
ಪಾಕಿಸ್ತಾನ ಉಗ್ರರನ್ನು ಪೋಷಣೆ ಮಾಡುತ್ತಿದೆ ಎನ್ನುವುದು ಇಡೀ ವಿಶ್ವಕ್ಕೇ ಗೊತ್ತಿರೋ ಸಂಗತಿ. ಇದೀಗ ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ತೆಗೆದುಕೊಳ್ತಿರೋ ನಿಲುವು ನೆರೆಯ ಪಾಪಿಸ್ತಾನಕ್ಕೆ ಹೊಡೆತ ಕೊಡ್ತಿರೋದು ಕೂಡ ಸತ್ಯ. ಈ ನಡುವೆ ಉಗ್ರರ ದಾಳಿ ವಿಚಾರವಾಗಿ ಪಾಕಿಸ್ತಾನಕ್ಕೆ ಚೀನಾ ಬೆಂಬಲ ವ್ಯಕ್ತಪಡಿಸಿದೆ. ಪಹಲ್ಗಾಮ್ ದಾಳಿಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಯಾರ ಕೈವಾಡವಿದೆ ಎಂಬುದು ತನಿಖೆಯಿಂದ ಗೊತ್ತಾಗಲಿ ಅಂತ ಹೇಳೋ ಮೂಲಕ ಪರೋಕ್ಷವಾಗಿ ಪಾಕಿಸ್ತಾನದ ಹೇಳಿಕೆ ಬಲಬರುವಂತೆ ಮಾಡಿದೆ. ಈ ಮೂಲಕ ಪಾಕ್ ಕೈವಾಡವಿಲ್ಲ ಅಂತ ವಾದ ಶುರು ಮಾಡಿದೆ ಚೀನಾ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಪಾಕಿಸ್ತಾನದ ಉಪ ಪ್ರಧಾನಿ ಹಾಗೇ ವಿದೇಶಾಂಗ ಸಚಿವರಾಗಿರೋ ಇಶಾಕ್ ದಾರ್ ನಡುವಿನ ಫೋನ್ ಸಂಭಾಷಣೆಯ ನಂತರ ಚೀನಾ ಈ ರೀತಿಯ ಸ್ಟೇಟ್‌ಮೆಂಟ್ ನೀಡಿದೆ. ಆದರೂ ಭಾರತ ಮಾತ್ರ ಯಾರ ಮಾತಿಗೂ ಕಿವಿ ಕೊಡುವ ಕೆಲಸ ಮಾಡ್ತಿಲ್ಲ. ಭಾರತದ ಕೋಪಕ್ಕೆ ಸಿಲುಕಿರುವ ಪಾಕಿಸ್ತಾನ ಮುಂದೇನು ಮಾಡುವುದು ಎನ್ನುವಂತಾಗಿದೆ. ಪಾಕ್ ಸೇನೆಯ ಸಾವಿರಾರು ಸೈನಿಕರು, ಸೇನಾಧಿಕಾರಿಗಳು ರಾಜೀನಾಮೆ ಕೊಡುತ್ತಿದ್ದಾರೆ ಅನ್ನೋ ವರದಿಗಳು ಬಂದಿವೆ.

ಭಾರತ – ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದ್ದು, ದಾಳಿ ಮಾಡೋಕೆ ಭಾರತೀಯ ಪಡೆ ಎಲ್ಲಾ ರೀತಿ ತಯಾರಿ ಮಾಡಿಕೊಳ್ತಿದೆ. ಇದೇ ಸಮಯದಲ್ಲಿ ಪಾಕಿಸ್ತಾನ ಸೈನ್ಯದ ಸೈನಿಕರು ರಾಜೀನಾಮೆ ಕೊಡ್ತಿದ್ದಾರಾ..? ಅನ್ನೋ ಅನುಮಾನ ಶುರುವಾಗಿದೆ. ಯುದ್ಧದ ಭೀತಿಯಿಂದಾಗಿ 250ಕ್ಕೂ ಹೆಚ್ಚು ಅಧಿಕಾರಿಗಳೂ ಸೇರಿ 1,200 ಸೈನಿಕರು ರಾಜೀನಾಮೆ ಕೊಟ್ಟಿದ್ದಾರೆ ಅನ್ನೋ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಪಾಕ್ನ ರಾವಲ್ಪಿಂಡಿ ಸೇನಾ ಕಚೇರಿಯಿಂದಲೇ ರಾಜೀನಾಮೆ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ ಎಂದು ಸುದ್ದಿಯಾಗ್ತಿದೆ.

ಈ ನಡುವೆ ನಮ್ಮ ಬಳಿ 137 ಅಣು ಬಾಂಬ್ಗಳಿವೆ.. ಸಿಂಧೂ ನದಿ ನೀರು ನಿಲ್ಲಿಸಿದ್ರೆ, ರಕ್ತ ಹರಿಸ್ತೀವಿ ಅಂತೆಲ್ಲ ಪಾಕಿಸ್ತಾನದ ಕೆಲ ರಾಜಕಾಣಿಗಳು ಜಂಭ ಕೊಚ್ಚಿಕೊಂಡಿದ್ರು. ಇದೀಗ ಇಕ್ಕಟ್ಟಿಗೆ ಸಿಲುಕಿರೋ ಪ್ರಧಾನಿ ಶಹಬಾಜ್ ಷರೀಫ್, ಮಾಜಿ ಪ್ರಧಾನಿ ಹಾಗೂ ಸಹೋದರ ನವಾಜ್ ಷರೀಫ್ ಅವರನ್ನ ಭೇಟಿಯಾಗಿ ಮುಂದೆ ಯಾವ ಕ್ರಮ ತಗೆಗೆದುಕೊಳ್ಳಬೇಕು ಅನ್ನೋ ಬಗ್ಗೆ ಚರ್ಚಿಸಿದ್ದಾರೆ. ಲಾಹೋರ್‌ನಲ್ಲಿ ನವಾಜ್ ಷರೀಫ್ ಭೇಟಿ ವೇಳೆ, ಯಾವುದೇ ಕಾರಣಕ್ಕೂ ಯುದ್ಧ ಬೇಡ, ಭಾರತವನ್ನ ಎದುರು ಹಾಕಿಕೊಂಡ್ರೆ, ಇಡೀ ದೇಶಕ್ಕೆ ಕಷ್ಟ. ಹೀಗಾಗಿ ಸೌಹಾರ್ದಯುತವಾಗಿ ಮುನ್ನಡೆಯಿರಿ ಅಂತ ಸಂದೇಶ ನೀಡಿದ್ದಾರೆ ಎನ್ನಲಾಗ್ತಿದೆ..

