ಬಿಗ್ ಬಾಸ್ ಕನ್ನಡ ಸೀಸನ್ 11, 75ನೆ ದಿನಕ್ಕೆ ಕಾಲಿಟ್ಟಿದ್ದು ಕಂಟೆಸ್ಟೆಂಟ್ ಎಲ್ಲರೂ ಕೂಡ ಟಾಸ್ಕ್ ಗಳಲ್ಲಿ ಬಿಸಿ ಆಗಿದ್ದಾರೆ. ಉಸ್ತುವಾರಿಗಳು ನೀಡಿದ ತೀರ್ಪೆ ಅಂತಿಮ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಎರಡು ಟಾಸ್ಕ್ಗಳಿಗೆ ಚೈತ್ರ ಉಸ್ತುವಾರಿ ಮಾಡ್ತಾರೆ.

ಮೊನ್ನೆ ನಡೆದ ಎಪಿಸೋಡ್ ನಲ್ಲಿ ಚೈತ್ರ ಉಸ್ತುವಾರಿ ತುಂಬಾನೇ ಕಳಪೆಯಾಗಿದ್ದು ತಮ್ಮ ತಂಡಕ್ಕೆ ಸಪೋರ್ಟ್ ಮಾಡಲು ಅಪೋಸಿಟ್ ತಂಡಕ್ಕೆ ಸುಮ್ಮನೆ ಪೋಸನ್ನ ನೀಡಿ ತಂಡವನ್ನು ಸೋಲಿಸಿದರು. ಇದು ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲದೆ ಪ್ರೇಕ್ಷಕರಿಗೂ ಕೂಡ ಬೇಸರವನ್ನು ಮೂಡಿಸಿದೆ.
ಮೊನ್ನೆ ಟಾಸ್ಕ್ ಗಳಂತು ಮುಗಿದು ಹೋಯ್ತು. ನೆನ್ನೆ ಆದ್ರೂ ಚೈತ್ರ ಅವರು ಉಸ್ತುವಾರಿಯನ್ನ ಸರಿಯಾಗಿ ಮಾಡ್ತಾರೆ ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆದರೆ ನಿನ್ನೆ ಕೂಡ ಚೈತ್ರ ಅವರ ಉಸ್ತುವಾರಿ ತುಂಬಾನೇ ಕಳಪೆಯಾಗಿದ್ದು, ಮತ್ತೆ ಆಪೋಸಿಟ್ ಅಂದ್ರೆ ರಜತ್ ತಂಡದವರ ಮೇಲೆ ಸುಳ್ಳು ಹೇಳಿ ಆಟವನ್ನು ನಿಲ್ಲಿಸಿದ್ರು.

ಚೈತ್ರಾ ಕೊಡಬೇಕಿದ್ದ ಪಾಯಿಂಟ್ಸ್ ಅನ್ನು ಕೊಡದೆ ಮತ್ತೆ ಆಟವನ್ನು ಆಡೋಣ ಎಂಬ ಮಾತುಗಳನ್ನು ಕೂಡ ಅಡಿದ್ರು. ಇದಕ್ಕೆ ಒಪ್ಪದಂತಹ ಮತ್ತೊಬ್ಬ ಉಸ್ತುವಾರಿಯ ಹನುಮಂತ ಈ ಆಟ ರದ್ದಾದರೂ ಆಗಲಿ ನನಗೆ ಮಾತ್ರ ಪಾಯಿಂಟ್ಸ್ ಬೇಕು ಎಂಬ ಮಾತುಗಳನ್ನು ಆಡ್ತಾರೆ. ಇದೇ ವಿಚಾರವಾಗಿ ಮನೆಯಲ್ಲಿ ಕಂಟೆಸ್ಟೆಂಟ್ಗಳ ನಡುವೆ ವಾದ ವಿವಾದವು ನಡೆಯುತ್ತದೆ.
ಕೊನೆಯಲ್ಲಿ ಬಿಗ್ ಬಾಸ್ ಆಟವನ್ನು ರದ್ದು ಮಾಡುತ್ತಾರೆ ಅಷ್ಟೇ ಅಲ್ಲದೆ ಎರಡು ತಂಡಗಳ ನಾಯಕರು ತಮ್ಮ ತಂಡದ ಒಬ್ಬೊಬ್ಬರನ್ನು ಡೈರೆಕ್ಟ್ ನಾಮಿನೇಟ್ ಮಾಡಬೇಕೆಂದು ಹೇಳುತ್ತಾರೆ. ರಜತ್ ತಮ್ಮ ತಂಡದಿಂದ ಹನುಮಂತ ಅವರನ್ನು ನಾಮಿನೇಟ್ ಮಾಡಿದ್ರೆ ತ್ರಿವಿಕ್ರಮ್ ಅವರು ಸ್ವತಹ ತಮ್ಮನ್ನೇ ನಾಮಿನೇಟ್ ಮಾಡಿಕೊಳ್ಳುತ್ತಾರೆ.

ಇನ್ನು ಬಿಗ್ ಬಾಸ್ ಇಂದಿನ ಪ್ರೊಮೋ ಹೊರ ಬಿದ್ದಿದ್ದು, ಪಕ್ಷಪಾತಿ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಶಕ್ತ, ಜನನಿರ್ವಹಣೆಯಲ್ಲಿ ಅಶಕ್ತ ಇಷ್ಟರಲ್ಲಿ ಯಾರೂ ಯಾವ್ದುದಕ್ಕೆ ಸೂಕ್ತ ಎಂದು ಯೋಚಿಸಿ ಅವರ ಫೋಟೋವನ್ನು ಬೋರ್ಡ್ ಮೇಲೆ ಅಂಟಿಸಬೇಕು. ಹಾಗೂ ಕಾರಣಗಳನ್ನು ಕೂಡ ನೀಡಬೇಕು ಮತ್ತು ಆ ವ್ಯಕ್ತಿಯನ್ನು ಸ್ವಿಮ್ಮಿಂಗ್ ಪೂಲ್ ಗೆ ತಳ್ಳಬೇಕು.ಇನ್ನು ಪಕ್ಷಪಾತಿ ಎಂದು ಚೈತ್ರ ಅವರ ಹೆಸರು ಹೆಚ್ಚಾಗಿ ಕೇಳಿಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ತಂಡಗಳ ನಡುವೆ ರೋಷ ಆವೇಶ ಜೋರಾಗಿ ಇದ್ದು ಯಾವ ತಂಡದ ಸದಸ್ಯರು ನಾಮಿನೇಟ್ ಆಗ್ತಾರೆ ಎಂಬುದನ್ನ ಕಾದು ನೋಡಬೇಕು