ನಟ ಕಮಲ್ ಹಾಸನ್ ಗೆ (Kamal hasan) ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ತಮ್ಮ ಥಗ್ ಲೈಫ್ (Thug life) ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಪೊಲೀಸರು ಮತ್ತು ಯಾರಿಂದಲೂ ತೊಂದರೆಯಾಗದ ರೀತಿ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ ನಟ ಕಮಲ್ ಹಾಸನ್ ಗೆ ಹೈಕೋರ್ಟ್ (Highcourt) ಛೀಮಾರಿ ಹಾಕಿದೆ.

ಈ ರೀತಿಯ ಪರಿಸ್ಥಿತಿ ನಿರ್ಮಾಣ ಆಗೋದಕ್ಕೆ ಕಮಲ್ ಹಾಸನ್ ಅವರೇ ಕಾರಣ. ಕರ್ನಾಟಕದಲ್ಲಿ ಭಾಷೆ ಎಂಬುದು ನಮ್ಮ ಜನರ ಭಾವನೆಗೆ ಸಂಬಂಧಪಟ್ಟ ವಿಚಾರ. ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿ ಕ್ಷಮೆ ಕೇಳದೇ ಉದ್ಧಟತನ ತೋರಿ ಈಗ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ರೆ ಹೇಗೆ..? ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಕಮಲ್ ಹಾಸನ್ ಪರ ವಕೀಲರಿಗೆ ಚಾಟಿ ಬೀಸಿದ್ದಾರೆ.

ಮೊದಲು ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲಿ..ಆ ನಂತರ ನಾವು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತೇವೆ ಯೃಂದು ಹೈಕೋರ್ಟ್ ಹೇಳಿದ್ದು, ನಟ ಕಮಲ್ ಹಾಸನ್ ಗೆ ತೀವ್ರ ಹಿನ್ನಡೆಯಾಗಿದೆ. ಹೀಗಾಗಿ ಈಗ ನಟ ಕಮಲ್ ಹಾಸನ್ ಗೆ ಕನ್ನಡಿಗರ ಮುಂದೆ ಮಂಡಿಯೂರಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.