ಆಷಾಡ ಮಾಸ ಆರಂಭವಾಗಿರುವ ಹಿನ್ನಲೆ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ (Chamundi hill) ದರ್ಶನ ಪಡೆಯಲು ರಾಜ್ಯ ಸೇರಿದಂತೆ ದೇಶದ ಇತರೆ ಭಾಗಗಳಿಂದಲೂ ಸಹ ಭಕ್ತರು ಮೈಸೂರಿಗೆ (Mysuru) ಆಗಮಿಸುತ್ತಾರೆ.ಆಷಾಡ ಮಾಸದ ಶುಕ್ರವಾರದಂದು ತಾಯಿ ಚಾಮುಂಡಿ ದೇವಿಗೆ ವಿಷೇಶ ಪೂಜೆಯನ್ನು ಸಲ್ಲಿಸಲಾಗುತ್ತದೆ.ವಿವಿಧ ಅಲಂಕಾರಗಳಿಂದ ನಾಡದೇವತೆಯನ್ನು ಅಲಂಕರಿಸಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ.

ಹೀಗಾಗಿ ಆಷಾಡ ಮಾಸದ ಸಂದರ್ಭದಲ್ಲಿ ಯಾವುದೇ ಭಕ್ತಾದಿಗಳು ಬೆಟ್ಟಕ್ಕೆ ಸ್ವಂತ ವಾಹನಗಳನ್ನು ತರಲು ಅವಕಾಶ ಇರುವುದಿಲ್ಲ. ಬೆಟ್ಟದ ತಪ್ಪಲಿನಲ್ಲಿರುವ ಹೆಲಿಪ್ಯಾಡ್ (Helipad) ಬಳಿ ಪಾರ್ಕಿಂಗ್ ಮಾಡಿ ಅಲ್ಲಿಂದ ಸರ್ಕಾರ ವ್ಯವಸ್ಥೆ ಕಲ್ಪಿಸುವ ಬಸ್ಗಳ ಮೂಲಕ ಬೆಟ್ಟಕ್ಕೆ ತೆರಳಬೇಕು, ಇನ್ನೂ ಕೆಲವು ಭಕ್ತರು ಮಧ್ಯ ರಾತ್ರಿಯಿಂದಲೇ ಮೆಟ್ಟಿಗಳನ್ನು ಏರಲು ಆರಂಭಿಸಿ ಬೆಳಗ್ಗಿನ ಜಾನ ತಾಯಿ ಸನ್ನಿಧಾನವನ್ನು ತಲುಪಿ ದರ್ಶನ ಪಡೆಯಲು ಮುಂದಾಗುತ್ತಾರೆ.

ಹೀಗೆ ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳ ಪೈಕಿ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರ್ತಾರೆ. ಈ ಭಕ್ತರಿಗೆ ಸರಿಯಾದ ದರ್ಶನ ವ್ಯವಸ್ಥೆ ಕಲ್ಪಿಸುವಲ್ಲಿ ಮೈಸೂರು ಜಿಲ್ಲಾಡಳಿತ ವಿಫಲವಾಗಿದೆ ಎಂದು ಹಲವಾರು ಭಕ್ತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಗಂಟೆಗಟ್ಟಲೆ ಮೆಟ್ಟಿಗಳನ್ನು ಹತ್ತಿ ಬಂದು ದಣಿದಿರುತ್ತೇವೆ.ಆದ್ರೆ ಮತ್ತೆ ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗೆ ಧರ್ಮ ದರ್ಶನಕ್ಕೆ ಬರುವ ಭಕ್ತರು 8-9 ಗಂಟೆಗಳ ಕಾಲ ಕ್ಯೂನಲ್ಲಿ ಕಾದು ದರ್ಶನ ಪಡೆಯಬೇಕಾದ ಪರಿಸ್ಥಿತಿಯಿದೆ. ಈ ವೇಳೆ ಕೆಲ ಭಕ್ತರು ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ನಿದರ್ಶನವೂ ಇದೆ. ಆದ್ರೆ ಕೂಡಲೆ ಅವರನ್ನು ಗಮನಿಸಲು ಅಥವಾ ದರ್ಶನಕ್ಕೆ ವ್ಯವಸ್ಥೆ ಮಾಡಲು ಯಾವುದೇ ಸರಿಯಾದ ವ್ಯವಸ್ಥೆಗಳನ್ನು ರೂಪಿಸಿಲ್ಲ. ಪ್ರತೀ ಬಾರಿಯೂ ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತಿತ್ತು.ಆದ್ರೆ ಈ ಬಾರಿ ಜಿಲ್ಲಾಡಳಿತ ಮತ್ತು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಭಕ್ತರು ಅಸಮಾಧಾನ ಹೊರ ಹಾಕಿದ್ದಾರೆ.






