ರಾಯಚೂರು, ಜನವರಿ 20: ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ನಡೆದ ಹಲ್ಲೆ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ. ಇದನ್ನು ಖಂಡಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದ್ದಾರೆ.
ರಾಯಚೂರು ಪ್ರವಾಸದಲ್ಲಿರುವ ಸಚಿವ ಲಾಡ್ ಅವರು, ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾನವೀಯತೆ ಇರುವ ಯಾರೂ ಈ ಕೃತ್ಯವನ್ನು ಒಪ್ಪಿಕೊಳ್ಳಲಾರರು. ಕಷ್ಟಪಟ್ಟು ದುಡಿಯುವ ಇಂಥ ಅಮಾಯಕ ಜೀವಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕಿರಾತಕರನ್ನು ಈಗಾಗಲೇ ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾನೂನಿನ ಕಠಿಣ ಕ್ರಮ ಪರಿಹಾರ ಮಾತ್ರವಲ್ಲ. ಎಲ್ಲರ ಮನಸ್ಥಿತಿಗಳು ಬದಲಾಗಬೇಕು. ಕಾರ್ಮಿಕ ಅಂತ ಅಲ್ಲಾ ಯಾರ ಮೇಲೂ ಹಲ್ಲೆ ನಡೆಯಬಾರದು. ಇಂತಹ ಮನಸ್ಥಿತಿಯನ್ನ ನಾವು ವಿರೋಧಿಸಬೇಕು ಎಂದರು.
ಪ್ರಕರಣ ಏನು
ಸಂಕ್ರಾಂತಿ ಹಬ್ಬ ಆಚರಣೆಗೆ ಹೋಗಿದ್ದ ಕಾರ್ಮಿಕರು ಹಿಂದಿರುಗುವುದು ತಡವಾಗಿದ್ದಕ್ಕೆ ಮೂವರ ಕಾರ್ಮಿಕರ ಪಾದಗಳಿಗೆ ಕಟ್ಟಿಗೆ, ಪೈಪ್ಗಳಿಂದ ಹಲ್ಲೆ ಮಾಡಲಾಗಿದೆ. ಈ ದೃಶ್ಯಗಳು ವೈರಲ್ ಆಗಿತ್ತು. ಅಮಾನವೀಯ ಹಲ್ಲೆ ಸಂಬಂಧ ಪ್ರಕರಣ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಹಲ್ಲೆಗೊಳಗಾದ ಕಾರ್ಮಿಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.