• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

77ನೇ ಸ್ವಾತಂತ್ರ್ಯ ದಿನ ಭಾರತೀಯ ಪೌರತ್ವ ಪಡೆದ ಅಕ್ಷಯ್‌ ಕುಮಾರ್

Any Mind by Any Mind
August 15, 2023
in ಇದೀಗ, ಸಿನಿಮಾ
0
ಅಕ್ಷಯ್‌ ಕುಮಾರ್‌
Share on WhatsAppShare on FacebookShare on Telegram

ಬಹಳ ವರ್ಷಗಳ ಬಳಿಕ ಬಾಲಿವಡ್‌ ನಟ ಅಕ್ಷಯ್‌ ಕುಮಾರ್‌ ಈಗ ಭಾರತೀಯ ಪೌರತ್ವ ಪಡೆದಿದ್ದಾರೆ. ಈ ವಿಷಯ ಬಹುತೇಕರ ಹುಬ್ಬೇರುವಂತೆ ಮಾಡುತ್ತದೆ. ಅಕ್ಷಯ್‌ ಅವರಿಗೆ ಭಾರತದ ಪೌರತ್ವ ಇರಲಿಲ್ಲವೇ? ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಾರೆ.

ADVERTISEMENT

ಅಕ್ಷಯ್‌ ಕುಮಾರ್ ಅವರ ಪಂಜಾಬ್‌ನ ಅಮೃತಸನಲ್ಲಿ ಜನಿಸಿದರೂ ತಂದೆ ಹರಿ ಓಂ ಭಾಟಿಯಾ ಕೆನಡಾ ಮೂಲದವರಾಗಿದ್ದರು. ಆದ್ದರಿಂದ ಅಕ್ಷಯ್‌ ಕುಮಾರ್‌ ಕೆನಡಾ ಪೌರತ್ವ ಹೊಂದಿದ್ದರು. ಭಾರತದಲ್ಲಿ ನಟನಾಗಿದ್ದು ಅವರು ಬೇರೆ ದೇಶದ ಪೌರತ್ವ ಹೊಂದಿದ್ದಕ್ಕಾಗಿ ಹಲವಾರು ಟೀಕೆಗಳನ್ನು ಎದುರಿಸಿದರು.

ಅಕ್ಷಯ್‌ ಕುಮಾರ್‌ ಅವರಿಗೆ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವದ ದಿನ ಭಾರತದ ಪೌರತ್ವ ಪಡೆದಿರುವುದು ವಿಶೇಷ.

ಈ ಕುರಿತು ಅಕ್ಷಯ್‌ ಕುಮಾರ್‌ ತಮ್ಮ ಅಧಿಕೃತ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಭಾರತದ ಪೌರತ್ವದ ನೋಂದಣಿ ದಾಖಲೆ ಹಂಚಿಕೊಂಡಿದ್ದಾರೆ.

Dil aur citizenship, dono Hindustani.
Happy Independence Day!
Jai Hind! 🇮🇳 pic.twitter.com/DLH0DtbGxk

— Akshay Kumar (@akshaykumar) August 15, 2023

“ಹೃದಯ ಮತ್ತು ಪೌರತ್ವ ಎರಡೂ ಹಿಂದೂಸ್ಥಾನವಾಗಿವೆ. ಸ್ವಾತಂತ್ರ್ಯ ದಿನದ ಶುಭಾಶಯಗಳು” ಎಂದು ಅಕ್ಷಯ್‌ ಕುಮಾರ್‌ ಬರೆದುಕೊಂಡಿದ್ದಾರೆ.

ಅಕ್ಷಯ್‌ ಕುಮಾರ್‌
ಅಕ್ಷಯ್‌ ಕುಮಾರ್‌

ಸಂದರ್ಶನವೊಂದರಲ್ಲಿ ಸುದ್ದಿವಾಹಿನಿ ಆಜ್‌ತಕ್‌, ರಾಷ್ಟ್ರಪ್ರೇಮ ಕುರಿತು ಕೇಳಿದ ಪ್ರಶ್ನೆಗೆ ಅಕ್ಷಯ್‌ ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

“ಭಾರತ ನನಗೆ ಎಲ್ಲವೂ ಆಗಿದೆ. ನಾನು ಏನೆಲ್ಲ ಗಳಿಸಿದ್ದೇನೆಯೋ, ಏನೆಲ್ಲ ಪಡೆದಿದ್ದೇನೆಯೋ ಅದು ಇಲ್ಲಿಂದಲೇ. ಮರಳಿ ನೀಡುವ ಅವಕಾಶ ದೊರೆತಿರುವುದು ನನ್ನ ಅದೃಷ್ಟ. ಆದರೆ ಜನರು ಏನನ್ನೂ ತಿಳಿಯದೆ ಈ ಬಗ್ಗೆ ಮಾತನಾಡಿದಾಗ ನಿಮಗೆ ಬೇಸರವಾಗುತ್ತದೆ” ಎಂದು ಅಕ್ಷಯ್‌ ಕುಮಾರ್‌ ಹೇಳಿದ್ದರು.

ಈ ಸುದ್ದಿ ಓದಿದ್ದೀರಾ? ʼಕೈಲಾಸʼದಲ್ಲಿ ಕನ್ನಡ ಕಲರವ | ಜೋಗಯ್ಯ ಸಿನಿಮಾ ಹಾಡಿಗೆ ಡ್ರಮ್ಸ್‌ ಬಾರಿಸಿದ ನಿತ್ಯಾನಂದ ; ವಿಡಿಯೊ ವೈರಲ್

ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಅಕ್ಷಯ್‌ ಸಂದರ್ಶನ ನಡೆಸಿದ ನಂತರ ಅಕ್ಷಯ್‌‌ ಕುಮಾರ್‌ ಅವರ ಕೆನಡಾ ಪೌರತ್ವ ಚರ್ಚೆಯ ವಿಷಯವಾಗಿತ್ತು. ಸಂದರ್ಶನದಲ್ಲಿ ಅಕ್ಷಯ್‌ ಕುಮಾರ್‌ ತಮ್ಮ ಕೆನಡಾ ಪಾಸ್‌ಪೋರ್ಟ್‌ ಬಗ್ಗೆ ಮಾತನಾಡಿದ್ದರು.

ಅಕ್ಷಯ್‌ ಕುಮಾರ್‌ ಅವರು 2019ರಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋವಿಡ್‌ ಪಿಡುಗಿನ ಹಿನ್ನೆಲೆ ತಡವಾಗಿತ್ತು.

Tags: 77th Independence Day77ನೇ ಸ್ವಾತಂತ್ರ್ಯೋತ್ಸವakshay kumarBollywoodCanada CitizenshipIndian citizenshipಅಕ್ಷಯ್‌ ಕುಮಾರ್‌ಕೆನಡಾ ಪೌರತ್ವಬಾಲಿವುಡ್ಭಾರತೀಯ ಪೌರತ್ವ
Previous Post

ಕನ್ನಡಮ್ಮನ ಕಂಗಳಿಂದ ಭಾರತಾಂಬೆ ನೋಡೋಣ: ಎಚ್.ಡಿ.ಕುಮಾರಸ್ವಾಮಿ

Next Post

ನೀಟ್‌ ಪರೀಕ್ಷೆ ಖಂಡಿತ ತೆಗೆದುಹಾಕುತ್ತೇವೆ: ಎಂ.ಕೆ.ಸ್ಟಾಲಿನ್

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಎಂ.ಕೆ.ಸ್ಟಾಲಿನ್‌

ನೀಟ್‌ ಪರೀಕ್ಷೆ ಖಂಡಿತ ತೆಗೆದುಹಾಕುತ್ತೇವೆ: ಎಂ.ಕೆ.ಸ್ಟಾಲಿನ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada