• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ: ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಡಿ ಬಾಸ್

ಪ್ರತಿಧ್ವನಿ by ಪ್ರತಿಧ್ವನಿ
February 16, 2023
in ಸಿನಿಮಾ
0
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನ: ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಡಿ ಬಾಸ್
Share on WhatsAppShare on FacebookShare on Telegram

ಬೆಂಗಳೂರು : ಕರ್ನಾಟಕದ ಇತಿಹಾಸದಲ್ಲಿ  ಕನ್ನಡ ಚಿತ್ರರಂಗದಲ್ಲೇ ಹೊಸ ಅಲೆಯನ್ನು ಸೃಷ್ಟಿಸಿದ ಅಭಿಮಾನಿಗಳ ಡಿ ಬಾಸ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ADVERTISEMENT

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ದರ್ಶನ್ ಅವರ ನಿವಾಸ ಬಳಿ ಆಗಮಿಸಿದ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.

ಬನ್ನೂರಿನ ಸಮಾಜ ಸೇವಕರು,ಬನ್ನೂರಿನ ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ದರ್ಶನ್ ರವರಿಗೆ ಉಡುಗೊರೆ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು.

ಯಾವುದೇ ಆಡಂಬರವಿಲ್ಲದೇ ದರ್ಶನ್ ರವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅವರ ಸಮಾಜ ಸೇವೆಗೆ ತಮ್ಮ ತಮ್ಮ ಕೈಲಾದ ಸಹಾಯವನ್ನು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಶುಭಾಶಯ ಕೋರಿದ್ದರು.

ಈ ಕುರಿತು ಡಾ.ಕೆ. ಮಹೇಂದ್ರ ಸಿಂಗ್ ಕಾಳಪ್ಪ ಮಾತನಾಡಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 46ನೇ ವರ್ಷದ ಹುಟ್ಟುಹಬ್ಬವು ಇಂದು ಸರಳವಾಗಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ತುಂಬಾನೇ ಖುಷಿಯಾಗಿದೆ ಎಂದು ತಿಳಿಸಿದರು.

ಯಾವುದೇ ಕೇಕ್ ಕತ್ತರಿಸುವುದು, ಸನ್ಮಾನ, ಸಮಾರಂಭವಿಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ನನಗೆ ಹಾಗೂ ಅವರ ಅಭಿಮಾನಿಗಳಿಗೆ ತುಂಬಾ ಖುಷಿ ತಂದಿದೆ. ರ್ಶನ್ ಅವರ ಸಮಾಜ ಸೇವೆಗೆ ಅವರ ಅಭಿಮಾನಿಗಳು ಧವಸ, ಧಾನ್ಯಗಳನ್ನು ಯತೇಚ್ಛವಾಗಿ ತಂದು ನೀಡುತ್ತಿದ್ದಾರೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ದರ್ಶನ್ ಅಭಿನಯದ 56ನೇ ಸಿನಿಮಾ ಕಾಟೇರಾದ ಟೈಟಲ್ ನ್ನು ಬಿಡುಗಡೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಇದರ ಹಿಂದಿನ ಚಿತ್ರ ಕ್ರಾಂತಿ ಸಿನಿಮಾ ಒಳ್ಳೆ ಮೆಸೇಜ್’ನೊಂದಿಗೆ ಸಾರ್ವಜನಿಕರ ಜನಮನ ತಲುಪಿದೆ. ಇದೆ ರೀತಿ ಮುಂದಿನ ದಿನಗಳಲ್ಲಿ ದರ್ಶನ್ ರವರು ಉತ್ತಮ ಚಿತ್ರಗಳನ್ನು ಸಮಾಜಕ್ಕೆ ನೀಡುತ್ತಾ ಬರಲಿ ಎಂದರು.

ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಕಲಾವಿದರುಗಳಾದ ಅಭಿಷೇಕ್ ಅಂಬರೀಶ್, ತರುಣ್ ಕಿಶೋರ್ ಸುಧೀರ್, ವಿನೋದ್ ಪ್ರಭಾಕರ್ ,ಚಿಕ್ಕಣ್ಣ, ಧರ್ಮಕೀರ್ತಿರಾಜ್, ಚಂದು, ಸಂತೋಷ್, ಪ್ರದೀಪ, ಸುರೇಶ್, ಲೋಕೇಶ್, ಸಿ.ಕೆ. ಮಹೇಶ್, ಪುಟ್ಟಬುದ್ದಿ, ನಾಗೇಶ್, ರಾಮು, ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಗೋವಿಂದರಾಜು, ಮೈಸೂರು ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜು, ಶಿವಕುಮಾರ್, ರೇಣುಕಾ ಸ್ವಾಮಿ, ಶ್ರೀನಿವಾಸ, ರಾಜೇಶ್  ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದರು.

Tags: challenging Star Darshan
Previous Post

‌ಈ ನೆಲದಲ್ಲಿ ರಾಮನ ಭಕ್ತರು ಇರಬೇಕು, ಟಿಪ್ಪು ಸಂತತಿ ಅಲ್ಲ: ನಳಿನ್‌ ಕುಮಾರ್‌ ಕಟೀಲ್

Next Post

ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಟ್ರೇಲರ್ ರಿಲೀಸ್:  ಮಾರ್ಚ್ 3ರಂದು ಸಿನಿಮಾ ಬಿಡುಗಡೆ

Related Posts

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”
Top Story

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

by ಪ್ರತಿಧ್ವನಿ
May 12, 2026
0

ಬೆಂಗಳೂರು : ದೇಶದ ಆರ್ಥಿಕ (Economy) ಭದ್ರತೆಯನ್ನು ಗಟ್ಟಿಗೊಳಿಸಲು ಮತ್ತು ವಿದೇಶಗಳಿಗೆ ಹರಿದುಹೋಗುತ್ತಿರುವ ಲಕ್ಷಾಂತರ ಕೋಟಿ ರೂಪಾಯಿಗಳ ‘ಡಾಲರ್’ ಹೊರಹರಿವಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ...

Read moreDetails
ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

ವಿಜಯ್‌ ಗೆಲುವನ್ನು MGR ರೀತಿ ಹೋಲಿಸಬಹುದು : ಸಮೀಕ್ಷೆಗಳು ಉಲ್ಟಾ ಹೊಡೆದಿದ್ದೇಕೆ..?

May 5, 2026
ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

ನಟ ದರ್ಶನ್ ಪ್ರಕರಣಕ್ಕೆ ಹೊಸ ತಿರುವು: ಜೈಲು ವರ್ತನೆ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನೆ

May 5, 2026
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ: ಕಾರಣವೇನು ಗೊತ್ತೆ ?

May 2, 2026
ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

ವಿಮಾನ ಪ್ರಯಾಣದ ಭಯ ಬಿಚ್ಚಿಟ್ಟ ಆಮೀರ್ ಖಾನ್: “ನನಗೆ ಏನಾದರೂ ಆದ್ರೆ ….

May 2, 2026
Next Post
ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಟ್ರೇಲರ್ ರಿಲೀಸ್:  ಮಾರ್ಚ್ 3ರಂದು ಸಿನಿಮಾ ಬಿಡುಗಡೆ

ಮಂಸೋರೆ ನಿರ್ದೇಶನದ ‘19.20.21’ ಚಿತ್ರದ ಟ್ರೇಲರ್ ರಿಲೀಸ್:  ಮಾರ್ಚ್ 3ರಂದು ಸಿನಿಮಾ ಬಿಡುಗಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada