani

ತನಿಖೆಯ ಪ್ರಕಾರ ಸುಧಾಕರ ಸದಾಶಿವ ಕಮಲಾಕರ, ಭೀಮರಾಯ ಚಾಯಪ್ಪ ಕಟ್ಟಿಮನಿ, ಸುಧಾಕರ ಸಿದ್ದಣ್ಣ ಚರಾಟೆ, ಕಾಶೀನಾಥ ಗಂಗಾರಾಮ ರಾಠೋಡ, ದತ್ತಾತ್ರೇಯ ಎಸ್. ಶಿವಶರಣ, ರಫೀಕ ಅಬ್ದುಲ್ ಲತೀಫ ತುರ್ಕಿ, ನಾಗಪ್ಪ ಕೊಲಕಾರ, ಬಾಬುರಾವ ಗಂಗಪ್ಪ ಕೋಳಿ ಹಾಗೂ ಬಾಪು ದೊಂಡಿಬಾ ಕ್ಷೀರಸಾಗರ ಎಂಬವರು ಒಂದಕ್ಕಿಂತ ಹೆಚ್ಚು ಭೂ ಕಬಳಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

Tags: Landland grabbingland grabbing casesPoliceVijayapura
Previous Post

ಕೇಂದ್ರದಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

Next Post

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

Related Posts

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!
Top Story

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆಯ ಹರಿಹರ ಪಂಚಮಸಾಲಿ ಗುರು ಪೀಠದಿಂದ ಶ್ವಾಸಗುರು ವಚನಾನಂದ ಸ್ವಾಮೀಜಿಯವರನ್ನು ಉಚ್ಚಾಟಿಸಲಾಗಿದೆ. ಇಂದು ಸಭೆ ಸೇರಿದ್ಧ ಧರ್ಮ ದರ್ಶಿ ಮಂಡಳಿಯ 15 ಸದಸ್ಯರ...

Read moreDetails
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
Next Post
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು: ಕಾಂಗ್ರೆಸಿಗರ ಟೀಕೆಗೆ ಕುಮಾರಸ್ವಾಮಿ ಖಡಕ್‌ ಉತ್ತರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada