ಅಭಿಮಾನಿಗಳಿಗೆ ಈ ಬಾರಿ ಗುಡ್ ನ್ಯೂಸ್(good news) ನೀಡಬೇಕು ಅಂತ ಆರ್‌ಸಿಬಿ (rcb) ಫ್ರಾಂಚೈಸಿ ಎಲ್ಲಾ ತಯಾರಿ ನಡೆಸಿದೆ. ಅದ್ರ ಭಾಗವಾಗಿ ಒಂದೊಂದೇ ಪ್ರೋಮೋಗಳು (promo) ರಿಲೀಸ್ ಆಗ್ತಿದೆ. ಇದೀಗ ಆರ್‌ಸಿಬಿ ಅನ್ ಬಾಕ್ಸಿಂಗ್ ಮೂರನೇ ಪ್ರೋಮೋ (Rcb unboxing promo) ರಿಲೀಸ್ ಆಗಿದ್ದು, ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ (Kichha sudeep) ಆರ್‌ಸಿಬಿ ಫ್ಯಾನ್ಸ್ ಗೆ ಡೈರೆಕ್ಟ್ ಹಿಂಟ್(Hint) ಕೊಟ್ಟಿದ್ದಾರೆ. ಅಷ್ಟೇ ಅಲ್ಲಾ.. ಅರ್ಥ ಆಯ್ತಾ ಅಂತ ಆರ್‌ಸಿಬಿ ಫ್ಯಾನ್ಸ್ (Rcb fans)ಕಡೆ ಕಣ್ಣು ಮಿಟುಕಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ (Royal challengers Bangalore)ಇದ್ದ ಹೆಸರು ಬೆಂಗಳೂರು (Bengaluru) ಎಂದು ಬದಲಾಗಬೇಕು ಎಂಬುದು ಅಭಿಮಾನಿಗಳ ಕಳೆದ 16 ವರ್ಷಗಳ(16 years) ಬೇಡಿಕೆಯಾಗಿತ್ತು. ಈ ಬಾರಿ ಆ ಬದಲಾವಣೆ ಪಕ್ಕಾ ಅಂತಿವೆ ಒಂದೊಂದಾಗೇ ರಿಲೀಸ್ ಆಗ್ತಿರುವ ಈ ಪ್ರೋಮೊಗಳು. ಸ್ಟೈಲಿಷ್ (stylish)ಆಗಿ ಹೋಟೆಲ್ ಗೆ ಹೋಗುವ ನಮ್ಮ ಕಿಚ್ಚ (Kichha) 3 ಇಡ್ಲಿ ಆರ್ಡರ್ ಮಾಡ್ತಾರೆ. ರಾಯಲ್ ಎಂಬ ಒಂದು ಇಡ್ಲಿ, ಚಾಲೆಂಜರ್ಸ್ ಎಂಬ ಮತ್ತೊಂದು ಇಡ್ಲಿಯನ್ನ ಹಾಕಿಸಿಕೊಳ್ತಾರೆ. ಬ್ಯಾಂಗಲೋರ್ ಎಂಬ ಇದ್ದಿಯನ್ನ ಬೇಡ ಬೇರೆದು ತಗೊಂಡು ಬಾ ಅಂತ ವಾಪಸ್ ಕಳುಹಿಸ್ತಾರೆ. ನಂತರ ಪ್ರೇಕ್ಷಕರಿಗರ ಅರ್ಥವಾಯ್ತ ? ಅಂತ ಕೇಳ್ತಾರೆ.

ಅಂದ್ರೆ ಬ್ಯಾಂಗಲೋರ್ (Bangalore) ಹೋಗಿ ಬೆಂಗಳೂರು (Bengaluru) ಬರಲಿದೆ ಅನ್ನೋದು ಇದರ ಸುಳಿವು. ಈ ಹಿಂದಿನ ರಿಶಬ್ ಶೆಟ್ಟಿ (Rishab shetty) ಅಭಿನಯದ ಪ್ರೋಮೋದಲ್ಲೂ ಕೋಣಗಳ ಮೂಲಕ ಇದೇ ಸುಳಿವು ಕೊಡಲಾಗಿತ್ತು. ನಂತರ ಶಿವಣ್ಣ (shivaraj kunar) ಇದೀಗ ಕಿಚ್ಚ ಸದೀಪ್ ಪ್ರೋಮೋ ಮೂಲಕ ಈ ಬಾರಿ ಅಭಿಮಾನಿಗಳು ಬಯಸಿದ್ದ ಬದಲಾವಣೆ ಖಂಡಿತ ಆಗಲಿದೆ ಎಂದು ಫ್ರಾಂಚೈಸಿ (franchise) ಹಿಂಟ್ ಕೊಟ್ಟಿದೆ. ಈ ಪ್ರೋಮೋ ಕಂಡು ಆರ್ ಸಿಬಿ ಫ್ಯಾನ್ಸ್ ಫುಲ್ ಗ್ರಿಲ್ ಆಗಿದ್ದಾರೆ.






