ನವದೆಹಲಿ : ಭಾರತೀಯ ವಾಯುಪಡೆಯ (IAF) ಮುಖ್ಯಸ್ಥರಾಗಿ (Chief of the Air Staff) ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ (Ashutosh Dixit) ಅವರು ಇಂದುನೇಮಕಗೊಂಡಿದ್ದಾರೆ. ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಈ ಮಹತ್ವದ ನೇಮಕಾತಿ ನಡೆದಿದ್ದು, ಅವರು ಅಕ್ಟೋಬರ್ 31ರಂದು ಏರ್ ಚೀಫ್ ಮಾರ್ಷಲ್ ಹುದ್ದೆಯೊಂದಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರ ಅಧಿಕಾರಾವಧಿ 2028ರ ಡಿಸೆಂಬರ್ 31ರವರೆಗೆ ಇರಲಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.
ಅಶುತೋಷ್ ದೀಕ್ಷಿತ್ ಅವರು ದೇಶೀಯ ತಂತ್ರಜ್ಞಾನದ ಎಲ್ಸಿಎ ತೇಜಸ್ (LCA Tejas) ಸೇರಿದಂತೆ ಹಲವು ಯುದ್ಧ ವಿಮಾನ ಯೋಜನೆಗಳ ಸೇರ್ಪಡೆ ಮತ್ತು ಆಧುನೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇಂದ್ರ ಸರ್ಕಾರದ ರಕ್ಷಣಾ ವಲಯದ ‘ಆತ್ಮನಿರ್ಭರ ಭಾರತ’ ಯೋಜನೆಗೆ ಅವರ ನಾಯಕತ್ವದಲ್ಲಿ ಮತ್ತಷ್ಟು ಬಲ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಅಪಾರ ಹಾರಾಟ ಅನುಭವ ಹೊಂದಿರುವ ನುರಿತ ಯೋಧ
ಡಿಸೆಂಬರ್ 6, 1986ರಂದು ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ನಿಯೋಜನೆಗೊಂಡ ದೀಕ್ಷಿತ್ ಅವರು, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA), ಬಾಂಗ್ಲಾದೇಶದ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜು ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 3,500ಕ್ಕೂ ಹೆಚ್ಚು ಗಂಟೆಗಳ ಕಾಲ ಯುದ್ಧ ವಿಮಾನ ಹಾರಾಟ ನಡೆಸಿದ ಅಪಾರ ಅನುಭವವನ್ನು ಅವರು ಹೊಂದಿದ್ದಾರೆ.
Virl Video : ಹೆಲಿಕಾಪ್ಟರ್ ಇಳಿಯುವಾಗ ಜಾರಿ ಬೀಳುವುದರಿಂದ ಪಾರಾದ ಅಮೆರಿಕ ಉಪಾಧ್ಯಕ್ಷನ ಪತ್ನಿ ಉಷಾ ವ್ಯಾನ್ಸ್!
Air Marshal Ashutosh Dixit has been appointed as the new Chief of the Indian Air Force.
Widely known for pushing the indigenous LCA Tejas and other indigenous aircraft projects in the force, Air Marshal Dixit is expected to further promote the Aatmanirbharta initiative of the… https://t.co/CITeaK2sQ5 pic.twitter.com/Cj2t37g4op
— ANI (@ANI) October 6, 2026






