ಬೆಂಗಳೂರು: ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧದ ಮುಂದೆ ಎರಡು ದಿನದ ಹಿಂದೆ ಒಂದು ದರೋಡೆ ಮತ್ತು ಗುಂಪು ಗಲಾಟೆ ಆಗಿರುವ ಘಟನೆ ನಡೆದಿವೆ.
ವಿಧಾನಸೌಧದ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಯುವಕರ ಗುಂಪೊಂದು ಒಬ್ಬ ವಿದ್ಯಾರ್ಥಿ ಮತ್ತು ಆತನ ಸಹೋದರನ ಮೇಲೆ ಹಲ್ಲೆ ನಡೆಸಿ ಡಕಾಯಿತಿ ಮಾಡಿದ್ರೆ, ಹೈಕೋರ್ಟ್ ಫುಟ್ ಪಾತ್ ಮೇಲೆ ನೇಪಾಳಿ ಯುವಕರ ಗುಂಪ ಪರಸ್ಪರ ಹೊಡೆದಾಡಿಕೊಂಡಿದೆ.

ಎರಡು ದಿನದ ಈ ಎರಡು ಘಟನೆ ನಡೆದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಘಟನೆಗಳ ಸಂಬಂಧ ಪ್ರಕರಣ ದಾಖಲಾಗಿದೆ.
ಎರಡು ದಿನದ ಹಿಂದೆ ಸಹೋದರರಿಬ್ಬರು ಸಿನಿಮಾ ನೋಡಿ ವಿಧಾನಸೌಧ ಲೈಟಿಂಗ್ ನೋಡಲು ಬಂದಿದ್ದರು. ಈ ವೇಳೆ ಹೈಕೋರ್ಟ್ ಮುಂಭಾಗ ಇರುವ ಮೆಟ್ರೋ ನಿಲ್ದಾಣದ ಮುಂದೆ ಐದರಿಂದ ಆರು ಜನ ಆಗಂತುಕರು ಬಿಮಲ್ ಗಿರಿ ಎಂಬಾತನ ಮೇಲೆ ಹಲ್ಲೆ ಮಾಡಿ 30 ಸಾವಿರದ ಮೊಬೈಲ್ ಫೋನ್, 9,182 ರೂ. ಹಣ ಡಕಾಯಿತಿ ಮಾಡಿದ್ದಾರೆ.

ಇನ್ನು ಹೈಕೋರ್ಟ್ ಮುಂದಿನ ಫುಟ್ ಪಾತ್ ನಲ್ಲಿ ರಾತ್ರಿ ವೇಳೆ 40-50 ಮಂದಿ ನೇಪಾಳಿ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿ ಲಾಠಿ ಬೀಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಈ ಸಂಬಂಧ ಅಕ್ರಮವಾಗಿ ಗುಂಪು ಸೇರಿ ಗಲಾಟೆ, ಹೊಡೆದಾಟ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.











