ಸೇನೆಯ ಅಲ್ಪಾವಧಿ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಭುಗಿಲೆದಿದ್ದು ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಬಿಹಾರ ಸರ್ಕಾರ ತನ್ನ 20 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಈ ಮೊದಲು ಜೂನ್ 17 ರಿಂದ 12 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನ ಸ್ಥಗೊತಗೊಳಿಸಲಾಗಿತ್ತು. ಈಗ ಹೆಚ್ಚವರಿಯಾಗಿ 8 ಜಿಲ್ಲೆಗಳಲ್ಲಿ ಸೇವೆ ಸ್ಥಗಿತಗೊಳಿಸಲಾಗಿದೆ.
ಇಂಟರ್ನೆಟ್ ಸ್ಥಗಿತದಿಂದಾಗಿ ರಾಜ್ಯದಲ್ಲಿ ಪ್ರತಿಭಟನೆಗಳು ಹಾಗು ವಿದ್ವಂಸಕ ಕೃತ್ಯಗಳು ಕಡಿಮೆಯಾಗಿವೆ. ಸಮಾಜ ವಿರೋಧಿ ಶಕ್ತಿಗಳು ವದಂತಿಗಳನ್ನು ಹರಡದಂತೆ ರಾಜ್ಯ ಸರ್ಕಾರ ತಡೆದಿದೆ ಎಂದು ಗೃಹ ಇಲಾಖೆ ಹೇಳಿದೆ.

ಕೈಮುರ್, ಭೋಜಪುರ್, ಓರಂಗಬಾದ್, ರೋಹ್ತಾಸ್, ಬುಕ್ಸಾರ್, ನವಾಡ, ಪಶ್ಚಿಮ ಚಂಪಾರಣ್, ಸಂಸ್ತಿಪುರ್, ಲಕ್ಕಿಸರೈ, ಬೇಗುಸರೈ, ವೈಶಾಲಿ, ಮುಜಾಫುರ್ಪುರ, ಮೋತಿಹರಿ, ದರ್ಬಂಗಾ, ಗಯಾ, ಮಧುಬನಿ, ಜಹಾನಬಾದ್, ಕಗಾರಿಯಾ ಹಾಗೂ ಶೇಕ್ಪುರದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಇದೇ ವೇಳೆ ರಾಜ್ಯದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗಳಲ್ಲಿ ಸಶಸ್ತ್ರ ಸೀಮಾ ಬಲ(SSB) ಪಡೆಯನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಬಿಜೆಪಿ ನಾಯಕರಿಗು ಸಹ ಭದ್ರತೆಯನ್ನ ಹೆಚ್ಚಿಸಲಾಗಿದೆ.






