ಕೋಲ್ಕತಾದ ಅಪಾರ್ಟ್ ಮೆಂಟ್ ನಲ್ಲಿ ಬೆಂಗಾಲಿಯ ಮತ್ತೊಬ್ಬ ರೂಪದರ್ಶಿ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದ್ದು, ವಾರದಲ್ಲಿ 2ನೇ ರೂಪದರ್ಶಿ ಶವ ಪತ್ತೆಯಾದಂತಾಗಿದೆ.
ಕೋಲ್ಕತಾದ ಅಪಾರ್ಟ್ ಮೆಂಟ್ ನಲ್ಲಿ ಮಂಜುಶಾ ನಿಯೋಗಿ ಶವ ಪತ್ತೆಯಾಗಿದೆ. ಕಳೆದ ಮೂರು ದಿನದಲ್ಲಿ 2ನೇ ಹಾಗೂ 2 ವಾರದಲ್ಲಿ ಮೂರನೇ ಈ ರೀತಿಯ ಪ್ರಕರಣ ಕೋಲ್ಕತಾದಲ್ಲಿ ನಡೆದಿರುವುದು ಆಘಾತಕಾರಿಯಾಗಿದೆ.
ಪಟುಲಿ ಬಡಾವಣೆಯ ಅಪಾರ್ಟ್ ಮೆಂಟ್ ನಲ್ಲಿ ಮಂಜುಶಾ ನಿಯೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಬಿದಿಶಾ ಡೆ ಮಂಜುಂದಾರ್ ಸಾವಿನ ಪ್ರಕರಣದಿಂದ ಮಂಜುಶಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಆಕೆಯ ತಾಯಿ ಆರೋಪಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆಯಷ್ಟೇ ಅಪಾರ್ಟ್ ಮೆಂಟ್ ನ ಮೊದಲ ಮಹಡಿಯ ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ನಟಿ ಬಿದಿಶಾ ಬುಧವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು, ಡೆತ್ ನೋಟ್ ಪತ್ತೆಯಾಗಿತ್ತು.
ಅನುಭವ್ ಮೆಹ್ರಾ ಎಂಬಾತ ಈ ನಟಿಯ ಬಾಯ್ ಫ್ರೆಂಡ್ ಆಗಿದ್ದು, ಈತನ ಸ್ನೇಹ ಬೆಳೆಸಿದ ನಂತರ ಬಿದಿಶಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು ಎಂದು ಆಕೆಯ ಸ್ನೇಹಿತರು ಆರೋಪಿಸಿದ್ದಾರೆ.