• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಅಸ್ಸಾಂ | ಬಿಜೆಪಿ ಸಂಸದನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

ಪ್ರತಿಧ್ವನಿ by ಪ್ರತಿಧ್ವನಿ
August 27, 2023
in ಇದೀಗ, ಕ್ರೀಡೆ
0
ಅಸ್ಸಾಂ

ಬಿಜೆಪಿ ಸಂಸದ ರಾಜದೀಪ್‌ ರಾಯ್‌

Share on WhatsAppShare on FacebookShare on Telegram

ಅಸ್ಸಾಂ ರಾಜ್ಯದ ಸಿಲ್ಚಾರ್ನಲ್ಲಿರುವ ಭಾರತೀಯ ಜನತಾ ಪಕ್ಷದ ಸಂಸದ ರಾಜದೀಪ್ ರಾಯ್ ಅವರ ನಿವಾಸದಲ್ಲಿ 10 ವರ್ಷದ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಭಾನುವಾರ (ಆಗಸ್ಟ್ 27) ವರದಿಯಾಗಿದೆ.

ADVERTISEMENT

ಶನಿವಾರ (ಆಗಸ್ಟ್ 26) ಬಾಲಕನ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (SMCH) ರವಾನಿಸಿದ್ದಾರೆ. 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಕೆಲವು ವರ್ಷಗಳಿಂದ ತನ್ನ ತಾಯಿ ಮತ್ತು ಅಕ್ಕನೊಂದಿಗೆ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ಮನೆಯಲ್ಲಿ ವಾಸಿಸುತ್ತಿದ್ದನು.

ಕ್ಯಾಚಾರ್ ಜಿಲ್ಲೆಯ ಪಲೋಂಗ್ ಘಾಟ್ ಪ್ರದೇಶದವರಾದ ಬಾಲಕನ ತಾಯಿ ಅಸ್ಸಾಂ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರ ನಿವಾಸದಲ್ಲಿ ಮನೆ ಕೆಲಸ ಮಾಡಿಕೊಂಡು ಇದ್ದರು. ಈ ಮಹಿಳೆ ಶಿಕ್ಷಣಕ್ಕಾಗಿ ಮಕ್ಕಳನ್ನು ಕೂಡ ಸಿಲ್ಚಾರ್ಗೆ ಕರೆತಂದಿದ್ದರು. ತಾಯಿ-ಇಬ್ಬರ ಮಕ್ಕಳ ಈ ಕುಟುಂಬ ಸಂಸದರ ಮನೆಯಲ್ಲಿಯೇ ವಾಸವಾಗಿದ್ದರು ಎಂದು ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಾಲಕ ನೇಣು ಬಿಗಿದುಕೊಂಡ ಕೋಣೆ ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರು ಬಾಗಿಕು ಮುರಿದು ಒಳಹೋದಾಗ ಹುಡುಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದನು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದನು. ಪ್ರಾಥಮಿಕ ವರದಿ ಪ್ರಕಾರ ಇದು ಆತ್ಮಹತ್ಯೆ ಎಂದು ತೋರುತ್ತದೆ. ವಿಡಿಯೋ ಗೇಮ್ ಆಡಲು ಮೊಬೈಲ್ ಫೋನ್ ಕೊಡದಿದ್ದಕ್ಕಾಗಿ ತಾಯಿಯ ಮೇಲೆ ಕೋಪಗೊಂಡಿದ್ದ ಎಂದು ಅವರ ಕುಟುಂಬ ಸದಸ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ರಾಜದೀಪ್ ರಾಯ್, ಬಾಲಕನ ತಾಯಿ ತನ್ನ ಮಗಳೊಂದಿಗೆ ದಿನಸಿ ಖರೀದಿಸಲು ಹೋಗಿದ್ದರು. ಅದಕ್ಕೂ ಮೊದಲು, ಬಾಲಕ ಆಕೆಗೆ ಮೊಬೈಲ್ ಫೋನ್ ನೀಡುವಂತೆ ಕೇಳಿದ್ದು, ತಾಯಿ ನಿರಾಕರಿಸಿದ್ದರು. ಪ್ರಾಥಮಿಕ ತನಿಖೆಗಳು ಇದು ಆತ್ಮಹತ್ಯೆಯ ಪ್ರಕರಣ ಎಂದು ಸೂಚಿಸುತ್ತಿದ್ದರೂ, ಅದರ ಬಗ್ಗೆ ನನಗೆ ಖಚಿತವಿಲ್ಲ. ನಾನು ಜಿಲ್ಲೆಯ ಉನ್ನತ ಪೊಲೀಸರೊಂದಿಗೆ ಮಾತನಾಡಿದ್ದೇನೆ ಮತ್ತು ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಕೇಳಿದ್ದೇನೆ. ಆ ಬಾಲಕನಿಗೆ ಉತ್ತಮ ಜ್ಞಾನವಿತ್ತು. ಈ ಸಾವಿನಿಂದ ನನ್ನ ಕುಟುಂಬವೂ ಆಘಾತಕ್ಕೊಳಗಾಗಿದೆ ಎಂದರು.

Tags: AssamBJP MP Rajdeep Royboyಅಸ್ಸಾಂಬಾಲಕಬಿಜೆಪಿ ಸಂಸದ ರಾಜದೀಪ್‌ ರಾಯ್‌
Previous Post

ಮಧುರೈ ರೈಲು ದುರಂತ | ಟೂರ್ ಆಪರೇಟರ್ ವಿರುದ್ಧ ಪ್ರಕರಣ ದಾಖಲು

Next Post

ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಒಂದೇ ವೇದಿಕೆ ಹಂಚಿಕೊಂಡ ನಟ ದರ್ಶನ್‌, ಕಿಚ್ಚ ಸುದೀಪ್

Related Posts

39ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದರಾ ಸಾನಿಯಾ ಮಿರ್ಜಾ? ಎರಡನೇ ಮದುವೆ ಬಗ್ಗೆ ಕೊಟ್ಟ ಸುಳಿವೇನು?
ಕ್ರೀಡೆ

39ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದರಾ ಸಾನಿಯಾ ಮಿರ್ಜಾ? ಎರಡನೇ ಮದುವೆ ಬಗ್ಗೆ ಕೊಟ್ಟ ಸುಳಿವೇನು?

by Shivakumar
November 7, 2026
0

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ? 39ನೇ ವಯಸ್ಸಿನಲ್ಲಿ ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ? ಎಂಬ ಕುತೂಹಲದ ಪ್ರಶ್ನೆಗಳು ಇದೀಗ ಅಭಿಮಾನಿಗಳಲ್ಲಿ ಮೂಡಿವೆ....

Read moreDetails
ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ–ಪಾಕಿಸ್ತಾನ ಮಹಾಸಮರ; ನಾಳೆ ಹೈವೋಲ್ಟೇಜ್ ಪಂದ್ಯ!

ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ–ಪಾಕಿಸ್ತಾನ ಮಹಾಸಮರ; ನಾಳೆ ಹೈವೋಲ್ಟೇಜ್ ಪಂದ್ಯ!

November 7, 2026
Mohammed Shami announces retirement from Test cricket

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮೊಹಮ್ಮದ್ ಶಮಿ: 13 ವರ್ಷಗಳ ಕೆಂಪು ಚೆಂಡಿನ ಪಯಣಕ್ಕೆ ತೆರೆ

November 7, 2026
ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯದ ಸ್ಥಳ ಸ್ಥಳಾಂತರ; ಕಾರಣವೇನು?

ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯದ ಸ್ಥಳ ಸ್ಥಳಾಂತರ; ಕಾರಣವೇನು?

November 5, 2026
BREAKING NEWS: Cristiano Ronaldo announces retirement from international football

BREAKING NEWS : ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ ಘೋಷಣೆ

November 5, 2026
Next Post
ನಟ ದರ್ಶನ್‌

ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಒಂದೇ ವೇದಿಕೆ ಹಂಚಿಕೊಂಡ ನಟ ದರ್ಶನ್‌, ಕಿಚ್ಚ ಸುದೀಪ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada