ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಮಹಾರಾಜ ಮಂಜು ಮತ್ತು ಅವರ ಪ್ರಜೆಗಳು, ಯುವರಾಣಿ ಮೋಕ್ಷಿತಾ ಹಾಗೂ ಅವರ ಸಹಚರರಿಗೆ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಟಾಸ್ಕ್ ಆಡುವವೇಳೆ ಉಸ್ತುವಾರಿ ಚೈತ್ರಾ , ತ್ರಿವಿಕ್ರಮ್ ಮತ್ತು ಭವ್ಯ ನಡುವೆ ಮಾತಿನ ಚಕಮಕಿ ಜೋರಾಗಿಯೆ ನಡೆಯುತ್ತದೆ.
ಇನ್ನು ಶುಕ್ರವಾರ ಬಂತು ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಯಾರು ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡೋದು ಸಹಜ, ಜೊತೆಗೆ ಉತ್ತಮ ಹಾಗೂ ಕಳಪೆ ಯಾರಿಗೆ ಸಿಗುತ್ತೆ ಅನ್ನುವ ಊಹೆಯನ್ನು ಜನ ಮಾಡ್ತಾನೆ ಇರ್ತಾರೆ.
ಸದ್ಯ ಬಿಗ್ ಬಾಸ್ ನ ಪ್ರೋಮೋ ಹೊರಬಿದ್ದಿದ್ದು , ಈ ಬಾರಿ ಶೋಭಾ ಶೆಟ್ಟಿ ಕಳಪೆಗೆ ಹೋಗುತ್ತಾರೆ..ಹಾಗೂ ಸ್ಪರ್ಧಿಗಳು ನೀಡುವ ಕಾರಣ ಈ ವಾರ ಯಾವುದೇ ಟಾಸ್ಕ್ ನಲ್ಲಿ ಪರ್ಫಾಮೆನ್ಸ್ ಅಷ್ಟರ ಮಟ್ಟಿಗೆ ಇರಲಿಲ್ಲ ಎಂಬುವುದು.. ಇದಕ್ಕೆ ಶೋಭಾ ಕಣ್ಣೀರು ಹಾಕ್ತಾರೆ.
ಹಾಗೂ ಕ್ಯಾಪ್ಟನ್ ಯಾರು ಎನ್ನುವ ಕುತೂಹಲ ಎಲ್ಲರಲ್ಲು ಮೂಡಿರುವುದು ಸಹಜ..ಹೌದು ಎಲ್ಲ ಟಾಸ್ಕ್ ನಲ್ಲಿ ಪರ್ಫಾಮೆನ್ಸ್ ನೀಡಿ ಧನರಾಜ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ದೊರಕಿದೆ..ಇನ್ನು ಉತ್ತಮ ಯಾರಿರಬಹುದು ಎಂಬುವ ಚರ್ಚೆಗಳು ನಡೆಯುತ್ತಿದ್ದು ಮೋಕ್ಷಿತಾ ಅವರಿಗೆ ಸಿಗಬೇಕು ಎಂಬ ಕಾಮೆಂಟ್ಗಳು ಹೆಚ್ಚಿವೆ.