• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಬೀದರ್​ಗೆ ವಿಮಾನ ಸೇವೆ: 2 ವಾರಗಳಲ್ಲಿ ವರದಿ ಸಲ್ಲಿಸಲು ನಿರ್ದೇಶಿಸಿದ ಸಚಿವ ಪಾಟೀಲ

ಪ್ರತಿಧ್ವನಿ by ಪ್ರತಿಧ್ವನಿ
July 19, 2024
in Uncategorized
0
ಬೀದರ್​ಗೆ ವಿಮಾನ ಸೇವೆ: 2 ವಾರಗಳಲ್ಲಿ ವರದಿ ಸಲ್ಲಿಸಲು ನಿರ್ದೇಶಿಸಿದ ಸಚಿವ ಪಾಟೀಲ
Share on WhatsAppShare on FacebookShare on Telegram

ಬೆಂಗಳೂರು: ಸ್ಥಗಿತಗೊಂಡಿರುವ ಬೀದರ್ – ಬೆಂಗಳೂರು ನಡುವಿನ ನಾಗರಿಕ ವಿಮಾನ ಸಂಚಾರ ಪುನಾರಂಭಿಸುವ ಕುರಿತಂತೆ ವಿವಿಧ ಖಾಸಗಿ ವಿಮಾನಯಾನ ಸೇವಾ ಸಂಸ್ಥೆಗಳೊಂದಿಗೆ ಚರ್ಚಿಸಿ ಎರಡು ವಾರಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ADVERTISEMENT

ಬೀದರ್ ಉಸ್ತುವಾರಿ ಮತ್ತು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಅವರೊಂದಿಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಸಚಿವರು ಈ ಸೂಚನೆ ನೀಡಿದರು.

ಬೀದರ್ ಮತ್ತು ಬೆಂಗಳೂರು ನಡುವೆ ವಿಮಾನಯಾನ ಸೇವೆ ಪುನಾರಂಭಿಸುವ ಕುರಿತಂತೆ 72 ಆಸನಗಳ ಚಿಕ್ಕ ವಿಮಾನಯಾನ ಸೇವೆ ಒದಗಿಸುವ ವಿವಿಧ ಕಂಪನಿಗಳ ಜೊತೆಯಲ್ಲಿ ಮಾತುಕತೆ ನಡೆಸಿ 2 ವಾರಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸಲು ಸಚಿವ ಪಾಟೀಲ ಸೂಚಿಸಿದರು.ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಸೇರಿದ ಗಡಿ ಜಿಲ್ಲೆ ಬೀದರ್ ಗೆ ವಿಮಾನಯಾನ ಸೇವೆ ಕಲ್ಪಿಸಬೇಕು ಎಂಬ ಜನರ ಹೋರಾಟಕ್ಕೆ ಮಣಿದು 2020ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ ವಿಮಾನ ನಿಲ್ದಾಣದಲ್ಲಿಯೇ ನಾಗರಿಕ ವಿಮಾನಯಾನ ಸೇವೆ ಆರಂಭಿಸಲಾಗಿತ್ತು. ಸ್ಥಗಿತಗೊಂಡಿದ್ದ ವಿಮಾನಯಾನ ಮತ್ತೆ 2022ರಲ್ಲಿ ಪುನಾರಂಭವಾಗಿತ್ತು. ಈಗ ಮತ್ತೆ ಕಳೆದ ಡಿಸೆಂಬರ್ ನಿಂದ ಸಂಪೂರ್ಣ ಸ್ಥಗಿತಗೊಂಡಿದೆ.

ಸೇವಾ ಪೂರೈಕೆದಾರ ಸಂಸ್ಥೆಗಳು, ತಮಗೆ ಉಡಾನ್ ಸಬ್ಸಿಡಿ ನಿಲ್ಲಿಸಿರುವ ಕಾರಣ ವಿಮಾನ ಸೇವೆ ಒದಗಿಸಲು ಸಾಧ್ಯವಿಲ್ಲ. ಮತ್ತೆ ಸಬ್ಸಿಡಿ ನೀಡುವುದಾದರೆ ಸೇವೆ ಒದಗಿಸಲು ಸಿದ್ಧ ಎನ್ನುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದಲೇ ಸಬ್ಸಿಡಿ ಹಣ ಭರಿಸುವ ಕುರಿತಂತೆ ವಿಮಾನಯಾನ ಸೇವಾ ಪೂರೈಕೆದಾರರೊಂದಿಗೆ ಮಾತುಕತೆ ನಡೆಸಿ, ಜಿಲ್ಲೆಯ ಜನರಿಗೆ ವಿಮಾನಯಾನ ಸೇವೆ ಪುನಾರಂಭಿಸಬೇಕು ಎಂದು ಹೇಳಿದರು.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'CM Siddaramaiah‌Congress PartyDCM DK ShivakumarIswara KhandreM B PatilRahim Khan
Previous Post

ಅಂತರ್ ಜಿಲ್ಲಾ ವಾಹನ ಚೋರನ ಬಂದನ: ೧೧ ದಾಖಲೆಗಳು ಇಲ್ಲದ ವಾಹನ ವಶಕ್ಕೆ:

Next Post

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭಾಷಣ ಮೋದಿ ವಿರುದ್ದ ಟೀಕೆ ಎಂದ ಜೈರಾಮ್‌ ರಮೇಶ್‌

Related Posts

ನೂತನ ನಾಯಕನಿಂದ ಬಾಂಗ್ಲಾದಲ್ಲಿ ಹೊಸ ರಾಜಕೀಯ ಶಕೆ ಆರಂಭ : ತಾರಿಕ್‌ ರೆಹಮಾನ್‌ಗೆ ಮೋದಿ ಶುಭಹಾರೈಕೆ
Top Story

ನೂತನ ನಾಯಕನಿಂದ ಬಾಂಗ್ಲಾದಲ್ಲಿ ಹೊಸ ರಾಜಕೀಯ ಶಕೆ ಆರಂಭ : ತಾರಿಕ್‌ ರೆಹಮಾನ್‌ಗೆ ಮೋದಿ ಶುಭಹಾರೈಕೆ

by ಪ್ರತಿಧ್ವನಿ
February 13, 2026
0

ನವದೆಹಲಿ  : ಬಾಂಗ್ಲಾ ದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾಗಿರುವ ತಾರಿಕ್‌ ರೆಹಮಾನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿದ್ದಾರೆ. https://youtu.be/RGk2Tr-x8Io?si=HPPegrJ0MkDCTxgq ಹಲವು ವರ್ಷಗಳ...

Read moreDetails
ಭಾರತದ ಅತ್ಯಂತ ಶ್ರೀಮಂತ ಗಾಯಕಿ ಯಾರು?

ಭಾರತದ ಅತ್ಯಂತ ಶ್ರೀಮಂತ ಗಾಯಕಿ ಯಾರು?

February 8, 2026
ಕೈ ಪಾಳಯದಲ್ಲಿ ಸಂಚಲನ!: ದಲಿತ, ಲಿಂಗಾಯತ ನಾಯಕರ ರಹಸ್ಯ ಸಭೆಯಲ್ಲಿ ಚರ್ಚೆಯಾಗಿದ್ದೇನು..?

ಕೈ ಪಾಳಯದಲ್ಲಿ ಸಂಚಲನ!: ದಲಿತ, ಲಿಂಗಾಯತ ನಾಯಕರ ರಹಸ್ಯ ಸಭೆಯಲ್ಲಿ ಚರ್ಚೆಯಾಗಿದ್ದೇನು..?

February 6, 2026
ಮಹಾವೀರ ಜಯಂತಿಯಂದು ಬ್ಯಾಂಕ್ ರಜೆ ರದ್ದು: ಆರ್ ಬಿ ಐ ಮಹತ್ವದ ತೀರ್ಮಾನ 

ಮಹಾವೀರ ಜಯಂತಿಯಂದು ಬ್ಯಾಂಕ್ ರಜೆ ರದ್ದು: ಆರ್ ಬಿ ಐ ಮಹತ್ವದ ತೀರ್ಮಾನ 

February 4, 2026
ಮತ್ತೆ ಅಲರ್ಟ್ ಆಯ್ತಾ ಡಿಕೆ ಟೀಂ..? : ಸಿದ್ದರಾಮಯ್ಯ ಬಜೆಟ್‌ಗೂ ಅಡಚಣೆ..?

ಮತ್ತೆ ಅಲರ್ಟ್ ಆಯ್ತಾ ಡಿಕೆ ಟೀಂ..? : ಸಿದ್ದರಾಮಯ್ಯ ಬಜೆಟ್‌ಗೂ ಅಡಚಣೆ..?

February 4, 2026
Next Post
ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭಾಷಣ ಮೋದಿ ವಿರುದ್ದ ಟೀಕೆ ಎಂದ ಜೈರಾಮ್‌ ರಮೇಶ್‌

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಭಾಷಣ ಮೋದಿ ವಿರುದ್ದ ಟೀಕೆ ಎಂದ ಜೈರಾಮ್‌ ರಮೇಶ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada