ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ (Santosh lad) ಅವರು, ಇತ್ತೀಚೆಗೆ ಭೀಕರವಾಗಿ ಹತ್ಯೆಯಾದ ಅಮಾಯಕ ಯುವತಿ ಅಂಜಲಿ ಅಂಬಿಗೇರ (Anjali ambigera) ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಅಂಜಲಿ ಸಾವಿಗೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ಬೆಳೆದ ಮಗಳನ್ನು ಕಳೆದುಕೊಂಡ ಅವರ ನೋವು ಕಂಡು ನಿಜಕ್ಕೂ ಬೇಸರವಾಯಿತು ಎಂದು ತಿಳಿಸಿದರು.
ನೇಹಾ (Neha hiremat) ಪ್ರಕರಣದಂತೆ ಅಂಜಲಿ ಹತ್ಯೆ ಅಮಾನುಷವಾದುದು. ಇಂತಹ ಮನಸ್ಥಿತಿ ಇರುವ ಸಮಾಜ ವಿರೋಧಿ ಕೃತ್ಯ ನಡೆಸುವುದು ಹುಬ್ಬಳ್ಳಿ (Hubli) ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಆತಂಕಕಾರಿ. ಯುವತಿಯರ ಮೇಲೆ ದೌರ್ಜನ್ಯದ ಬಗ್ಗೆ ಆರಂಭದಲ್ಲೇ ಮಾಹಿತಿ ಪಡೆದು ದೂರು ನೀಡಬೇಕು. ಈ ಬಗ್ಗೆ ಎಲ್ಲರಲ್ಲೂ ಅರಿವು ಇರಬೇಕು. ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದರೆ ಇಲಾಖೆಗೆ ಸಹಾಯವಾಗಲಿದೆ. ಆಗ ಇಂತಹ ದುಷ್ಕೃತ್ಯ ಎಸಗುವವರ ಬಗ್ಗೆ ಜಾಗೃತರಾಗಬಹುದು ಎಂದರು.
ಅಂಜಲಿ ಹತ್ಯೆ ಪ್ರಕರಣವನ್ನು ಸಿಐಡಿಗೆ (CID) ನೀಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಲ್ಲಿ (Home minister) ಒತ್ತಾಯ ಮಾಡಿದ್ದೇನೆ ಎಂದರು. ಸಚಿವ ಸಂತೋಷ್ ಲಾಡ್ ಅವರು ತಮ್ಮ ಸಂತೋಷ್ ಲಾಡ್ ಫೌಂಡೇಶನ್ (Santosh lad foundation) ಮೂಲಕ ಅಂಜಲಿ ಕುಟುಂಬಕ್ಕೆ ವೈಯುಕ್ತಿಕವಾಗಿ 2 ಲಕ್ಷ ರೂಪಾಯಿಗಳ ಧನಸಹಾಯ ಮಾಡಿದರು.