ಬೌರಿಂಗ್ ಆಸ್ಪತ್ರೆಯಲ್ಲಿ (Bouring hospital) ಪ್ರಜ್ವಲ್ ರೇವಣ್ಣ (Prajwal revanna) ವೈದ್ಯಕೀಯ ಪರೀಕ್ಷೆ ನಡೆಸಲು (Medical test) ಎಸ್.ಐ.ಟಿ (SIT) ಸಿದ್ದತೆ ಮಾಡಿಕೊಂಡಿದೆ. ಈ ಬಗ್ಗೆ ಎಸ್.ಐ.ಟಿ ಯಿಂದ ಬೌರಿಂಗ್ ಆಸ್ಪತ್ರೆ ವೈದ್ಯರಿಗೆ ಅಧಿಕೃತ ಮೆಮೋ ರವಾನೆ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣರನ್ನು ಮೆಡಿಕಲ್ ಚೆಕಪ್ ಗೆ ಕರೆತರುತ್ತಿರೋದಾಗಿ ಈ ಮೆಮೋನಲ್ಲಿ ತಿಳಿಸಲಾಗಿದೆ.ಬೆಳಗ್ಗೆ 10:30 ರ ನಂತರ ಮೆಡಿಕಲ್ ಚೆಕಪ್ ಗೆ ಕರೆತರೋದಾಗಿ ಮೆಮೋ ಕಳಿಸಿದ್ದ ಎಸ್.ಐ.ಟಿ ಮಾಹಿತಿ ನೀಡಿದೆ.
ಕೆಲವೇ ಕ್ಷಣಗಳಲ್ಲಿ ಪ್ರಜ್ವಲ್ ರನ್ನ ಮೆಡಿಕಲ್ ಚೆಕಪ್ ಗೆ ಕರೆದೊಯ್ಯಲಿರೋ ಎಸ್.ಐ.ಟಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.